ದಿನದ ಅಪರಾಧಗಳ ಪಕ್ಷಿನೋಟ 17ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  16.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಕಾಶ್ ಬಿ.ವಿ. ಬಿನ್ ವೆಂಕಟರಾಮಪ್ಪ, ಬಾವರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ, 15.08.2020 ರಂದು ಮಧ್ಯ ರಾತ್ರಿ ಯಾರೋ ದುಷ್ಕರ್ಮಿಗಳು, ಯಾರೋ ಒಬ್ಬ ಅಪರಿಚಿತ ಗಂಡಸನ್ನು ಎಲ್ಲಿಯೋ ಕೊಲೆ ಮಾಡಿ, ಗುರುತು ಸಿಕ್ಕಬಾರದೆಂದು ಮೃತದೇಹವನ್ನು ಬಂಗಾರಪೇಟೆ ತಾಲ್ಲೂಕಿನ ಬಾವರಹಳ್ಳಿ ಗ್ರಾಮದಲ್ಲಿರುವ ಕಸ ವಿಲೇವಾರಿ ಕಟ್ಟಡದ ಪಕ್ಕದಲ್ಲಿರುವ ಗಿಡಗಳನ್ನು ನೆಡಲು ತೋಡಿರುವ ಹಳ್ಳದ ಬದುವಿನಲ್ಲಿ ಹಾಕಿ, ಮಣ್ಣಿನಿಂದ ಮೃತದೇಹವನ್ನು ಮುಚ್ಚಿದ್ದು, ಕಾಲು ಬೆರಳುಗಳು ಮಾತ್ರ ಕಾಣಿಸುವ ರೀತಿಯಲ್ಲಿ ಮಣ್ಣಿನಿಂದ ಮುಚ್ಚಿ, ಹೊರಟು ಹೋಗಿರುತ್ತಾರೆಂದು ದೂರು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅರುಣ್‌ ಕುಮಾರ್‌ ಬಿನ್ ಮುನಿವೆಂಕಟಪ್ಪ, ಕರಿಮಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 15.08.2020 ರಂದು ಸಂಜೆ 4.30 ಗಂಟೆಯಲ್ಲಿ ಶಶಿಕುಮಾರ್ ಎಂಬಾತನನ್ನು ಯಮಹಾ ಡಿಯೋ ದ್ವಿಚಕ್ರ ವಾಹನ ಸಂಖ್ಯೆ:ಕೆ.ಎ.08-ವಿ-1999 ರ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಇಂದಿರಾನಗರ ಬಸ್ ಗೇಟ್ ಬಳಿ ಬರುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ಪಲ್ಸರ್ -220 ದ್ವಿಚಕ್ರ ವಾಹನ ಸಂಖ್ಯೆ: ಕೆ.ಎ.08-ಎಕ್ಸ್ -3919 ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ದೂರುದಾರರಿಗೆ ಮತ್ತು ಶಶಿಕುಮಾರ್ ರವರಿಗೆ ರಕ್ತಗಾಯಗಳಾಗಿರುತ್ತೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಷಣ್ಮುಗಂ ಬಿನ್ ಗೋವಿಂದಪ್ಪ, ಜಕ್ಕರಸನಕುಪ್ಪ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗ ಶಿವಕುಮಾರ್, 30 ವರ್ಷ ರವರು ದಿನಾಂಕ 14.08.2020 ರಂದು  ಸಂಜೆ 4.00 ಗಂಟೆಗೆ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಮನೆಗೆ ವಾಪಸ್ ಬರದೆ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾಗರತ್ನಮ್ಮ, ದಾದೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ಶಿವಪ್ಪ ರವರು ಸಿಮೇಹಸುವೊಂದು ಖಾಯಿಲೆ ಬಂದು ಮರಣ ಹೊಂದಿದ್ದರಿಂದ ಬೇಜಾರು ಮಾಡಿಕೊಂಡು  ದಿನೇ ದಿನೇ  ಮದ್ಯಪಾನ ಮಾಡುವುದು ಜಾಸ್ತಿ ಮಾಡಿಕೊಂಡು  ಮದ್ಯಪಾನ ಮಾಡಲು ಊರಿನಲ್ಲಿ ಮಾಡಿಕೊಂಡಿದ್ದ ಸಾಲವನ್ನು ತೀರಿಸಲಾಗದೇ ದಿನಾಂಕ-08-08-2020 ರಂದು ಮದ್ಯಾಹ್ನ 12.30 ಗಂಟೆಯಲ್ಲಿ  ಮದ್ಯದಲ್ಲಿ ಯಾವುದೋ ಕ್ರಿಮಿನಾಶಕ ಔಷದಿಯನ್ನು ಬೆರೆಸಿಕೊಂಡು ಕುಡಿದಿದ್ದು, ಚಿಕಿತ್ಸೆಗಾಗಿ ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು  ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ 15-08-2020 ರಂದು ರಾತ್ರಿ 7.45 ಗಂಟೆಗೆ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *