ದಿನದ ಅಪರಾಧಗಳ ಪಕ್ಷಿನೋಟ 22 ನೇ ಮೇ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 21.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

 

ಇತರೆ : 02 (INFORMATION TECHNOLOGY  ACT 2000)

       ಸೈಬರ್‍ ಅಪರಾಧ ಪೊಲೀಸ್ ಠಾಣೆಯಲ್ಲಿ ೨ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ; 12.05.2021 ರಂದು  ಈ ಕೇಸಿನ ಪಿರ್ಯಾದಿದಾರರಾದ ಚಂದ್ರ ಮೋಹನ್, ೩ ಟೈಪ್, ಆಫೀರ್‍ಸ್‌ಸ ಕ್ವಾಟ್ರಸ್, ಬೆಮಲ್ ನಗರ ರವರ ಮೊಬೈಲ್ ಸಂಖ್ಯೆಗೆ CP-121231 FOR DOCUMENT VERIFICATION TO AVOID SIM BLOKAGE INFORM TO CALL Ph.No.9339228951  ಎಂಬ ಸಂದೇಶ ಬಂದಿದ್ದು,  ಪಿರ್ಯಾದಿದಾರರು ದಿನಾಂಕ:14.05.2021 ರಂದು ಮದ್ಯಾಹ್ನ ಸುಮಾರು 1.30 ಗಂಟೆಯಲ್ಲಿ ಮೊ.ನಂ. 9339228951 ಗೆ ಕರೆ ಮಾಡಿದಾಗ ಕರೆ ಸ್ವೀಕರಿಸದೇ ಇದ್ದು, ನಂತರ ಪಿರ್ಯಾದಿಗೆ ಮೊ.ನಂ.8101276820 ನಿಂದ ಅನಾಮಧೇಯ ವ್ಯಕ್ತಿಯು ಕರೆ ಮಾಡಿ ತಾನು ಬಿ.ಎಸ್.ಎನ್.ಎಲ್ ಕೆ.ವೈ.ಸಿ ಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಪಿರ್ಯಾದಿಯ ಹೆಸರು ಮತ್ತು ಜನ್ಮ ದಿನಾಂಕವನ್ನು ನೀಡಲು ಸೂಚಿಸಿ ಪಿರ್ಯಾದಿಯ ಮೊಬೈಲ್ ನಂ.9449749208 ಗೆ 10 ರೂಪಾಯಿಗಳನ್ನು ರೀಚಾರ್ಜ್ ಮಾಡಲು ಸೂಚಿಸಿದ್ದು, ಅದರಂತೆ ಪಿರ್ಯಾದಿದಾರರು 10 ರೂಪಾಯಿಗಳನ್ನು ರೀಚಾರ್ಜ್ ಮಾಡಿದ ನಂತರ ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್ ಖಾತೆಯಲ್ಲಿ YONO LITE ಅಪ್ಲಿಕೇಷನ್ ಆಕ್ಟಿವೇಟ್ ಆಗಿದ್ದು, ಅದರ ಮೂಲಕ ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್ ಖಾತೆಯಲ್ಲಿದ್ದ ಹಣದಲ್ಲಿ 99000-00 ರೂಪಾಯಿಗಳನ್ನು ಮತ್ತು ಪಿರ್ಯಾದಿದಾರರ ಪತ್ನಿಯಾದ ಎಸ್. ಭುವನೇಶ್ವರಿ ರವರ ಎಸ್.ಬಿ.ಐ  ಬ್ಯಾಂಕ್ ಖಾತೆಯಲ್ಲಿದ್ದ ಹಣದಲ್ಲಿ  1,74,000/- ರೂಪಾಯಿಗಳು ಸೇರಿ ಒಟ್ಟು ಮೊತ್ತ 2,73,000/- ರೂಪಾಯಿಗಳನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ.

 

ದಿನಾಂಕ:19.09.2020 ರಂದು Sana sleem  ಎಂಬುವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಅವರು ನಡೆಸುತ್ತಿರುವ  5.7 ಮಿಲಿಯನ್ ಡಾಲರ್ ಗಳಷ್ಟು ಬೆಲೆ ಬಾಳುವ ಪ್ರಾಜೆಕ್ಟ್ ನ್ನು U.K ನಲ್ಲಿದ್ದು ಅದನ್ನು ಇಂಡಿಯಾದಲ್ಲಿ ನಡೆಸಲು ಆಸಕ್ತಿಯರುವ ವ್ಯಕ್ತಿಗಳ ಹೆಸರಿಗೆ ಅದರ  ಮಾಲೀಕತ್ವವನ್ನು ಬದಲಾಯಿಸಲು ಇಚ್ಚಿಸಿರುವುದಾಗಿಯೂ, ಪ್ರಾಜೆಕ್ಟ್ ನಲ್ಲಿರುವ ಮೊತ್ತದಲ್ಲಿ ಶೇಕಡಾ 40 ರಷ್ಟು ಹಣವನ್ನು ಉಪಯೋಗಿಸಿಕೊಳ್ಳಬಹುದೆಂಬ ಸಂದೇಶವನ್ನು ಈ ಕೇಸಿನ ಪಿರ್ಯಾದಿದಾರರಾದ ಮೆಲ್ವಿಯಾ ಸಿಂಡ್ರೀಯಾ, ಮಾರಿಕುಪ್ಪಂ ವಾಸಿ ರವರ ಮೊ.ನಂ.9481826940 ಗೆ ಕಳುಹಿಸಿದ್ದು, ಅದನ್ನು ನಂಬಿ ಪಿರ್ಯಾದಿದಾರರು ಸಂದೇಶವನ್ನು ಕಳುಹಿಸಿದ್ದ ಮೊಬೈಲ್ ನಂಬರಿಗೆ ಸಂಪರ್ಕಿಸಿ ವಿಚಾರಣೆ ಮಾಡಲಾಗಿ ಪಿರ್ಯಾದಿದಾರರಿಗೆ ವಿಧವಿಧವಾದ ಮಾಹಿತಿಗಳನ್ನು ಪಿರ್ಯಾದಿದಾರರ ಇಮೇಲ್ ವಿಳಾಸ ಕ್ಕೆ ಇ ಮೇಲ್ ಮೂಲಕ ನಂಬಿಸಿ, ಪಿರ್ಯಾದಿದಾರರ ಯೂನಿಯನ್ ಬ್ಯಾಂಕ್ ಖಾತೆ ನಿಂದ ಆರೋಪಿಯು ವಿವಧ ಬ್ಯಾಂಕ್ ಖಾತೆಗಳಿಗೆ ಒಟ್ಟು 7,50,000/- ರೂಪಾಯಿಗಳನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ. ಇತ್ಯಾದಿ. ಆದ್ದರಿಂದ ಈ ಪ್ರ.ವ.ವರದಿ

 ವ್ಯಕ್ತಿ ಕಾಣೆಯಾಗಿರುವ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 16.05.2021 ರಂದು ಬೆಳಿಗ್ಗೆ ಸುಮಾರು 9.30 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ವೆಂಕಟೇಶ, ಶಾಂತಿನಗರ, ಬಂಗಾರಪೇಟೆ ರವರ ಹೆಂಡತಿಯಾದ ಸುಮಾರು 34 ವರ್ಷ ಮೀನಾಕ್ಷಿ ರವರು ಕಾರಹಳ್ಳಿಯಲ್ಲಿರುವ ಅವರ ಅಕ್ಕ ಸುಗುಣ ರವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ಪುನಃ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *