ದಿನದ ಅಪರಾಧಗಳ ಪಕ್ಷಿನೋಟ 31 ನೇ ಆಗಸ್ಟ್‌2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 30.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಇತರೆ :  01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಲತ್ಕಾರದ ವಸೂಲಿ (extortion)ಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕುಮಾರ್‍ ಬಿನ್ ರಂಗಸ್ವಾಮಿ, ಪಾರಾಂಡಹಳ್ಳಿ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ. 27.08.2020 ರಂದು ರಾತ್ರಿ 9.15 ಗಂಟೆಗೆ ರಾಬರ್ಟ್ ಸನ್ ಪೇಟೆಯ ಸಲ್ಡಾನ ವೃತ್ತದಲ್ಲಿರುವ ಮದ್ಯದ ಅಂಗಡಿಯಲ್ಲಿ ದೂರುದಾರರು ಇರುವಾಗ ಎಡ್ವಿನ್, ಸುಸೈಪಾಳ್ಯ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ಎಂಬುವರು ಒಂದು ಉದ್ದವಾದ ಲಾಂಗ್ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ವೈನ್ಸ್ ಮುಂದೆ ನಿಂತು ದೂರುದಾರರಿಗೆ 2 ಬೀರು ಬಾಟಲಿಗಳ್ಳನ್ನಾದರೂ ಅಥವಾ ಹಣವನ್ನಾದರು ಕೊಡು ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು ಬೆದರಿಸಿದ್ದು, ದೂರುದಾರರು ಆತನ ಬೆದರಿಕೆಗೆ ಭಯಬೀತನಾಗಿ ವೈನ್ಸ್ ನಲ್ಲಿದ್ದ 2 ಬೀರು ಬಾಟಲಿಗಳನ್ನು ಕೊಟ್ಟಿದ್ದು, ಅದನ್ನು ತೆಗೆದುಕೊಂಡು ಸಲ್ಡಾನ ವೃತ್ತದ ಕಡೆ ಹೋಗಿ ರಸ್ತೆಯ ಮಧ್ಯೆ ನಿಂತು ಲಾಂಗ್ ಕತ್ತಿಯನ್ನು ಬೀಸುತ್ತಾ ರಸ್ತೆಯಲ್ಲಿ ಹೋಗಿ ಬರುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡಿರುತ್ತಾನೆಂದು ದೂರು.

ಆಸ್ವಾಭಾವಿಕ ಮರಣ:-01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್‍ಯಾದಿ ವೆಂಕಟನರಸಮ್ಮ, ಶಾಂತಿ ನಗರ, ಬಂಗಾರಪೇಟೆ ರವರ ಗಂಡನಾದ ಮಲ್ಲಾದ್ರಿ ರೆಡ್ಡಿ, ೫೦ ವರ್ಷ ರವರಿಗೆ 2-3 ವರ್ಷಗಳಿಂದ ತಲೆ ನೋವು ಮತ್ತು ಗ್ಯಾಸ್ಟಿಕ್ ಕಾಯಿಲೆ ಇದ್ದು ನಾಟಿ ಔಷದಿಯನ್ನು ಕೊಡಿಸುತ್ತಿದ್ದರೂ ಸಹ ವಾಸಿಯಾಗದೇ ಇದ್ದು , ದಿನಾಂಕ 30.08.2020 ರಂದು ರಾತ್ರಿ ಸುಮಾರು 10.00 ಗಂಟೆಗೆ ತಮ್ಮ ಅಂಗಡಿಯಲ್ಲಿರುವ ಜಿಂಗ್ ಶೀಟ್‌ಗೆ ಆಳವಡಿಸಿರುವ ಪೈಪ್‌ಗೆ ಟೈನ್ ದಾರವನ್ನು ಪದರುಗಳು ಮಾಡಿಕೊಂಡು ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡಿದ್ದು, ನೇಣಿನಿಂದ ಇಳಿಸಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ರಾತ್ರಿ ಸುಮಾರು 11-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

 

 

Leave a Reply

Your email address will not be published. Required fields are marked *