ದಿನದ ಅಪರಾಧಗಳ ಪಕ್ಷಿನೋಟ 20ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 19.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ದೊಂಬಿ : 02

ಉರಿಗಾಂ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಮುನಿರಾಜು ಬಿನ್ ಕೃಷ್ಣಪ್ಪ, ಪಿಚ್ಚಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ:18.04.2021 ರಂದು ಸಂಜೆ 6-00 ಗಂಟೆಯಲ್ಲಿ ತಮ್ಮ ಹರೀಶ್ ಮತ್ತು ಸ್ನೇಹಿತ ವಿನೋದ್ ಎಂಬುವರೊಂದಿಗೆ ಪಿಚ್ಚಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಇರುವಾಗ, ವಿನೋದ್ ಎಂಬುವನು ದೂರುದಾರರಿಗೆ ಶ್ರೀನಿವಾಸನ್ ಎಂಬಾತನು ತನಗೆ ವಿನಾಕಾರಣ ಬೈದಿರುವುದಾಗಿ ತಿಳಿಸಿದ್ದು, ದೂರುದಾರರು ತಮ್ಮ ಹರೀಶ್ ರವರ ಮೊಬೈಲ್ ತೆಗೆದುಕೊಂಡು ಶ್ರೀನಿವಾಸ್ ರವರಿಗೆ ಕರೆ ಮಾಡಿ ವಿನೋದ್ ನಿಗೆ ಯಾಕೆ ಬೈದಿದ್ದೀಯಾ ಎಂದು ಕೇಳಿದಾಗ, ಸದರಿ ಶ್ರೀನಿವಾಸ್ ರವರು ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದಿದ್ದು, ಹರೀಶ್ ರವರು ಶ್ರೀನಿವಾಸ್ ರವರ ಬಳಿಗೆ ಹೋದಾಗ ಶ್ರೀನಿವಾಸ್, ಆನಂದ್, ಲಕ್ಷ್ಮೀಪತಿ, ಅಂಜಿ ಮತ್ತು ಅಶೋಕ್ ಕುಮಾರ್ ರವರು ಸೇರಿ ಹರೀಶನಿಗೆ ಕೈಗಳಿಂದ ಹೊಡೆಯುತ್ತಿದ್ದು,  ಜಗಳ ಬಿಡಿಸಲು ಹೋಗಿದ್ದಕ್ಕೆ ದೂರುದಾರರಿಗೆ  ಶ್ರೀನಿವಾಸ್ ರವರು ಕಲ್ಲಿನಿಂದ ಹೊಡೆದು ಗಾಯ ಮಾಡಿ, ಕೆಟ್ಟಮಾತುಗಳಿಂದ ಬೈದಿರುತ್ತಾರೆ.

ದೂರುದಾರರಾದ ಶ್ರೀ. ಅಶೋಕ್‌ ಕುಮಾರ್‌ ಬಿನ್ ನರಸಿಂಹಮೂರ್ತಿ, ಪಿಚ್ಚಹಳ್ಳಿ ಗ್ರಾಮ ರವರು ದಿನಾಂಕ:18.04.2021 ರಂದು ಸಂಜೆ 6-00 ಗಂಟೆಯಲ್ಲಿ ಸ್ನೇಹಿತ ಶ್ರೀನಿವಾಸ್ ರವರೊಂದಿಗೆ ಪಿಚ್ಚಹಳ್ಳಿಯಿಂದ ಉರಿಗಾಂಪೇಟೆಗೆ ಹೋಗುವ ಮುಖ್ಯ ತಾರ್ ರಸ್ತೆಯಲ್ಲಿರುವಾಗ, ಶ್ರೀವಿವಾಸ್ ರವರ ಮೊಬೈಲ್ ಗೆ ಮುನಿರಾಜು ರವರು ಕರೆ ಮಾಡಿ ಎಲ್ಲಿದ್ದೀಯಾ” ಎಂದು ಕೇಳಿದ್ದು ಆಗ ಶ್ರೀನಿವಾಸ್ ರವರು  ಪಿಚ್ಚಹಳ್ಳಿಯಿಂದ ಉರಿಗಾಂಪೇಟೆಗೆ ಹೋಗುವ ಮುಖ್ಯ ತಾರ್ ರಸ್ತೆಯಲ್ಲಿದ್ದೇನೆ ಎಂದು ಹೇಳಿದ್ದು, ಅಲ್ಲಿಗೆ  ಮುನಿರಾಜು, ಹರೀಶ್, ಸತೀಶ್, ಕಾರ್ತಿಕ್ ಮತ್ತು ವಿನೋದ್ ರವರು ಬಂದು ಶ್ರೀನಿವಾಸ್ ರವರನ್ನು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆಯುತ್ತಿರುವಾಗ ದೂರುದಾರರು ಜಗಳ ಬಿಡಿಸಲು ಹೋಗಿದ್ದಕ್ಕೆ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು, ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಜಯಮ್ಮ ಕೊಂ ಮುನಿಯಪ್ಪ, ತುಮಟಗೆರೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 04.04.2021 ರಂದು ರಾತ್ರಿ 2 ಸೀಮೆ ಹಸುಗಳು ಬೆಲೆ 1,40,000/- ರೂಗಳನ್ನು ಮನೆಯ ಮುಂದೆ ಅಂಗಳದಲ್ಲಿ ಕಟ್ಟಿ ಹಾಕಿದ್ದು, ರಾತ್ರಿ 1-00 ಗಂಟೆಗೆ ನೋಡಿದಾಗ ಯಾರೋ ಕಳ್ಳರು ಎರಡು ಹಸುಗಳನ್ನು ಮತ್ತು ತನ್ನ ಬಾವನ ಒಂದು ಹಸು ಬೆಲೆ 50,000/- ರೂಪಾಯಿ ಬಾಳುವುದನ್ನು ಒಟ್ಟು ಮೂರು ಹಸುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಕೃಷ್ಣಪ್ಪ, ಬಡಮಾಕನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು   ರವರ  ಮಗ ಗೌತಮ್, 14  ವರ್ಷ  ರವರು ದಿನಾಂಕ 19-04-2021 ರಂದು  ಮದ್ಯಾಹ್ನ 12.00 ಸ್ನೇಹಿತ ರೊಂದಿಗೆ  ಗ್ರಾಮದ ಬಳಿ ಇರುವ  ಕೃಷಿ ಹೊಂಡಾದಲ್ಲಿ  ಈಜಾಡಲು  ಹೋಗಿ ಆಕಸ್ಮಿಕವಾಗಿ  ನೀರಿನಲ್ಲಿ ಮುಳಗಿ  ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *