ದಿನದ ಅಪರಾಧಗಳ ಪಕ್ಷಿನೋಟ 17 ನೇ ಮೇ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 16.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ಕೊಲೆ ಪ್ರಯತ್ನ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶ್ರೀನಾವಸಗೌಡ, ಬಿಲ್ಲೇರಹಳ್ಳಿ ಗ್ರಾಮ ರವರ ತಾತ ಸಿದ್ದೇಗೌಡ ರವರು ಆರೋಪಿ ಮುನೇಗೌಡ ರವರನ್ನು ಚಿಕ್ಕ ವಯಸ್ಸಿನಲ್ಲಿ  ಕರೆದುಕೊಂಡು ಬಂದು ಸಾಕಿ ಬೆಳೆಸಿದ್ದು, ತಾತ ಮೃತನಾದ ನಂತರ ತಮ್ಮ ತಾತ ಗ್ರಾಮದಲ್ಲಿ ಆರೋಪಿ ಮುನೇಗೌಡ ರವರಿಗೆ ನೀಡಿದ  ಆಸ್ತಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದರು.  ದೂರುದಾರರು ವಾಸದ ಮನೆ ಮುಂದೆ ಇರುವ  ಖಾಲಿ ಜಾಗವು ಮುನೇಗೌಡ ರವರಿಗೆ ಸೇರಿದ್ದು ಎಂದು ಆಗಾಗ ಆ3 ಮತ್ತು ಆತನ ಕುಟುಂಬದವರು ದೂರುದಾರರ ಮೇಲೆ ಜಗಳಕ್ಕೆ ಬರುತ್ತಿದ್ದರು. ಈಗಿರುವಲ್ಲಿ  ದಿನಾಂಕ-16/05/2021 ರಂದು  ಬೆಳಿಗ್ಗೆ ಸುಮಾರು 8.30 ಗಂಟೆಯಲ್ಲಿ  ಪಿರ್ಯಾದಿ ತಮಗೆ ಸೇರಿದ ಖಾಲಿ ಜಾಗದಲ್ಲಿ ಕಲ್ಲುಗಳನ್ನು ಹೂಳಲು ಮಣ್ಣನ್ನು ಅಗೆಯುತ್ತಿದ್ದಾಗ ಆರೋಪಿಗಳಾದ ನವೀನ್, ಮಂಜುನಾಥ್ ಮತ್ತು ಮುನೇಗೌಡ ರವರು ಪಿರ್ಯಾದಿ ಬಳಿ ಬಂದು ಪಿರ್ಯಾದಿಗೆ ಕೆಟ್ಟ ಮಾತುಗಳು ಬೈದು, ಕೊಲೆ ಮಾಡುವ  ಉದ್ದೇಶದಿಂದ ಪಿರ್ಯಾದಿ ಮೇಲೆ ಜಗಳ ಮಾಡಿ ಆರೋಪಿ ವಿಮಲ್ ರವರು ಒಂದು ಚಾಕುವಿನಿಂದ ಪಿರ್ಯಾದಿ ಕತ್ತಿನ ಹಿಂಭಾಗಕ್ಕೆ  ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ. ಅಷ್ಟರಲ್ಲಿ ಪಿರ್ಯಾದಿ ಅಣ್ಣ ಸಿದ್ದೇಗೌಡ ಜಗಳ ಬಿಡಿಸಲು ಬಂದಾಗ ಮಂಜುನಾಥ್ ರವರು ದೊಣ್ಣೆಯಿಂದ ಆತನ ಮೈ ಮೇಲೆ ಹೊಡೆದಿರುತ್ತಾನೆ.

Leave a Reply

Your email address will not be published. Required fields are marked *