ಪತ್ರಿಕಾ ಪ್ರಕಟಣೆ : ಕೆಜಿಎಫ್ : ಸಿವಿಲ್ ಪೊಲೀಸ್ ನೌಕರಿಗೆ ಅರ್ಜಿ ಸಲ್ಲಿಸಲು ಜೂನ್ ೨೫ ಕೊನೆಯ ದಿನ

ಪತ್ರಿಕಾ ಪ್ರಕಟಣೆ : ಕೆಜಿಎಫ್ : ಸಿವಿಲ್ ಪೊಲೀಸ್ ನೌಕರಿಗೆ ಅರ್ಜಿ ಸಲ್ಲಿಸಲು ಜೂನ್ ೨೫ ಕೊನೆಯ ದಿನ
ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿಯಿರುವ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಮೇ ೨೫ ರಿಂದ ಪ್ರಾರಂಭಗೊಂಡಿದ್ದು, ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜೂನ್ ೨೫ ಕೊನೆಯ ದಿನವಾಗಿದೆ.
ದ್ವಿತೀಯ ಪಿ.ಯು.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಅಥವಾ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಮೇ ೨೫ ರಿಂದ ಜೂನ್ ೨೫ರ ಒಳಗಾಗಿ ಸಲ್ಲಿಸ ಬಹುದಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ ಹಾಗೂ ಅಧಿಸೂಚನೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ https://recruitment.ksp.gov.in ಅನ್ನು ಅವಲೋಕಿಸ ಬಹುದು ಅಥವಾ ಪೊಲೀಸ್ ನೇಮಕಾತಿ ಕಛೇರಿಯ ದೂರವಾಣಿ ಸಂಖ್ಯೆ: 080-22943346 ಅನ್ನು ಸಂಪರ್ಕಿಸ ಬಹುದಾಗಿದೆ.

Leave a Reply

Your email address will not be published. Required fields are marked *