ದಿನದ ಅಪರಾಧಗಳ ಪಕ್ಷಿನೋಟ 17ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 16.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಶೀಲಾ ಕೊಂ ಕುಮಾರ್‌, ಸ್ವರ್ಣನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್   ರವರ ಮಗಳಾದ ಪ್ರೀತಿ, 19 ವರ್ಷ ರವರು ದಿನಾಂಕ:14.04.2021 ರಂದು ರಾತ್ರಿ 7:45 ಗಂಟೆಗೆ ಮನೆಯಿಂದ ಹೋದವಳು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.

– ದೊಂಬಿ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಪಾಲಕೃಷ್ಣ ಬಿನ್ ಸೀನಪ್ಪ, ಗರುಡಾದ್ರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ಮತ್ತು ಅಣ್ಣಂದಿರಾದ ಮುನಿರಾಜು  ಮತ್ತು ನಾರಾಯಣಸ್ವಾಮಿ ರವರು  ದಿನಾಂಕ 15-04-2021 ರಂದು  ರಾತ್ರಿ 7.00 ಗಂಟೆಗೆ ಮನೆಯಲ್ಲಿದ್ದಾಗ, ಸುನೀಲ್ ಕುಮಾರ್‌, ಶಕ್ತಿಕುಮಾರ್‍, ಸತೀಶ್‌ಕುಮಾರ್‌, ಸುದೀಪ್‌ ಕುಮಾರ್‌, ಅರುಣ್, ಚಂದ್ರಬಾಬು, ಸೋಮಶೇಖರ್‌ರೆಡ್ಡಿ ಮತ್ತು ಮಂಜುನಾಥ ರವರು  ಆಕ್ರಮ ಗುಂಪು ಕಟ್ಟಿಕೊಂಡು ಮಚ್ಚು, ರಾಡ್‌, ದೊಣ್ಣೆ, ಕೋಲುಗಳನ್ನು ತೆಗೆದುಕೊಂಡು ಬಂದು ದೂರುದಾರರಿಗೆ ಹೊಡೆದು  ರಕ್ತಗಾಯ ಪಡಿಸಿದ್ದು, ಜಗಳ ಬಿಡಿಸಲು ಬಂದ ನಾರಾಯಣಸ್ವಾಮಿ ಮತ್ತು ಮುನಿರಾಜು ರವರನ್ನು ಸಹ ಹೊಡೆದು ಗಾಯಪಡಿಸಿ, ಕೆಟ್ಟಮಾತುಗಳಿಂದ ಬೈದು, ಪ್ರಾಣಬೆದರಿಕೆ ಹಾಕಿ, ದ್ವಿಚಕ್ರವಾಹನ, ಮನೆ ಕಿಟಕಿ ಗಾಜುಗಳನ್ನು ಹೊಡೆದು ನಾಶ ಮಾಡಿರುತ್ತಾರೆ.

Leave a Reply

Your email address will not be published. Required fields are marked *