ದಿನದ ಅಪರಾಧಗಳ ಪಕ್ಷಿನೋಟ 25ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:24.02.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೇಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗರಾಜ್ ಬಿನ್ ಸೀನಪ್ಪ, ಚಲ್ದಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:24.02.2020 ರಂದು ಬೆಳಗ್ಗೆ 9.00 ಗಂಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮಾಲೂರಿಗೆ ಹೋಗಲು ಬಂಗಾರಪೇಟೆಯಿಂದ ಸೂಲಿಕುಂಟೆ ರಸ್ತೆಯಲ್ಲಿ ಬ್ಯಾಡಬೆಲೆ ಗ್ರಾಮದ ಸಮೀಪ ಹೋಗುತ್ತಿರುವಾಗ, ಅವರ ಮುಂದೆ ದೂರುದಾರರ ಸ್ನೇಹಿತರಾದ ಪ್ರಸನ್ನಕುಮಾರ್ ಮತ್ತು ಸುರೇಶ್ ರವರು ದ್ವಿಚಕ್ರ ವಾಹನ ಸಂಖ್ಯೆ ಕೆಎ-08 ವಿ-6856 ವಾಹನವನ್ನು ಚಲಾಯಿಸಿಕೊಂಡು ಬ್ಯಾಡಬೆಲೆ ಗ್ರಾಮದ ರಸ್ತೆ ತಿರುವಿನಲ್ಲಿ ಹೋಗುತ್ತಿದ್ದಾಗ, ಎದುರಿಗೆ  Breeza car no ka-08 M-6398 ರ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಸನ್ನ ಕುಮಾರ್ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಪ್ರಸನ್ನ ಕುಮಾರ್ ಮತ್ತು ಸುರೇಶ್ ರವರು ವಾಹನದ ಸಮೇತ ರಸ್ತೆಯ ಮೇಲೆ ಬಿದಿದ್ದು, ಇಬ್ಬರಿಗೂ ಗಾಯಗಳಾಗಿರುತ್ತದೆ.

– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಗೀತಾ ಕೊಂ ನಾಗರಾಜ ಗುಡ್ಡದಹೊಸಹಳ್ಳಿ ಗ್ರಾಮ, ಮಾಲೂರು ತಾಲ್ಲೂಕು ರವರಿಗೆ ದಿನಾಂಕ:-10.05.2012 ರಂದು ಅಯ್ಯಪಲ್ಲಿ ಗ್ರಾಮದ ವಾಸಿಯಾದ ವೆಂಕಟೇಶಪ್ಪ ರವರ ಮಗನಾದ ನಾಗರಾಜ್ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲದಲ್ಲಿ ನಾಗರಾಜ ರವರಿಗೆ 57 ಗ್ರಾಂ ತೂಕದ ಬಂಗಾರದ ಒಡವೆಗಳು ಮತ್ತು  50,000 ರೂ ಕೊಟ್ಟು ಮದುವೆ ಮಾಡಿದ್ದು,  ಮದುವೆಯಾದ 6 ತಿಂಗಳ ನಂತರ ದೂರುದಾರರಿಗೆ ನಾಗರಾಜ, ನಾಗರತ್ನಮ್ಮ, ನಾರಾಯಣಸ್ವಾಮಿ, ಪಾರ್ವತಮ್ಮ, ಮಂಜುನಾಥ, ಅಮೃತಾ ರವರು ಸೇರಿಕೊಂಡು ತೊಂದರೆ ಕೊಡುವುದು ವಿನ: ಕಾರಣ ಜಗಳ ಮಾಡಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ಈಗ್ಗೆ 10 ತಿಂಗಳ ಹಿಂದೆ ತವರು ಮನೆಯಿಂದ  ಹಣ ಮತ್ತು ವಡವೆಗಳನ್ನು ತೆಗೆದುಕೊಂಡು ಬಾ ಇಲ್ಲದಿದ್ದರೆ ನಾಗರಾಜ ರವರಿಗೆ ಇನ್ನೊಂದು ಮದುವೆ ಮಾಡಿ ಅವರಿಂದ ವರದಕ್ಷಣೆ ಪಡೆದುಕೊಳ್ಳುತ್ತೇವೆಂದು ಬೆದರಿಸಿ ಮಾನಸಿಕ ಮತ್ತು ದೈಹಿಕ ಕುರುಕುಳ ನೀಡಿ ದೂರುರರನ್ನು ಮತ್ತು ಮಕ್ಕಳನ್ನು ಮನೆಯಿಂದ ಹೊರಹಾಕಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರತ್ನಮ್ಮ ಕೊಂ ಲಕ್ಷ್ಮಪ್ಪ, ನಲ್ಲೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ಕುಮಾರಿ ಲಿಖಿತ ಎನ್.ಎಲ್, 19 ವರ್ಷ ರವರು ದಿನಾಂಕ-23-02-2020 ರಂದು ಸಂಜೆ 6.00 ಗಂಟೆಯಲ್ಲಿ ತೋಟದ ಬಳಿ ಹೋಗಿ ಬರುವುದಾಗಿ ಹೇಳಿ ಹೋದವಳು ಮತ್ತೆ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *