ದಿನದ ಅಪರಾಧಗಳ ಪಕ್ಷಿನೋಟ 26ನೇ ಮಾರ್ಚ್‌ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 25.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಇತರೆ01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುರಳೀದರ, ಎಫ್.ಡಿ.ಎ, ಕೆ.ಜಿ.ಎಫ್ ಎ.ಆರ್.ಟಿ.ಓ ಕಚೇರಿ ರವರು ದಿನಾಂಕ 18-12-2021 ರಂದು ಸಂಜೆ 5-00 ಗಂಟೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ, ನವೀನ್ ರವರು ದೂರುದಾರರ ಬಳಿ ಬಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಎಲ್. ಬಾಬು ರವರು ಕಚೇರಿಯ ಹೊರಗಡೆ ಬರಲು ತಿಳಿಸಿರುತ್ತಾರೆಂದು ಹೇಳಿದ್ದು, ದೂರುದಾರರು ಕಚೇರಿಯ ಹೊರಗಡೆ ಬಂದಾಗ ಬಾಬು ಮತ್ತು ನವೀನ್ ರವರು ಕಚೇರಿಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ದೂರುದಾರರಿಗೆ 50,000/- ರೂ ಗಳನ್ನು ನೀಡಬೇಕು ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿಕೊಳ್ಳುತ್ತೇನೆ ಎಂದು ದೂರುದಾರರಿಗೆ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಪಡಿಸಿರುತ್ತಾರೆ. ನಂತರ ದಿನಾಂಕ 09-03-2021 ರಂದು ಸಂಜೆ  5-30 ಗಂಟೆಯಲ್ಲಿ ದೂರುದಾರರು ಕಛೇರಿಯಲ್ಲಿದ್ದಾಗ, ಎಲ್.ಬಾಬು ರವರು ಕಚೇರಿಗೆ ಬಂದು ಪತ್ರಿಕೆಯಲ್ಲಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ನೀನು ಸ್ವಂತಕ್ಕೆ ಬಳಸಿಕೊಂಡಿದ್ದೀಯಾ ಎಂದು ಸುದ್ದಿ ಮಾಡಿರುತ್ತೇನೆಂದು ಹೇಳಿ 1,00,000/- ರೂ ಗಳನ್ನು ನೀಡಬೇಕು ಇಲ್ಲದಿದ್ದರೆ ನಿನ್ನನ್ನು ವರ್ಗಾವಣೆ ಮಾಡಿಸುತ್ತೇನೆ ಅಥವಾ ಅಮಾನತ್ತು ಮಾಡಿಸುತ್ತೇನೆ, ನಿನ್ನನ್ನು ಕಚೇರಿಯಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ನೀನು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ನಿನ್ನನ್ನು ಸಾಯಿಸಿಬಿಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ನೀಡಿರುವ ದೂರು.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆನಂದಪ್ಪ ಬಿನ್ ದೊಣ್ಣೆಪ್ಪ, ಚಿಕ್ಕಅಂಕಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರ ಮಗಳಾದ ಪವಿತ್ರ, 22 ವರ್ಷ ರವರು ಹುಟ್ಟಿದಾಗಿನಿಂದಲೂ ಮೂರ್ಛೆ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 24.03.2021 ರಂದು ಬೆಳಿಗ್ಗೆ 1-30 ಗಂಟೆಯಲ್ಲಿ ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

 ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರಿ. ಕುಮಾರ್‌ ಬಿನ್ ಪರಮನ್‌ ಗೌಡ, ಹಳಬಾವೆ ಗ್ರಾಮ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ರವರು ಜೀವನ್ ಪ್ರಕಾಶ್ ಎಂಬುವರ ಕಾಂಕ್ರೀಟ್ ಅಜಾಕ್ ಗಾಡಿಯ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದೂರುದಾರರ ಬಾವ ಅಯ್ಯಪ್ಪ ಬಿನ್ ಭೀಮರಾಯ, 32 ವರ್ಷ ರವರು ಸದರಿ ಅಜಾಕ್ ಗಾಡಿಗೆ ಸಿಮೆಂಟ್ ಮೂಟೆಗಳನ್ನು ಹಾಕುವ ಕೆಲಸ ಮಾಡಿಕೊಂಡಿದ್ದು, ದಿನಾಂಕ:19.02.2021 ರಂದು ಸಂಜೆ 4.00 ಗಂಟೆಯಲ್ಲಿ ಕೆ.ಜಿ.ಎಫ್ ತಾಲ್ಲೂಕಿನ ಪೆದ್ದಪಲ್ಲಿ ಗ್ರಾಮದಿಂದ ಸ್ಮಶಾನದ ಕಡೆಗೆ ಹೋಗುವ ರಸ್ತೆಯಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕುತ್ತಿದ್ದಾಗ, ದೂರುದಾರರ ಬಾವ ಅಯ್ಯಪ್ಪ ರವರು ಕಾಂಕ್ರೀಟ್ ಅಜಾಕ್ ಮಿಷನ್ ಗೆ ಸಿಮೆಂಟ್ ಮೂಟೆಯನ್ನು ಹಾಕಲು ಬರುತ್ತಿದ್ದಾಗ ದಿಬ್ಬವನ್ನು ಏರಲು ಪ್ರಯತ್ನಿಸಿದ್ದು, ಎಡವಿ ಸಿಮೆಂಟ್ ಮೂಟೆ ಸಮೇತ ಕೆಳಗೆ ಬಿದ್ದು ಕಾಂಕ್ರೀಟ್ ರಸ್ತೆ ಹಾಕಲು ಅಳವಡಿಸಿದ್ದ ಕಬ್ಬಿಣದ ಚಾನಲ್ ಗೆ ತಗುಲಿ ಎದೆಯ ಮೂಳೆಗಳಿಗೆ ಪೆಟ್ಟಾಗಿದ್ದು, ಚಿಕಿತ್ಸೆಗೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ದಾಖಲುಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:25.03.2021 ರಂದು ಮುಂಜಾನೆ 4.00 ಗಂಟೆಗೆ ಅಯ್ಯಪ್ಪ ರವರು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *