ದಿನದ ಅಪರಾಧಗಳ ಪಕ್ಷಿನೋಟ 18 ನೇ ಮೇ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 17.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಇತರೆ : 01 (ESSENTIAL COMMODITIES ACT)

            ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆಯ ಪಿ.ಆರ್.ಎಸ್ & ಪಿ.ಆರ್.ಎಸ್ ಆಗ್ರೋಟೆಕ್ ರೈಸ್ ಮಿಲ್ ನ ಮಾಲೀಕರಾದ ಆ1-ಆರ್. ರಘುನಾಥ್ ಶೆಟ್ಟಿ ಮತ್ತು ಮಿಲ್ ಗುಮಾಸ್ತ ಆ2-ಬಿ.ಎಂ. ರಾಮು ಹಾಗೂ ಇತರರು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸರ್ಕಾರ ಬಿಡುಗಡೆ ಮಾಡಿರುವ ಅಕ್ಕಿಯನ್ನು ವಿವಿಧ ಮೂಲಗಳಿಂದ ಅಕ್ರಮವಾಗಿ ಖರೀದಿ ಮಾಡಿ ತಮ್ಮ ಅಕ್ಕಿಗಿರಣಿಯಲ್ಲಿ ಪಾಲಿಶ್ ಮಾಡಿ ವಿವಿಧ ಬ್ರಾಂಡಿನ ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದಾಗಿ ಬಂದ ಭಾತ್ಮೀ ಮೇರೆಗೆ ಈ ಕೇಸಿನ ದೂರುದಾರರಾದ ಅಭಿಜಿತ್, ಆಹಾರ ಆಧಿಕಾರಿ, ಬಂಗಾರಪೇಟೆ ರವರು ದಿನಾಂಕ 16.05.2021 ರಂದು ಮದ್ಯಾಹ್ನ ಜಂಟಿ ಕಾರ್ಯಾಚರಣೆ ಮಾಡಿ, ಅಕ್ಕಿ ಗಿರಣಿಯಲ್ಲಿ ದಾಸ್ತಾನು ಮಾಡಿದ್ದ 197 ಕ್ವಿಂಟಾಲ್ ಗ್ರೇಡ್-ಎ ದರ್ಜೆಯ ಬೆಣ್ತೆ ಅಕ್ಕಿ ಬೆಲೆ ಸುಮಾರು 4,92,500/- ರೂಗಳು ಬಾಳುವುದನ್ನು ಹಾಗೂ ಅಕ್ಕಿ ಗಿರಣಿಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ್, ಸಿಪಿಯು, ದಾಖಲೆ ಪತ್ರಗಳು, ವಿಡಿಯೋ ಚಿತ್ರೀಕರಣ, ಛಾಯಾ ಚಿತ್ರಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಂಡು, ಸದರಿ ಅಕ್ಕಿಯನ್ನು ಕೆ.ಎಫ್.ಸಿ.ಎಸ್.ಸಿ ಸರ್ಕಾರಿ ಸಗಟು ಕೇಂದ್ರ ರವರ ವಶಕ್ಕೆ ನೀಡಿದ್ದು, ಸದರಿ ಅಕ್ಕಿಗಿರಣಿ ಮಾಲೀಕ ಮತ್ತು ಅವರ ಜೊತೆ ಇತರೆ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ಸೇರಿಕೊಂಡು ಸರ್ಕಾರ ಮತ್ತು ಸಾರ್ವಜನಿಕರಿಗೆ ವಂಚನೆ, ಮೋಸ, ದ್ರೋಹ ಹಾಗೂ ಸಂಚು ಮಾಡಿರುವುದಾಗಿ ದೂರು ನೀಡಿರುತ್ತಾರೆ.

ಅಬ್ಕಾರಿ ಕಾಯ್ದೆ: 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 17.05.2021  ರಂದು ಬೆಳಿಗ್ಗೆ ಸುಮಾರು 11.45  ಗಂಟೆಗೆ  ಈ ಕೇಸಿನ ದೂರುದಾರರಾದ ಶಿವಣ್ಣ, ಎ.ಎಸ್‌.ಐ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯೊಂದಿಗೆ ರಾಜಪೇಟೆ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅನುವು ಮಾಡುಕೊಟ್ಟಿದ ಆರೋಪಿ ರಘು, ರಾಜ್‌ಪೇಟ್ ರಸ್ತೆ ರವರನ್ನು ಪಂಚರಸಮಕ್ಷಮ ವಶಕ್ಕೆ ಪಡೆದು ಕಾನೂನು ರೀತ್ಯ ಕ್ರಮ ಜರುಗಿಸಿರುತ್ತದೆ.

Leave a Reply

Your email address will not be published. Required fields are marked *