ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 09.07.2020 ರಂದು   ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ತೊಪ್ಪನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಕಳವಂಚಿ ಗ್ರಾಮದ ಸರ್ವೆ ನಂ 5/5 ರ ವಿಸ್ತೀರ್ಣದ 5 ಗುಂಟೆ ಜಮೀನನ್ನು ಸರ್ವೆ ಮಾಡಿಸುವ ಸಲುವಾಗಿ ರಾಮಮೂರ್ತಿ ಬಿನ್ ಲೇಟ್ ನಂಜಪ್ಪ ಎಂಬುವರು ದಿನಾಂಕ 06.01.2020 ರಂದು ಬಂಗಾರಪೇಟೆ ತಹಸೀಲ್ದಾರ್ ರವರಾದ ಶ್ರೀ.ಚಂದ್ರಮೌಳೇಶ್ವರ ರವರಿಗೆ ಮನವಿ ನೀಡಿದ್ದು, ಕೋವಿಡ್-19 & ಎಸ್.ಎಸ್.ಎಲ್.ಸಿ ಪರೀಕ್ಷೆಗಳಿದ್ದ ಕಾರಣ, ಸರ್ವೆಕಾರ್ಯ ವಿಳಂಬ ಮಾಡಿ, ದಿನಾಂಕ 09.07.2020 ರಂದು ಬೆಳಿಗ್ಗೆ ಈ ಕೇಸಿನ ಪಿರ್ಯಾದಿ ಸಂತೋಷ್, ಸರ್ವೇವರ್, ತಾಲ್ಲೂಕು ಕಛೇರಿ, ಬಂಗಾರಪೇಟೆ ರವರು ಹಾಗೂ ರೆವೆನ್ಯೂ ಅಧಿಕಾರಿಗಳು ಕಾಮಸಮುದ್ರಂ ಪೊಲೀಸರ ಸಮಕ್ಷಮ ಕಳವಂಚಿ ಗ್ರಾಮಕ್ಕೆ ಬಂದು ಸರ್ವೆಕಾರ್ಯವನ್ನು ಮಾಡಿದ್ದು, ಮದ್ಯಾಹ್ನ ಸುಮಾರು 3.00 ಗಂಟೆಗೆ ಬಂಗಾರಪೇಟೆ ತಹಸೀಲ್ದಾರ್ ರವರಾದ ಶ್ರೀ.  ಶ್ರೀ.ಚಂದ್ರಮೌಳೇಶ್ವರ ರವರು ಕಳವಂಚಿ ಗ್ರಾಮಕ್ಕೆ ಬಂದು ಸರ್ವೆಕಾರ್ಯವನ್ನು ಮುಂದುವರೆಸಿ, ಜಾಗಗಳನ್ನು ಗುರ್ತಿಸಿದ್ದು, ರಾಮಮೂರ್ತಿ ರವರ ಕಡೆಯಿಂದ ಎರಡು ಬಾಂಧಿಕಲ್ಲುಗಳನ್ನು ನೆಟ್ಟಿಸಿದ್ದು, ಆ ಸಮಯದಲ್ಲಿ ಆರೋಪಿಳಾದ ಆ1-ವೆಂಕಟಪತಿ & ಆ2-ಹೇಮಾವತಮ್ಮ ತೊಪ್ಪನಹಳ್ಳಿ ಗ್ರಾಮದ ವಾಸಿಗಳು ‘ಕಲ್ಲುಗಳನ್ನು ನೆಡಬೇಡಿ’ ಎಂದು ಗಲಾಟೆ ಮಾಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಆರೋಪಿಗಳಿಬ್ಬರೂ ತೊಪ್ಪನಹಳ್ಳಿ ಗ್ರಾಮದ ಸರ್ವೆ ನಂ 4 ರಲ್ಲಿ ಆರೋಪಿಗಳಿಗೆ ಸೇರಿದ ಜಮೀನನ್ನು ಸರ್ವೆ ಮಾಡಿಕೊಡಲು ತಿಳಿಸಿದ್ದು, ಅದರಂತೆ ರೆವೆನ್ಯೂ ಅಧಿಕಾರಿಗಳು ಸರ್ವೆ ಮಾಡಿ, ಅಳತೆಯನ್ನು ಗುರ್ತಿಸಿ, ರೆವೆನ್ಯೂ ಅಧಿಕಾರಿಗಳು ಬಾಂಧಿಕಲ್ಲುಗಳನ್ನು ನೆಡುತ್ತಿದ್ದಾಗ, ಸಮೀಪದಲ್ಲಿಯೇ ನಿಂತಿದ್ದ ತಹಸೀಲ್ದಾರ್ ರವರ ಬಳಿ ಆರೋಪಿ ವೆಂಕಟಪತಿ ರವರು ‘ನಾವು ಹೇಳಿದರೂ ನೀವು ಬಾಂಧಿಕಲ್ಲುಗಳನ್ನು ನೆಡುತ್ತಿದ್ದೀರಾ’ ಎಂದು ಗಲಾಟೆ ಮಾಡಿ, ಕೂಗಾಡಿಕೊಂಡು, ಆತನ ಕೈಯಲ್ಲಿದ್ದ ಒಂದು ಚಾಕುವನ್ನು ಹಿಡಿದುಕೊಂಡು ಏಕಾಏಕಿ ತಹಸೀಲ್ದಾರ್ ರವರ ಎದೆಗೆ ಚುಚ್ಚಿದ್ದರಿಂದ ತಹಸೀಲ್ದಾರ್ ಶ್ರೀ ಚಂದ್ರಮೌಳೇಶ್ವರ ರವರು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು, ಕೂಡಲೇ ಚಿಕಿತ್ಸೆಗೆ ಕಾಮಸಮುದ್ರಂನ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಂಡು ಬಂದು, ನಂತರ ಅಲ್ಲಿಂದ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ತಹಸೀಲ್ದಾರ್ ರವರು ಮೃತಪಟ್ಟಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಶ್ರೀ. ಬಿ.ಎಸ್. ನಾಗರಾಜ್ ಬಿನ್ ಲೇಟ್ ಬಿ. ಸಂಜೀವಿ,  ಸುಮಾರು 45 ವರ್ಷ, ಸ್ವಂತ ಸ್ಥಳ ಆಸೀಪ್ ನಗರ, ಹೈದರಾಬಾದ್, ತೆಲಂಗಾಣ ರಾಜ್ಯ ರವರು ಕೆ.ಜಿ.ಎಫ್. ಬಿ.ಇ.ಎಂ.ಎಲ್. ಕಾರ್ಖಾನೆ ಕೆಲಸ ಮಾಡಿಕೊಂಡು,  ಒಂದು ವರ್ಷದಿಂದ ಈ ಕೇಸಿನ ಪಿರ್ಯಾದಿ ಬಸವರಾಜ್, ೧ನೇ ಟೈಪ್ ಬೆಮಲ್ ನಗರ ರವರ  ಪಕ್ಕದ ಮನೆ ಕ್ವಾಟ್ರಸ್ ನಂ.145 ರಲ್ಲಿ ಒಬ್ಬರೆ ವಾಸವಾಗಿದ್ದು, ಈತನಿಗೆ ಮದ್ಯಪಾನ ಸೇವನೆ ಮಾಡುವ ಅಭ್ಯಾಸವಿದ್ದು, ದಿನಾಂಕ.09-07-2020 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ಪಿರ್ಯಾದಿಯು ಮನೆಯಿಂದ ಹೊರಗಡೆ ಬಂದಾಗ ನಾಗರಾಜ್ ರವರ ಮನೆಯಿಂದ ದುರ್ವಾಸನೆ ಬರುತ್ತಿದ್ದು, ಸದರಿ ವಿಷಯವನ್ನು ಬಿ.ಇ.ಎಂ.ಇ.ಎ ಸಂಘದ ಅಧಿಕಾರಿಗಳಿಗೆ ತಿಳಿಸಿದ್ದು, ಅದರಿ ಅಧಿಕಾರಿಗಳು  ಬಂದು ನಾಗರಾಜ್ ರವರ ಮನೆಯ ಕಿಟಕಿಯಿಂದ ನೋಡಿದಾಗ ಬಿ.ಎಸ್. ನಾಗರಾಜ್ ರವರು ಮನೆಯ ಹಾಲ್ ನಲ್ಲಿರುವ ಕಬ್ಬಿಣದ ಸೋಪಾ ಮೇಲೆ ಮಲಗಿಕೊಂಡು ಮೃತಪಟ್ಟಿರುತ್ತಾರೆ. ಬಿ.ಸ್.ನಾಗರಾಜ್ ರವರಿಗೆ ಮದ್ಯಪಾನ ಸೇವನೆ ಮಾಡುವ ಹವ್ಯಾಸವಿದ್ದು, ಈತನು ಅತಿಯಾಗಿ ಮದ್ಯಪಾನ ಸೇವನೆ ಮಾಡಿ ಶೀಥದಿಂದಲೋ, ಹೃದಯಾಘಾತದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಮೃತಪಟ್ಟಿರುತ್ತಾರೆ.

– ಕನ್ನ ಕಳುವು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದೀಪಕ್‌ ಬಿನ್ ಮೂರ್ತಿ, ಸ್ವಾಮಿನಾಥಪುರಂ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್  ರವರು ರಾಬರ್ಟ್ ಸನ್ ಪೇಟೆ 1 ನೇ ಎಂ.ಜಿ. ಮಾರ್ಕೇಟ್ ನಲ್ಲಿ ಶಾಪ್ ನಂ. 651-652 ರಲ್ಲಿ  ಓಂ  ಫ್ಯಾನ್ಸಿ ಸ್ಟೋರ್ಸ್ ಅಂಗಡಗೆ  ದಿನಾಂಕ.08.07.2020 ರಂದು ಮಧ್ಯಾಹ್ನ 2.00 ಗಂಟೆಗೆ ಬೀಗ ಹಾಕಿಕೊಂಡು ಮನೆಗೆ ಹೋಗಿ, ದಿನಾಂಕ 09.07.2020 ರಂದು ಬೆಳಿಗ್ಗೆ 07.30 ಗಂಟೆಗೆ ಅಂಗಡಿ ಬಳಿ ಹೋಗಿ ನೋಡಲಾಗಿ, ಯಾರೋ ಕಳ್ಳರು  ಶೆಲ್ಟರ್  ಡೋರ್ ಲಾಕ್ ಬೀಗಗಳನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಅಂಗಡಿ ಒಳಗೆ ಪ್ರವೇಶಿಸಿ, ಅಂಗಡಿಯಲ್ಲಿದ್ದ 20,000/- ರೂ, ಬೆಲೆ ಬಾಳುವ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

Leave a Reply

Your email address will not be published. Required fields are marked *