ದಿನದ ಅಪರಾಧಗಳ ಪಕ್ಷಿನೋಟ 30ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 29.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಕನ್ನ ಕಳುವು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:-18.03.2021 ರಂದು ಬೆಳಗ್ಗೆ 10:00 ಗಂಟೆಯಲ್ಲಿ ದೂರುದಾರರಾದ ಶ್ರೀಮತಿ. ಕಾಂತಾಮಣಿ ಕೊಂ ವೆಂಕಟೇಶ್‌, ನ್ಯೂಟೌನ್‌, ಬೇತಮಂಗಲ ರವರು ಮಗಳು ಸವಿತಾ ರೊಂದಿಗೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿ, ದಿನಾಂಕ:-28.03.2021 ರಂದು ಸಂಜೆ 6:45 ಗಂಟೆಗೆ ವಾಪಸ್ ಬಂದು ನೋಡಲಾಗಿ ಮನೆಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಹೊಡೆದು,  ರೂಂ ನಲ್ಲಿದ್ದ 2 ಬೀರುವುಗಳ ಒಳಗಿನ ಲಾಕರ್ ಗಳನ್ನು ಕಿತ್ತು ಅದರಲ್ಲಿದ್ದ 1)12 ಗ್ರಾಂ ತೂಕದ ಓಲೆ ಮತ್ತು ಮಾಟಿ, 2) 3 ಗ್ರಾಂ ತೂಕದ ನಾಲ್ಕು ಬಂಗಾರದ ಉಂಗುರಗಳು 3) 26 ಗ್ರಾಂ ತೂಕದ ಬಂಗಾರದ ಬ್ರಾಸ್ ಲೇಟ್,  4) 4 ಗ್ರಾಂ ತೂಕದ ಬಂಗಾರದ ಓಲೆ ಜುಮುಕಿ, 5) 15 ಗ್ರಾಂ ತೂಕದ ಬಂಗಾರದ ಕತ್ತಿನ ಸರ,   6)ಒಟ್ಟು 400 ಗ್ರಾಂ ತೂಕದ ಬೆಳ್ಳಿಯ ಒಂದು ಜೊತೆ ಕಾಲು ಚೈನ್ ಮತ್ತು ಒಂದು ಜೊತೆ ಕಾಲು ಕಡಗ ಹಾಗೂ ಒಂದು ಕೈಬಳೆ, 7) 44,000 ಸಾವಿರ ನಗದು ಹಣ  ಒಟ್ಟು 3,09,000/- ರೂ ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜಾನುವಾರು ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವರಾಜ್ ಬಿನ್ ನಾರಾಯಣಸ್ವಾಮಿ, ಚಲಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 24.03.2021 ರಂದು ರಾತ್ರಿ 10-00 ಗಂಟೆಗೆ 26 ಕುರಿಗಳನ್ನು ಕುರಿಗಳ ಶೇಡ್ ನಲ್ಲಿ ಹಾಕಿ, ಮನೆಯಲ್ಲಿ ಮಳಗಿ ನಂತರ ದಿನಾಂಕ 25.03.2021 ರಂದು ಬೆಳಿಗ್ಗೆ 06-00 ಗಂಟೆಗೆ ಹೋಗಿ ನೋಡಲಾಗಿ 26 ಕುರಿಗಳು ಯಾರೊ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 1,50,000/- ರೂ ಬಾಳುವುದಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ :  01

 

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ.   ದೂರುದಾರರಾದ ಶ್ರೀಮತಿ. ಮುನ್ನಿ, ಮಸ್ಕಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ಮಗನಾದ ಏಜಾಜ್,  28 ವರ್ಷ ರವರಿಗೆ 1 ವರ್ಷದಿಂದ  ಹೊಟ್ಟೆ ನೋವು ಬರುತ್ತಿದ್ದು ಚಿಕಿತ್ಸೆ ಕೊಡಸಿದ್ದರು ಸಹ  ವಾಸಿಯಾಗಿರುವದಿಲ್ಲ. ದಿನಾಂಕ 28.03.2021 ರಂದು ರಾತ್ರಿ 7.30 ಗಂಟೆಯಲ್ಲಿ  ಏಜಾಜ್ ರವರಿಗೆ  ಹೋಟ್ಟೆ ನೋವು  ಹೆಚ್ಚಾಗಿದ್ದರಿಂದ ತಾಳಲಾರದೇ ವಿಷವನ್ನು ಸೇವಿಸಿದ್ದು, ಚಿಕಿತ್ಸೆಗೆ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮದ್ಯೆ ರಾತ್ರಿ 08.00 ಗಂಟೆಯಲ್ಲಿ  ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *