ದಿನದ ಅಪರಾಧಗಳ ಪಕ್ಷಿನೋಟ 28ನೇ ಮಾರ್ಚ್‌ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 27.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಮರೇಶ್ ಬಿನ್ ಮುನಿಯಪ್ಪ, ದೆಬ್ಬನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 26.03.2021 ರಂದು  ಸಂಜೆ 07.00 ಗಂಟೆಯಲ್ಲಿ  ಕೃಷ್ಣಪ್ಪ ರವರನ್ನು ದ್ವಿಚಕ್ರ ವಾಹನ ಸಂಖ್ಯೆ KA08 R 7561 ರ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಆನಂದಗಿರಿ ಡೌನ್ ನಲ್ಲಿ ಹೋಗುತ್ತಿದ್ದಾಗ, ಬೂದಿಕೋಟೆ ಕಡೆಯಿಂದ ಕಾರ್ ಸಂಖ್ಯೆ KA03 MG 3206 ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ವಾಹನವನ್ನು ಚಲಾಯಿಸಿ ಬಂದು ದೂರುದಾರರು ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ಮತ್ತು ಕೃಷ್ಣಪ್ಪ ರವರು ವಾಹನ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 27.03.2021 ರಂದು ಬೆಳಿಗ್ಗೆ 9.15 ಗಂಟೆಯಲ್ಲಿ ರಾಮಾಪುರ ಗೇಟ್ ಸಮೀಪ ಟಾಟಾ ಸೂಪರ್ ಏಸ್ ಲಗ್ಗೇಜ್ ಸಂಖ್ಯೆ ಕೆಎ-01-ಎಬಿ-5609 ವಾಹನವು ಬಂಗಾರಪೇಟೆ ಕಡೆಯಿಂದ ಟೇಕಲ್ ಕಡೆಗೆ ಹೋಗುತ್ತಿದ್ದು, ದೂರುದಾರರಾದ ಶ್ರೀ. ಜಗದೀಶ್‌ ರೆಡ್ಡಿ, ಪಿ.ಎಸ್.ಐ ಹಾಗೂ ಇಲಾಖಾ ಜೀಪ್ ನ್ನು ಕಂಡು ಟಾಟಾ ಏಸ್ ವಾಹನದ ಚಾಲಕನು ರಾಮಾಪುರ ಗೇಟ್ ಸಮೀಪ ರಸ್ತೆ ತಿರುವಿನ ಬಳಿ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದು, ಟಾಟಾ ಸೂಪರ್ ಏಸ್ ವಾಹನವನ್ನು ಪರಿಶೀಲಿಸಿದಾಗ ವಾಹನದ ಹಿಂಭಾಗದಲ್ಲಿ ಟೊಮೊಟೋ ಪ್ಲಾಸ್ಟಿಕ್ ಬಾಕ್ಸ್ ಗಳನ್ನು ತುಂಬಿದ್ದು, ಕೆಳಗಡೆ ನೀಲಿ ಪ್ಲಾಸ್ಟಿಕ್ ಟಾರ್ ಪಾಲ್ ಇದ್ದು ಅದನ್ನು ತೆಗೆದು ನೋಡಿದಾಗ ರಕ್ರಚಂದನ ಮರದ ತುಂಡುಗಳು ಇರುವುದು ಕಂಡು ಬಂದಿರುತ್ತದೆ. ಟಾಟಾ ಸೂಪರ್ ಏಸ್ ವಾಹನದಲ್ಲಿದ್ದ ರಕ್ತಚಂದನ ಮರದ 11 ತುಂಡುಗಳು, ಒಟ್ಟು ಅಂದಾಜು ಬೆಲೆ 10,41,000-00 ರೂ ಬಾಳುವುದನ್ನು ಮತ್ತು ಟಾಟಾ ಸೂಪರ್ ಏಸ್ ವಾಹನದ ಅಂದಾಜು ಬೆಲೆ ಸುಮಾರು 1,50,000-00 ರೂ ಬಾಳುವುದನ್ನು ಒಟ್ಟು 11,91,000-00 ರೂ ಬಾಳುವುದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

 ಎನ್‌.ಡಿ.ಪಿ.ಎಸ್‌  ಕಾಯ್ದೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ. 27.03.2021 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ವಿನೋದ್ ಬಾಬು, ರಾಜೇಶ್‌ ಕ್ಯಾಂಪ್‌, ಕೆ.ಜಿ.ಎಫ್ ರವರು ಪಂಡರಾಂ ಲೈನಿನ ಬಸ್ ನಿಲ್ದಾಣದ ತಂಗುದಾಣದ ಹಿಂಭಾಗದಲ್ಲಿರುವ ಪೊದೆಗಳ ಬಳಿ ಕುಳಿತು ಹಳದಿ ಬಣ್ಣದ ಬ್ಯಾಗಿನಲ್ಲಿ ಗಾಂಜಾವನ್ನು ಇಟ್ಟಿಕೊಂಡಿದ್ದವನನ್ನು ಶ್ರೀ ವೆಂಕಟರಾಮಪ್ಪ ಎಂ, ಸಿ.ಪಿ.ಐ, ಚಾಂಪಿಯನ್‍ ರೀಫ್ಸ್ ವೃತ್ತ(ಪ್ರಭಾರ) ಮತ್ತು ಸಿಬ್ಬಂದಿಯವರು ದಾಳಿ ಮಾಡಿ  ವಿನೋದ್ ಬಾಬು ರವರನ್ನು ಹಿಡಿದುಕೊಂಡು, ಆತನ ಬಳಿಯಿದ್ದ 475 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *