ದಿನದ ಅಪರಾಧಗಳ ಪಕ್ಷಿನೋಟ 25 ನೇ ಮೇ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 25.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಆಸ್ವಾಭವಿಕ ಮರಣ: 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ಪಿರ್ಯಾದಿದಾರರಾದ  ಮುತ್ತುರಾಮನ್, ಭಾರತ್ ನಗರ, ಬೆಮಲ್ ನಗರ ರವರು 22 ವರ್ಷಗಳ ಹಿಂದೆ ಮೀನಾ ದೇವಿ, ೪೫ ವರ್ಷ ಎಂಬುವರನ್ನು ಮದುವೆ ಮಾಡಿಕೊಂಡಿದ್ದು ಸದರಿಯವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಪಿರ್ಯಾದಿದಾರರು ಬೆಂಗಳೂರಿನ ಬಿ.ಇ.ಎಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಬೆಂಗಳೂರಿನ ರಾಮಮೂರ್ತಿನಗರದ 1 ನೇ ಕ್ರಾಸ್ ನಲ್ಲಿ ಸ್ವಂತಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದು  ಮೀನಾ ದೇವಿ ವಯಸ್ಸು 45 ವರ್ಷ ರವರು ಕಮ್ಮಸಂದ್ರದ ಕೋಟಿಂಲೀಗೇಶ್ವರ ದೇವಸ್ಥಾನದ ಬಳಿ ಇರುವ ಕೆನೆರಾ ಬ್ಯಾಂಕಿನಲ್ಲಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದು ಭಾರತ್ ನಗರದ ಮನೆ ಸಂಖ್ಯೆ ಎ150 ಎಸ್ 23 ರಲ್ಲಿ  ಒಬ್ಬರೆ ವಾಸವಾಗಿದ್ದು   ದಿನಾಂಕ 23.05.2021 ರಂದು ರಾತ್ರಿ ಸುಮಾರು 9-30 ಗಂಟೆಯಲ್ಲಿ ಪಿರ್ಯಾದಿದಾರರು ಮತ್ತು ಆವರ ಮಕ್ಕಳು ಮೀನಾದೇವಿ ರವರಿಗೆ ಪೋನ್ ಕರೆ ಮಾಡಿ ಮಾತನಾಡಿದ್ದು ನಂತರ ದಿನಾಂಕ 24.05.2021 ಮೃತಳ ತಂಗಿ ವೀಣಾ ದೇವಿ ರವರು ಮೃತಳಿಗೆ  ಮೊಬೈಲ್ ಗೆ ಕರೆ ಮಾಡಿದ್ದರಿಂದ ಕರೆಯನ್ನು ಸ್ವೀಕರಿಸದೆ ಇದ್ದರಿಂದ  ಮದ್ಯಾಹ್ನ ಸುಮಾರು 1-27 ಗಂಟೆಯಲ್ಲಿ ವೀಣಾದೇವಿ ರವರು ಪರಿಚಯಸ್ಥರಾದ ನಿರ್ಮಲ್ ಕುಮಾರ್ ರವರಿಗೆ ಪೋನ್ ಮಾಡಿ ಮನೆಯ ಬಳಿ ಹೋಗಿ  ನೋಡಲು ತಿಳಿಸಿದ್ದರಿಂದ ನಿರ್ಮಲ್ ಕುಮಾರ್ ರವರು ಬಾರತ್ ನಗರದ ಮೀನಾದೇವಿ ರವರ ಮನೆ ಬಂದಾಗ ಮುಂಬಾಗಿಲು ಮತ್ತು ಹಿಂಬಾಗಿಲು ಡೋರ್ ಲಾಕ್ ಆಗಿದ್ದು ಹಿಂಭಾಗದಲ್ಲಿರುವ ಡೋರನ್ನು ಒಂದು ಕಬ್ಬಿಣದ ಗಡಾರಿಯಿಂದ ಮೀಟಿ ಒಳಗೆ ಹೋಗಿ ನೋಡಲಾಗಿ  ಮೀನಾ ದೇವಿ ರವರು ಮನೆಯ ಬೆಡ್ ರೂಮಿನ  ಮಂಚದ ಮೇಲೆ  ಅಂಗಾತವಾಗಿ ಮಲಗಿಕೊಂಡು ಮೃತ ಪಟ್ಟಿರುತ್ತಾಳೆಂದು ತಿಳಿಸಿದರು ಎಂದು ಪಿರ್ಯಾದಿದಾರರಿಗೆ ಮಗ ತಿಳಿಸಿದ್ದರಿಂದ ಬಂದು ನೋಡಲಾಗಿ ಸಂಗತಿ ನಿಜವಾಗಿದ್ದು ಮೀನಾ ದೇವಿ ರವರಿಗೆ ತುಟಿಯ ಬಳಿ ಮೂಗಿನ ಪಕ್ಕದಲ್ಲಿ ಸಣ್ಣಪುಟ್ಟ ತರಚಿದ ಗಾಯಾಗಳಾಗಿದ್ದು ಮೀನಾದೇವಿ ರವರ ಸಾವಿನ ಬಗ್ಗೆ ಅನುಮಾನ ವಿರುತ್ತೆ ಎಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *