ದಿನದ ಅಪರಾಧಗಳ ಪಕ್ಷಿನೋಟ 27ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ  26.07.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 27.07.2020 ರಂದು ಬೆಳಿಗ್ಗೆ 10.00ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ :  01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 23.07.2020 ರಂದು ಸಂಜೆ 7.00 ಗಂಟೆಯ ಸಮಯದಲ್ಲಿ ಈ ಕೇಸಿನ ಪಿರ್ಯಾದಿದಾರರಾದ ಗೌರಮ್ಮ ಕೋಂ ರಾಮಕೃಷ್ಣ, ಜಾನುಗುಟ್ಟ ಗ್ರಾಮ ರವರ  ಮಗಳು ರಸ್ತೆಯಲ್ಲಿ ಬರುವಾಗ ಆರೋಪಿ ಶ್ರೀನಾಥ, ಜಾನುಗುಟ್ಟ ಗ್ರಾಮ ರವರು ಪಿರ್ಯಾದಿದಾರರ ಮಗಳನ್ನು ಅಡ್ಡಗಟ್ಟಿ ಕೆಟ್ಟ ಮಾತುಗಳಿಂದ ಬೈದಿದ್ದು, ಇದನ್ನು ಕಂಡ ಪಿರ್ಯಾದಿದಾರರು ಕೇಳಿದ್ದಕ್ಕೆ ಆರೋಪಿ ಶ್ರೀನಾಥ ರವರು ಚಾಕುವಿನಿಂದ ಪಿರ್ಯಾದಿಯ ಎಡಗೈ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು, ಮತ್ತೊಬ್ಬ ಆರೋಪಿ ರಮಾದೇವಿ ರವರು ಇಟ್ಟಿಗೆ ಕಲ್ಲಿನಿಂದ ಪಿರ್ಯಾದಿಯ ಮೇಲೆ ಹಲ್ಲೆ ಮಾಡಿ ಎಡಕಿವಿಯ ಮೇಲೆ ಬಲವಾಗಿ ಹೊಡೆದು ಹಲ್ಲೆ ಮಾಡಿರುತ್ತಾರೆ.

– ಕನ್ನ ಕಳುವು : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ 02  ಕನ್ನ ಕಳವು ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ಸರಸ್ವತಿ ಕೊಂ ಶಾಂತಕುಮಾರ್‌, 3ನೇ ಸಾ ಮಿಲ್‌ ಲೈನ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು  ದಿನಾಂಕ 25.07.2020 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಸೌತ್ ಗಿಲ್ಬರ್ಟ್ಸ್ ಲೈನಿನಲ್ಲಿರುವ ಮಾದ ಕ್ಯಾಂಡಲ್ಸ್ ಅಂಗಡಿಗೆ ಬೀಗವನ್ನು ಹಾಕಿಕೊಂಡು ಮನೆಗೆ ಹೋಗಿ, ದಿನಾಂಕ 26.07.2020 ರಂದು ಬೆಳಿಗ್ಗೆ 7.30 ಗಂಟೆಗೆ ಅಂಗಡಿಯ ಬೀಗ ತೆಗೆದು ನೋಡಲಾಗಿ ಯಾರೋ ಕಳ್ಳರು ಅಂಗಡಿಯ ಮೇಲ್ಛಾವಣಿ ಸಿಮೆಂಟ್ ಶೀಟ್ ನ್ನು ಹೊಡೆದು ಒಳಗೆ ಪ್ರವೇಶಿಸಿ, ಅಂಗಡಿಯಲ್ಲಿದ್ದ 1)Tatto machine kit, 2) 2 table fan, 3) Portable charging light, 4) 24 watches 5) 470/- RS cash, ಒಟ್ಟು 23,500/-ರೂ ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ದೂರುದಾರರಾದ ಶ್ರೀ. ಮೊಹ್ಮದ್ ಇಬ್ರಾಹಿಂ ಬಿನ್ ಅಬ್ದುಲ್‌ ರೆಹಮಾನ್‌, ಸೌತ್‌ ಗಿಲ್ಬರ್ಟ್ಸ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ದಿನಾಂಕ 25.07.2020 ರಂದು ರಾತ್ರಿ 7.00 ಗಂಟೆಯಲ್ಲಿ ಸೌತ್ ಗಿಲ್ಬರ್ಟ್ಸ್ ಲೈನಿನಲ್ಲಿರುವ ತನ್ನ AK BROWSING CENTER & MOBILE ACCESSORIES ಅಂಗಡಿಗೆ ಬೀಗವನ್ನು ಹಾಕಿಕೊಂಡು ಮನೆಗೆ ಹೋಗಿ, ದಿನಾಂಕ 26.07.2020 ರಂದು ಬೆಳಿಗ್ಗೆ 7.00 ಗಂಟೆಗೆ ಅಂಗಡಿಯ ಬೀಗ ತೆಗೆದು ನೋಡಲಾಗಿ, ಯಾರೋ ಕಳ್ಳರು ಅಂಗಡಿಯ ಮೇಲ್ಛಾವಣಿ ಸಿಮೆಂಟ್ ಶೀಟ್ ನ್ನು ಹೊಡೆದು ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ 1)LAPTOP, 2) DESKTOP, 3)HOME THEATER, 4) POWER BANKS, 5) BLUETOOTH SPEAKERS,, 6) BLUETOOTH EARPHONES, 7) BASIC MOBILE PHONES, 8) SMART WATCHES, 9) SMART BANDS, 10) JUNCTION BOXES, 11) MOBILE CASES, 12) EARPHONES, 13) MEMORY CARDS, 14) VGA CABLE, 15) CHARGERS, 16) HEADSETS. 17) SHELL, 18) BATTERIES, 19) MOUSE, 20) EAR PODS, 21) MOSQUITO BATS, 22) KEY BOARD ಒಟ್ಟು 65,000/-ರೂ ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

 

Leave a Reply

Your email address will not be published. Required fields are marked *