ದಿನದ ಅಪರಾಧಗಳ ಪಕ್ಷಿನೋಟ 16ನೇ ಅಕ್ಟೋಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 15.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ಮೋಹನ್ ಸಿಂಗ್ ಬಿನ್ ಲಕ್ಷ್ಮಣ್‌ ಸಿಂಗ್, ಬೈರಾಗಿ ಮಠ, ಮಾಲೂರು ತಾಲ್ಲೂಕು ರವರ ತಮ್ಮ ಭಾರ್ಗವ್ ಸಿಂಗ್, 28 ವರ್ಷ ರವರು ದಿನಾಂಕ 13.10.2020 ರಂದು ಸಂಜೆ 6.10 ಗಂಟೆಯಲ್ಲಿ ನೇರಳೆಕೆರೆ ಗ್ರಾಮದಿಂದ ಬೈರಾಗಿ ಮಠಕ್ಕೆ ಹೋಗಲು ಬೂದಿಕೋಟೆಯ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನ ಡಿಸ್ಕವರ್ ಸಂಖ್ಯೆ ಕೆಎ-08-ಕ್ಯೂ-2711 ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಸ್ಕೂಟಿ ಸಂಖ್ಯೆ ಕೆಎ-53-ಯು-3071 ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭಾರ್ಗವ್ ಸಿಂಗ್ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ್ದು, ಭಾರ್ಗವ್ ಸಿಂಗ್ ರವರಿಗೆ ರಕ್ತಾಯಗಳಾಗಿರುತ್ತದೆ.

 

– ಮೋಸ/ವಂಚನೆ : 01

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುರಳಿ ಬಿನ್ ಜಯಪಾಲ್, ಚಾಮರಾಜ್‌ಪೇಟ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರಿಗೆ ಫೇಸ್‌ ಬುಕ್ ನಲ್ಲಿ ಮೊಬೈಲ್ ನಂ. +447440020686 ನಲ್ಲಿ ಒಬ್ಬಮಹಿಳೆ ಪರಿಚಯವಾಗಿ ದು, ಆಕೆಯನ್ನು ಪಿರ್ಯಾದಿಯು ತನ್ನ ಮೊಬೈಲ್ ನಂ. 9448209439 ದಿನಾಂಕ.08.10.2020 ರಂದು ವಾಟ್ಸ್ ಆಪ್ ಮೂಲಕ ಸಂಪರ್ಕಿಸಲಾಗಿ ತಾನು ಅಮ್ರಿತ ಶರ್ಮ ಎಂತ ಪರಿಚಯ ಮಾಡಿಕೊಂಡು ವಾಟ್ಸ್ ಆಪ್ ನಲ್ಲಿ ಚಾಟಿಂಗ್ ಮಾಡಿದ್ದು, ದಿನಾಂಕ.12.10.2020 ರಂದು U.K ಯಿಂದ ಬೆಂಗಳೂರಿಗೆ ಬರುವುದಾಗಿ ನಂಬಿಸಿ, ದೂರುದಾರರಿಗೆ ಮೊಬೈಲ್ ನಂಬರ್ 9311528029 ನ್ನು ನೀಡಿ, ಜ್ಯೋತಿ ಎಂಬುವರನ್ನುಸಂಪರ್ಕಿಸಲು ಸೂಚಿಸಿದ್ದು, ಆಕೆಯು ತಾನು 2,50,000/- U.K POUNDS ನ್ನು ತಂದಿದ್ದು ಕಸ್ಟಮ್ಸ್ ರವರು ಹಿಡಿದುಕೊಂಡಿದ್ದು, ಅವರಿಂದ ಕ್ಲಿಯರೆನ್ಸ್ ಪಡೆದುಕೊಳ್ಳಲು 52,000/- ರೂಪಾಯಿಗಳನ್ನು ಪಾವತಿಸಲು ಸೂಚಿಸಿದ್ದು, ಅದನ್ನು ನಂಬಿ ದೂರುದಾರರು ಎಸ್.ಬಿ.ಐ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆ ನಂ.39651915442, IFSC CODE SBIN0017413 ರ ಖಾತೆಗೆ 52,000/- ರೂಪಾಯಿಗಳನ್ನು ಜಮೆ ಮಾಡಿದ್ದು, ನಂತರ ದೂರುದಾರರಿಗೆ ಆರೋಪಿಗಳು ಹಣವನ್ನು ವಾಪಸ್ಸು ಮಾಡದೇ ಮೋಸ ಮಾಡಿರುತ್ತಾರೆ.

 

– ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುರುಗೇಶ್ ಬಿನ್ ನಟೇಶ್‌, ಬೆನ್ನವಾರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೂ ಮತ್ತು ಅದೇ ಗ್ರಾಮದ ಪಳನಿ ರವರಿಗೂ ಜಮೀನಿನ ವಿವಾದವಿದ್ದು, ದಿನಾಂಕ 15.10.2020 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ದೂರುದಾರರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಪಳನಿ ಮತ್ತು ಲಕ್ಷ್ಮಿ ರವರು ದೂರುದಾರರ ಬಳಿ ಬಂದು ಕೆಟ್ಟ ಮಾತುಗಳಿಂದ ಬೈದು, ದೊಣ್ಣೆ ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

– ಇತರೆ :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕಳುವಾಗಿರುವ ವಾಹನವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿರುತ್ತಾರೆ. ದೂರುದಾರರಾದ ಶ್ರೀ. ಶಿವರಾಜ್ ಪಿ.ಎನ್. ಪಿ.ಸಿ. 81 ಮತ್ತು ಶ್ರೀ. ಚೇತನ್ ಯಾದವ್, ಎಸ್.ಆರ್. ಪಿ.ಸಿ. 17 ರವರು ದಿನಾಂಕ.15-10-2020 ರಂದು ರಾತ್ರಿ 7-00 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ, ಕಿರಣ್, ಕೋಡಿಹಳ್ಳಿ ಗ್ರಾಮ, ಮಾಲೂರು ತಾಲ್ಲೂಕು ರವರು ಸುರಬಿ ಗ್ರ್ಯಾಂಡ್ ಹೋಟೆಲ್ ಸಮೀಪವಿರುವ ಗಂಗಾಧರ್ ಎಂಬುವರಿಗೆ ಸೇರಿದ ಹೊಸದಾಗಿ ಕಟ್ಟುತ್ತಿರುವ ಶೆಡ್ ಬಳಿ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ನಿಂತಿದ್ದು, ಪೊಲೀಸರನ್ನು ಕಂಡೊಡನೆ ಆತನು ಮುಖವನ್ನು ಮರೆಮಾಚಿಕೊಂಡು ಅನುಮಾನಾಸ್ಪದವಾಗಿ ನಡೆದುಕೊಂಡು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ್ದು, ಆತನನ್ನು ಹಿಡಿದು ಆತನ ಬಳಿ ಇದ್ದ SUZUKI FIERO ದ್ವಿಚಕ್ರ ವಾಹನ ಸಂಖ್ಯೆ KA03-EE-0605 ವಾಹನದ ದಾಖಲಾತಿಗಳನ್ನು ಕೇಳಲಾಗಿ ಸಮಂಜಸವಾದ ಉತ್ತರ ನೀಡದೆ ಇದ್ದು, ಸದರಿ ವಾಹನವನ್ನು ಎಲ್ಲಿಂದಲೋ ಕಳುವು ಮಾಡಿಕೊಂಡು ಬಂದಿರಬಹುದೆಂದು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವಾಜಿರಾವ್ ಬಿನ್ ಲೇಟ್ ಜಯರಾವ್, 19 ವರ್ಷ, ದಿನ್ನೂರು ಗ್ರಾಮ ಗ್ರಾಮ ರವರ ತಾಯಿ ಶ್ರೀಮತಿ ನಾರಯಣಿಬಾಯಿ, 60 ವರ್ಷ ರವರಿಗೆ 06 ತಿಂಗಳುಗಳಿಂದ ಹೊಟ್ಟೆ ನೋವು ಬರುತ್ತಿದ್ದರಿಂದ ದಿನಾಂಕ 15.10.2020 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ ಮನೆಯ ಬಾತ್‌ರೂಂನಲ್ಲಿಟ್ಟಿದ್ದ ಆಸೀಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

 

Leave a Reply

Your email address will not be published. Required fields are marked *