೭೪ನೇ ಸ್ವಾತಂತ್ರ್ಯ ದಿನಾಚರಣೆ

ಪ್ರತಿಯೊಬ್ಬರು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ದೇಶಾಭಿಮಾನ ಮೆರೆಯುವ ಮೂಲಕ ರಾಷ್ಟ್ರದ ಸರ್ವತೋಮುಖಾಭಿವೃದ್ದಿಗೆ ಪಣ ತೊಡಬೇಕೆಂದು ನೂತನ ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಕರೆ ನೀಡಿದರು.

ಅವರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶನಿವಾರದಂದು ಬೆಳಿಗ್ಗೆ ೦೮.೦೦ ಗಂಟೆಗೆ ೭೪ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಮಾತನಾಡಿ, ಪ್ರತಿಯೊಬ್ಬ ಜನಸಾಮಾನ್ಯರಿಗೂ ದೇಶಾಭಿಮಾನವಿರಬೇಕು, ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ದೇಶದ ಬಗ್ಗೆ ಅಕ್ಕರೆ ಮೂಡಿಸುವ ಕಾರ್ಯವಾಗಬೇಕು, ಎಲ್ಲರೂ ಕೈಗೂಡಿಸಿದ್ದಲ್ಲಿ ದೇಶದ ಸರ್ವತೋಮುಖಾಭಿವೃದ್ದಿ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಿ.ಕೆ. ಉಮೇಶ್, ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಶಾಖಾಧೀಕ್ಷಕರಾದ ಎ.ನಜೀಮಾಬಾನು, ಎಂ.ಮೂರ್ತಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸೂರ್ಯಪ್ರಕಾಶ್, ಮುಸ್ತಾಕ್‌ಪಾಷ, ವೆಂಕಟರಮಣಪ್ಪ, ಶಿವರಾಜ್, ವೆಂಕಟೇಶಮೂರ್ತಿ, ಚಂದ್ರಶೇಖರ್ ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿಗಳು ಹಾಜರಿದ್ದರು.

ಆರ್.ಪಿ.ಐ. ಟಿ.ಮಂಜುನಾಥ ಅವರ ನೇತೃತ್ವದಲ್ಲಿ ಆಕರ್ಷಕ ರೀತಿಯಲ್ಲಿ ಪಥಸಂಚಲನ, ಡಿ.ಎ.ಆರ್. ಪೊಲೀಸ್ ವಾದ್ಯವೃಂದದಿಂದ ರಾಷ್ಟ್ರಗೀತೆ ಗಾಯನ ಹಾಗೂ ಪೊಲೀಸ್ ಕುಸುಮಗಳು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *