ದಿನದ ಅಪರಾಧಗಳ ಪಕ್ಷಿನೋಟ 28ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 27.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

     ರಸ್ತೆ ಅಪಘಾತ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಪಾರ್ವತಮ್ಮ, ಮಹದೇವಪುರ ಗ್ರಾಮ ಬೇತಮಂಗಲ ರವರ ಮಗ ಚರಣ್, 20 ವರ್ಷ ರವರು ದಿನಾಂಕ-26-04-2021 ರಂದು 15.30 ಗಂಟೆಯಿಂದ 17.30 ಗಂಟೆ ಮದ್ಯೆ ಸಮಯದಲ್ಲಿ  ಗುಟ್ಟಹಳ್ಳಿ ಕಡೆಯಿಂದ ಆತನ  ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-08-ಎಕ್ಸ್-1231 ರಲ್ಲಿ ಗುಟ್ಟಹಳ್ಳಿ ಕಡೆಯಿಂದ ವಾಪಸ್ ಮಹದೇವಪುರ ಗ್ರಾಮಕ್ಕೆ ಬರುವಾಗ ಬೇತಮಂಗಲ ಕಡೆಯಿಂದ ಮುಳಬಾಗಿಲು ಕಡೆ ಹೋಗುತ್ತಿದ್ದ ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿ ಮಗ ಚಲಾಯಿಸುತ್ತಿದ್ದ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ  ಅವರ ತಲೆಯ ಬಲಭಾಗದಲ್ಲಿ, ಎಡಭಾಗದ ಕೆನ್ನೆಯ ಮೇಲೆ ರಕ್ತಗಾಯಗಳಾಗಿದ್ದು ಎದೆಯ ಮೇಲೆ ತರಚುಗಾಯವಾಗಿದ್ದು ಕಾರನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಹೊರಟುಹೋಗಿರುತ್ತಾನೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣ : 01

                ಈ ಕೇಸಿನ ಪಿರ್ಯಾದಿದಾರರು ವೆಂಕಟೇಶಪ್ಪ, ಜಕ್ಕರಸಕುಪ್ಪ, ಆಂಡ್ರಸನ್‌ಪೇಟೆ ರವರ ಮಗಳಾದ ಕು.ಮೋನಿಕ  19 ವರ್ಷ ರವರು ದಿನಾಂಕ 25.04.2021  ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿದಾರರು ಎಲ್ಲಾರು ಊಟ ಮಾಡಿ ಮಲಗಿದ್ದು, ದಿನಾಂಕ 26.04.2021 ರಂದು ಬೆಳಿಗ್ಗೆ 6.00 ಗಂಟೆಗೆ ನೋಡಲಾಗಿ ಪಿರ್ಯಾದಿದಾರರ ಮಗಳು ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *