ದಿನದ ಅಪರಾಧಗಳ ಪಕ್ಷಿನೋಟ17ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 16.07.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಜೇಶ್‌ ಬಿನ್ ರಾಜಶೇಖರನ್‌, ಎಂ.ವಿ ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು  ದಿನಾಂಕ: 16-07-2020 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ROYAL ENFIELD ದ್ವಿಚಕ್ರ ವಾಹನ ಸಂಖ್ಯೆ KA-08-Y-5224 ರಲ್ಲಿ ಬೇತಮಂಗಲ- ಬಂಗಾರಪೇಟೆ ಮುಖ್ಯ ರಸ್ತೆ, ಬೆಮಲ್ ನಗರ ಶ್ರೀನಗರದ ಎದುರು ಲೂಯಿಸ್ ಪಾಲ್ ರವರ ಪೀನಲ್ ಗಾರ್ಡನ್ ಚರ್ಚ್ ಮುಂಬಾಗ ಬರುತ್ತಿರುವಾಗ, ಎದುರುಗಡೆಯಿಂದ ಶ್ರೀರಾಮ್ ಎಂಬುವನು TVS STAR CITY PLUS  ದ್ವಿಚಕ್ರ ವಾಹನ ಸಂಖ್ಯೆ KA 08 V-5246 ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ದೂರುದಾರರು ಮತ್ತು ಆರೋಪಿ ಶ್ರೀರಾಮ್ ರವರುಗಳು ವಾಹನ ಸಮೇತ ಕೆಳಗೆ ಬಿದ್ದಾಗ  ಇಬ್ಬರಿಗೂ ರಕ್ತಗಾಯಗಳಾಗಿರುತ್ತದೆ.

 

– ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆ ಹಾಕಿರುವ ಸಂಬಂಧ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೆಂಪೇಗೌಡ ಬಿನ್ ಗೋವಿಂದಪ್ಪ, ಕಾಮಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ ಕೆ. ಅಮರೇಶ್ ರವರು & ಆರೋಪಿಗಳಾದ ಶ್ರೇಯಸ್‌, ಸುಹಾ‌ಸ್‌ ಮತ್ತು ಶ್ಯಾಮಲಮ್ಮ ರವರು ಬೆಂಗಳೂರಿನಲ್ಲಿ ಷೇರು ಮಾರುಕಟ್ಟೆಗೆ ಸಂಬಂದಿಸಿದ ಕಚೇರಿ ಸ್ಥಾಪಿಸಿದ್ದು, ಷೇರು ಮಾರುಕಟ್ಟೆ ಲಾಕ್ ಡೌನ್ ನಿಂದ ಕುಸಿದಿದ್ದು, ಕಳೆದ ಜೂನ್ 18 ರಂದು ಕೆ. ಅಮರೇಶ್ ರವರ ಮೇಲೆ ಬೆಂಗಳೂರಿನಲ್ಲಿ ಆರೋಪಿಗಳು ಹಲ್ಲೆ ಮಾಡಿ, ಆತನ ಬಳಿಯಿದ್ದ ಎರಡು ಚೆಕ್ ಗಳಿಗೆ ಸಹಿ ಮಾಡಿಸಿಕೊಂಡಿದ್ದು, ಆರೋಪಿಗಳಿಗೆ ಹಣ ಕೊಡಬೇಕಾಗಿದ್ದರಿಂದ ಜೂನ್ 20 ರಂದು ದೂರುದಾರರು ಜಮೀನನ್ನು ಕ್ರಯ ಮಾಡಿಕೊಟ್ಟಿದ್ದರೂ ಸಹ ಆರೋಪಿಗಳು ಅಮರೇಶ್ ರವರ ಮೊಬೈಲ್ ಗೆ ಕರೆ ಮಾಡಿ, ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಕುಪ್ಪಮ್ಮ, ಪಚ್ಚಾರ್‍ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ ಅಶೋಕ್ ಕುಮಾರ್, 23 ವರ್ಷ ರವರಿಗೆ ಐದು ವರ್ಷಗಳಿಂದ ಫಿಟ್ಸ್‌‌ ಖಾಯಿಲೆ ಹಾಗೂ ಹೊಟ್ಟೇನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೇ ಇದ್ದುದರಿಂದ ಹಾಗೂ ದಿನಾಂಕ 16.07.2020 ರಂದು ಸಹ ಹೊಟ್ಟೇನೋವು ಬಂದಿದ್ದರಿಂದ ಅಶೋಕ್ ಕುಮಾರ್ ರವರು ಜೀವನದಲ್ಲಿ ಜಿಗುಪ್ಸೆಗೊಂದು ಬೆಳಿಗ್ಗೆ 10.00 ಗಂಟೆಯಿಂದ ಮದ್ಯಾಹ್ನ 1.00 ಗಂಟೆಡಯ ಮದ್ಯೆ ಅವರ ಜಮೀನಿನಲ್ಲಿರುವ ಹುಣಸೆ ಮೆರಕ್ಕೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವಿಜಯಕುಮಾರಿ, ಫಿಟ್ಟರ್ಸ್‌ ಬ್ಲಾಕ್‌, ಉರಿಗಾಂ, ಕೆ.ಜಿ.ಎಫ್ ರವರ ಗಂಡ ವಿಜಯಕುಮಾರ್ ರವರಿಗೆ ಸುಮಾರು 2 ತಿಂಗಳ ಹಿಂದಿನಿಂದ ಹೊಟ್ಟೆನೋವು ಬರುತ್ತಿದ್ದು, ಚಿಕಿತ್ಸೆಕೊಡಿಸಿದರೂ ಸಹಾ ವಾಸಿಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:16.07.2020 ರಂದು ಮದ್ಯಾಹ್ನ 2.00 ಗಂಟೆಯಲ್ಲಿ  ಪಿಟ್ಟರ್ಸ್ ಬ್ಲಾಕ್ ಪಕ್ಕದಲ್ಲಿರುವ ರೈಲ್ವೇ ಟ್ರಾಕ್ ಬಳಿ ಯಾವುದೋ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *