ದಿನದ ಅಪರಾಧಗಳ ಪಕ್ಷಿನೋಟ 23ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 22.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಮುನಿಯಪ್ಪ, ನಂದಂಬಳ್ಳಿ ಗ್ರಾಮ, ಕೋಲಾರ ತಾಲ್ಲೂಕು ರವರ ಚಿಕ್ಕಪ್ಪನಾದ ನಾರಾಯಣಸ್ವಾಮಿ, 55 ವರ್ಷ ರವರು ದಿನಾಂಕ:22.08.2020 ರಂದು ಮದ್ಯಾಹ್ನ 14-00 ಗಂಟೆ ಯಿಂದ 14.20 ಗಂಟೆ ಮದ್ಯೆ ದ್ವಿಚಕ್ರ ವಾಹನ ಸಂಖ್ಯೆ KA-07-w-6283 ಬಜಾಜ್ ಡಿಸ್ಕವರಿ ಯಲ್ಲಿ ಬೇತಮಂಗಲ ರಸ್ತೆ ವಿಮಲ ಹೃದಯ ಶಾಲೆ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಬೇತಮಂಗಲದಿಂದ ಬರುತ್ತಿದ್ದ ಬಲೋರೋ ಟೆಂಪೋ ಸಂಖ್ಯೆ KA-08-A-1486 ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾರಾಯಣಸ್ವಾಮಿ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪ್ರಯುಕ್ತ ನಾರಾಯಣಸ್ವಾಮಿ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತಪಟ್ಟಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಚಂದ್ರ ಬಿನ್ ವೆಂಕಟೇಶಪ್ಪ, ಪಿಚ್ಚಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಮ್ಮ ಮುರಳಿ ಬಿನ್ ಲೇಟ್ ವೆಂಕಟೇಶಪ್ಪ ರವರು ದಿನಾಂಕ 20.08.2020 ರಂದು ರಾತ್ರಿ 10.00 ಗಂಟೆಯಲ್ಲಿ ಬಂಗಾರಪೇಟೆ ಕೋಲಾರ ಮುಖ್ಯ ರಸ್ತೆಯಲ್ಲಿರುವ ಶಿವನಂಜಪ್ಪ ಪೆಟ್ರೋಲ್ ಬಂಕ್ ಸಮೀಪ ಕೋಲಾರ ಕಡೆಯಿಂದ ಬರುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆಎ-57-ಎಫ್-4517 ನ್ನು ನಿಲ್ಲಿಸಲು ಸೂಚಿಸಿದಾಗ, ಸದರಿ ಬಸ್ ನ ಚಾಲಕನಾದ ಬಸ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಮುರಳಿ ರವರಿಗೆ ಡಿಕ್ಕಿಪಡಿಸಿದ ಪರಿಣಾಮ, ಮುರಳಿ ರವರಿಗೆ ರಕ್ತಗಾಯಗಳಾಗಿರುತ್ತದೆ.

– ಹಲ್ಲೆ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಸು ಬಿನ್ ತಂಗರಾಜ, ಸಂಜಯ್ ಗಾಂಧಿನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ಹೆಂಡತಿ ಮೈದಲಿ ಹಾಗೂ ತಾಯಿ ವಸಂತಿ ರವರೊಂದಿಗೆ ದಿನಾಂಕ 21.08.2020 ರಂದು ರಾತ್ರಿ 10.00 ಗಂಟೆಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆಗೆ ಹೋಗಿದ್ದು ಅಲ್ಲಿ ಅದೇ ಲೈನಿನ ವಾಸಿಗಳಾದ ದೀಪಕ್, ಚಂದ್ರು, ಗುಂಡು, ಕುಟ್ಟಿ ರವರುಗಳು ದೇವಸ್ಥಾನದಲ್ಲಿ ಇದ್ದು, ಮಂಗಳಾರತಿ ತೆಗೆದುಕೊಳ್ಳಲು ಹೋದಾಗ ದೀಪಕ್ ರವರು ದೂರುದಾರರನ್ನು ಕಾಲಿನಿಂದ ತಳ್ಳಿದ್ದು, ಆಗ ದೂರುದಾರರು ನೋಡಿಕೊಂಡು ಹೋಗು ಎಂದು ಹೇಳಿದಾಗ, ದೀಪಕ್, ಚಂದ್ರು, ಗಂಡು, ಕುಟ್ಟಿ ರವರುಗಳು ಜಗಳಕ್ಕೆ ಬಂದು, ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತ ಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಭಾಗ್ಯಲಕ್ಷ್ಮೀ, ಸ್ವರ್ಣನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಗಂಡ ರೆಡ್ಡಪ್ಪಚಾರಿ, 46 ವರ್ಷ ರವರಿಗೆ ಮದ್ಯಪಾನ ಮಾಡುವ ಅವ್ಯಾಸವಿದ್ದು, ಯಾವುದೇ ಕೆಲಸ ಮತ್ತು ದೈನಂದಿನ ಖರ್ಚಿಗೆ ಕೈಯಲ್ಲಿ ಹಣವಿಲ್ಲದ ಕಾರಣ ಮನನೊಂದು ದಿನಾಂಕ.21.08.2020 ರಂದು ರಾತ್ರಿ 8-00 ಗಂಟೆಗೆ ಮನೆಯ ಹಾಲ್ ನ ಮೇಲ್ಚಾವಣಿಯ ಕಬ್ಬಿಣದ ಹುಕ್ಕಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀಮತಿ. ಸರಸ್ವತಮ್ಮ, ಅಡಂಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ಅಂಕಪ್ಪ ರವರಿಗೆ ಮದ್ಯಪಾನ ಮಾಡುವ ಹವ್ಯಾಸವಿದ್ದು, ದಿನಾಂಕ: 22.08.2020 ರಂದು ಮದ್ಯಪಾನ ಮಾಡಿ ಸಂಜೆ 4-30 ಗಂಟೆಯಲ್ಲಿ ಅಸ್ವಸ್ಥರಾಗಿ ಬಿದ್ದು ಬಿಟ್ಟಿದ್ದು, ಚಿಕಿತ್ಸೆಗೆ ಕೆ.ಜಿ.ಎಫ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯಾದಿಕಾರಿಗಳು ಪರೀಕ್ಷಿಸಿ ತನ್ನ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *