ಪತ್ರಿಕಾ ಪ್ರಕಟಣೆ -ಡಿಎಆರ್ ನಲ್ಲಿ ನಗರ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಕೆಜಿಎಫ್ ಪೊಲೀಸ್ ಜಿಲ್ಲೆಯ ಡಿ.ಎ.ಆರ್.ನಲ್ಲಿ ಹೊಸದಾಗಿ ನಗರ ಕೇಂದ್ರ ಗ್ರಂಥಾಲಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಉದ್ಘಾಟಿಸಿ, ಸಮಸ್ತ ನಾಗರೀಕರು ಇದರ ಸದುಪಯೋಗ ಪಡೆಯುವಂತೆ ಕೋರಿದರು. ದಿನಾಂಕ 20.04.2021 ರಂದು ಬೆಳಿಗ್ಗೆ ಚಾಂಫೀಯನ್‌ರೀಫ್ಸ್ ಡಿಎಆರ್ ಮೈದಾನ ಎದುರಿನಲ್ಲಿ ಸರ್ಕಾರದ ವತಿಯಿಂದ ಹೊಸದಾಗಿ ನಗರ ಕೇಂದ್ರ ಗ್ರಂಥಾಲಯವನ್ನು ಉದ್ಘಾಟಿಸಿ, ಮಾತನಾಡಿ ಗ್ರಂಥಾಲಯ ಇಲಾಖೆಯವರು ದಿನಪತ್ರಿಕೆ, ವಾರಪತ್ರಿಕೆಗಳು ಸೇರಿದಂತೆ ಎಲ್ಲಾ ರೀತಿಯ ಪುಸ್ತಕ ಬಂಡಾರವನ್ನು ಪ್ರಾರಂಭಿಸಿದ್ದು, ಡಿ.ಎ.ಆರ್. ಪೊಲೀಸ್ ಕ್ವಾರ್ಟಸ್ಸ್ ಮತ್ತು ಸುತ್ತಮುತ್ತಲಿನ ಸಮಸ್ತ ನಾಗರೀಕ ಬಂಧುಗಳು, ಯುವಕರು, ವಿದ್ಯಾರ್ಥಿಗಳು ನೂತನ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುವುದು ಎಂದು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಕೆಜಿಎಫ್ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪಿ. ವತ್ಸಲಾ ವಸಂತಿ, ಆರ್.ಎಸ್. ವೆಂಕಟಮ್ಮ, ಡಿವೈಎಸ್ಪಿ ಬಿ.ಕೆ.ಉಮೇಶ್, ಆರ್‌ಪಿಐ ವಿ.ಸೋಮಶೇಖರ್, ಆರ್‌ಎಸ್‌ಐ ಜಗದೀಶ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *