ದಿನದ ಅಪರಾಧಗಳ ಪಕ್ಷಿನೋಟ 22ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 21.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಕಳವು ಪ್ರಕರಣ: 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 21.04.2021 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಈ ಕೇಸಿನ ಆರೋಪಿಗಳಾದ ಸಂಧ್ಯ, ಕೋಗಿಲೆಹಳ್ಳಿ ಮತ್ತು ಲತಾ, ಕೀಲುಕೋಟೆ ರವರು ಸಿದ್ದನಹಳ್ಳಿ ಗ್ರಾಮದ ವಾಸಿ ಈ ಕೇಸಿನ ಪಿರ್ಯಾದಿದಾರರಾದ ರಮೇಶ್, ರವರು ಜಮೀನಿನಲ್ಲಿರುವ ಕೊಳವೆಬಾವಿಗೆ ಅಳವಡಿಸಿದ್ದ ಸುಮಾರು 40 ಮೀಟರ್ ಕೇಬಲ್ ವೈರ್ ನ್ನು, ಮುನಿಯಪ್ಪ ರವರ ಕೊಳವೆಬಾವಿಗೆ ಅಳವಡಿಸಿದ್ದ ಸುಮಾರು 15 ಮೀಟರ್ ಕೇಬಲ್ ವೈರ್ ನ್ನು ಹಾಗೂ ಎಸ್.ಆರ್ ರವಿಕುಮಾರ್ ರವರ ಕೊಳವೆಬಾವಿಗೆ ಅಳವಡಿಸಿದ್ದ ಸುಮಾರು 10 ಮೀಟರ್ ಕೇಬಲ್ ವೈರ್ ನ್ನು ಮತ್ತು ಮುನಿಸ್ವಾಮಿಗೌಡ ರವರ ಕೊಳವೆಬಾವಿಗೆ ಅಳವಡಿಸಿದ್ದ ಸುಮಾರು 12 ಮೀಟರ್ ಕೇಬಲ್ ವೈರ್ ಗಳು ಒಟ್ಟು ಬೆಲೆ ಸುಮಾರು 6000-00 ರೂ ಬಾಳುವುದನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರರು ಹಾಗೂ ಇತರರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರುಪಡಿಸಿರುತ್ತಾರೆ.

ಇತರೆ : 02 (THE KARNATAKA EPIDEMIC DISEASES ACT, 2020 (U/s-5(2))

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯಾದ್ಯಂತ ಕೋವಿಡ್-19 ರ ರೋಗಾಣುವು 2ನೇ ಹಂತದಲ್ಲಿ ಹರಡುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರು ಅನಿರ್ದಿಷ್ಟ ಮುಷ್ಕರದ ಹಿನ್ನೆಲೆ, ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಿದ್ದರೂ ಸಹ ದಿನಾಂಕ 12.04.2021 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಬಿ.ಎಂ.ಟಿ.ಸಿ ನೌಕರರು ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಬಂಗಾರಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಘೋಷಣೆಗಳನ್ನು ಕೂಗಿಕೊಂಡು ಕೋವಿಡ್-19 ನಿಯಮಾವಳಿಗಳನ್ನು ಪಾಲಿಸದೇ, ನಿಯಮಗಳನ್ನು ಉಲ್ಲಂಘನೆ ಮಾಡಿ, ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆಎ-07-ಎಫ್-1586 ರ ಚಾಲಕ ಮತ್ತು ನಿರ್ವಾಹಕರಿಗೆ ಹೆದರಿಸಿರುತ್ತಾರೆಂದು ಈ ಕೇಸಿನ ದೂರುದಾರರಾದ ಶ್ರೀನಿವಾಸ ಎಂಬುವರು ದೂರು ನೀಡಿರುತ್ತಾರೆ.

ಕರ್ನಾಟಕ ರಾಜ್ಯಾದ್ಯಂತ ಕೋವಿಡ್-19 ರ ರೋಗಾಣುವು 2ನೇ ಹಂತದಲ್ಲಿ ಹರಡುತ್ತಿದ್ದು, ಸದರಿ ಕೋವಿಡ್ ರೋಗಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆದೇಶದಲ್ಲಿ ಕರ್ನಾಟಕ ರಾಜ್ಯಾದ್ಯಂತ ಯಾವುದೇ ತರಹದ ರ್‍ಯಾಲಿಗಳು, ಮುಷ್ಕರ, ಧರಣಿ ಇತ್ಯಾದಿಗಳನ್ನು ನಿಷೇಧಿಸಲಾಗಿರುತ್ತದೆ. ಹೀಗಿದ್ದರೂ ಸಹ ಸದರಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸದೇ, ನಿಯಮಗಳನ್ನು ಉಲ್ಲಂಘನೆ ಮಾಡಿ ಬಂಗಾರಪೇಟೆ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಯ ಬಳಿ ದಿನಾಂಕ 12.04.2021 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು, ಬಂಗಾರಪೇಟೆ ತಾಲ್ಲೂಕು ರವರು ತಮ್ಮ 09 ಬೇಡಿಕೆಗಳನ್ನು ಈಡೇರಿಸಲು ಕೋರಿ ಮುಷ್ಕರವನ್ನು ನಡೆಸಿರುತ್ತಾರೆಂದು  ಈ ಕೇಸಿನ ದೂರುದಾರರಾದ ಶ್ರೀ ದಯಾನಂದ, ಬಂಗಾರಪೇಟೆ ತಹಿಸಿಲ್ದಾರ್‍ ರವರು ದೂರು ನೀಡಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.04.2021 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರಾದ ರಾಜಣ್ಣ, ಹೊಣ್ಣೆನಹಳ್ಳಿ ಗ್ರಾಮ ರವರ ಮಗಳಾದ ನಂದಿನಿ, 26 ವರ್ಷ ರವರು ಹೊನ್ನೇನಹಳ್ಳಿ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಹೊರಗಡೆ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ. ನಂದಿನಿ ರವರು ಕಲ್ಕತ್ತಾ ಮೂಲದ ಸುಮನ್ ದಾಸ್ ರವರ ಜೊತೆಯಲ್ಲಿ ಹೋಗಿರುವುದಾಗಿ ಅನುಮಾನವಿರುತ್ತದೆಂದು, ಕಾಣೆಯಾಗಿರುವ ನಂದಿನಿ ರವರನ್ನು ಪತ್ತೆ ಮಾಡಿಕೊಡಲು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *