ದಿನದ ಅಪರಾಧಗಳ ಪಕ್ಷಿನೋಟ 18ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 17.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 – ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಾಂತರಾಜ್‌ ಬಿನ್ ಗೋಪಾಲ್, ತಮ್ಮೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 13.04.2021 ರಂದು ಬೆಳಿಗ್ಗೆ 11.00 ಗಂಟೆಗೆ ದ್ವಿಚಕ್ರ ವಾಹನ ಸಂಖ್ಯೆ ಕೆಎ01ಹೆಚ್.ಇ3670 ನ್ನು ಬಂಗಾರಪೇಟಯಲ್ಲಿರುವ ಮುಬಾರಕ್ ಹೋಟೆಲ್ ಮುಂಭಾಗ ನಿಲ್ಲಿಸಿ ಬಜಾರ್‌ಗೆ ಹೋಗಿ ಸಾಮಗ್ರಿಗಳನ್ನು ತೆಗೆದುಕೊಂಡು ವಾಪಸ್ಸು 11.30 ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು 35,000/- ರೂ ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಇತರೆ01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ಸೆಂಗೂಟ್ಟವನ್, ಶಿವಾಜಿನಗರ, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್  ರವರು ದೀನಮಲರ್ ಮತ್ತು ದೀನಚೂಡರ್ ಪತ್ರಿಕೆಯ ಜಿಲ್ಲಾ ವರದಿಗಾರನಾಗಿ ಕೆಲಸಮಾಡುತ್ತಿದ್ದು,  ದಿನಾಂಕ 17.04.2021 ರಂದು ಬೆಳಿಗ್ಗೆ 11:00 ಗಂಟೆಗೆ ಬಿ.ಎಂ ರಸ್ತೆಯಲ್ಲಿ  ರಸ್ತೆ ಒತ್ತುವರಿಮಾಡಿ ಕಟ್ಟಿದ್ದ ಪ್ರಿಯಾ ಬಾರ್ ಕಟ್ಟಡ ಮತ್ತು ಎಸ್.ಬಿ.ಐ ಬ್ಯಾಂಕ್ ನ ಕಾಂಪೌಂಡ್ ನ ಗೋಡೆಯನ್ನು ನಗರ ಸಭೆಯ  ಕಾರ್ಯಾಲಯದಿಂದ  ಜೆ.ಸಿ.ಬಿ ತರಿಸಿ ತೆರವುಗೊಳಿಸುತ್ತಿದ್ದು, ದೂರುದಾರರು ಅಲ್ಲಿಗೆ ಹೋಗಿ ಮಾಹಿತಿ ಸಂಗ್ರಹಿಸುತ್ತಿದ್ದಾಗ, ಅಲ್ಲಿದ್ದ ವಾರ್ಡ್ ನಂ. 25 ಕೌನ್ಸಿಲರ್ ಆದ ರಮೇಶ್ ಜೈನ್ ರವರಿಗೆ ದೂರುದಾರರು ಪ್ರಿಯಾ ಬಾರ್ ಮತ್ತು ಎಸ್.ಬಿ.ಐ ಬ್ಯಾಂಕ್ ಕಟ್ಟಡಗಳನ್ನು ಮಾತ್ರ ತೆರವುಗೊಳಿಸುತ್ತೀರಾ?  ಬೇರೆ ರಸ್ತೆಯ ಬದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವುದಿಲ್ಲವೇ?  ಎಂದು  ಪ್ರಶ್ನೆ ಕೇಳುತ್ತಿದಾಗ, ರಮೇಶ್ ಜೈನ್ ರವರು ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಸಂಬಂಧಪಟ್ಟವರನ್ನು ಕೇಳುವಂತೆ ಹೇಳಿದ್ದು,  ಆಗ ಅಲ್ಲಿಯೇ ಇದ್ದ ಜರ್ರಿ @ ಜಯಕುಮಾರ್ ರವರು  ಏಕಾ ಏಕೀ  ದೂರುದಾರರನ್ನು ತಡೆದು ಅಡ್ಡಕಟ್ಟಿ ನಿಲ್ಲಿಸಿ, “ನೀನು ಯಾರು ಅವರನ್ನು ಕೇಳುತ್ತೀಯಾ ನಿನಗೆ ಏನೂ ಅಧಿಕಾರ ಇದೆ” ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು, ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *