ದಿನದ ಅಪರಾಧಗಳ ಪಕ್ಷಿನೋಟ 15 ನೇ ಮೇ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 14.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

 

 

ಜೂಜಾಟ ಕಾಯ್ದೆ: 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 14.05.2021 ರಂದು ಮದ್ಯಾಹ್ನ 1.30 ಗಂಟೆಯಲ್ಲಿ ಆರೋಪಿಗಳಾದ ಶಿವಾ, ಮದನ್, ಶಿವರಾಜ, ಚಂದ್ರ ಮೋಹನ್, ಸೀನಪ್ಪ, ತಿಪ್ಪಯ್ಯ, ನಾಗರಾಜ್ ಮತ್ತು ಅಮರೇಶ, ಬಂಗಾರಪೇಟೆ ವಾಸಿರವರುಗಳು  ಠಾಣಾ ಸರಹದ್ದಿನ ತಿಮ್ಮಾಪುರ ಗ್ರಾಮದ ಕೆರೆಯಲ್ಲಿ ಕನೂನು ಬಾಹಿರವಾಗಿ ಇಸ್ಪೀಟ್ ಎಲೆಗಳನ್ನು ಬಳಸಿಕೊಂಡು, ಹಣವನ್ನು ಪಣವಾಗಿಟ್ಟು ಕೋಳಿಪಂದ್ಯದ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಜಗದೇಶ್ ರೆಡ್ಡಿ, ಪಿಎಸ್‌ಐ ಬಂಗಾರಪೇಟೆ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ಸ್ಥಳದಲ್ಲಿ ಜೂಜಾಟವಾಡಲು ಉಪಯೋಗಿಸುತ್ತಿದ್ದ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಟಾರ್‌ಪಾಲ್, 52 ಇಸ್ಪೀಟ್ ಎಲೆಗಳು, ಸದರಿ ಟಾರ್‌ಪಾಲ್ ಮೇಲಿದ್ದ ನಗದು ಹಣ 3,480/- ರೂಗಳನ್ನು, ಮದ್ಯಾಹ್ನ 1.45 ಗಂಟೆಯಿಂದ 5.45 ಗಂಟೆವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತದೆ.

 

ಅಬ್ಕಾರಿ ಕಾಯ್ದೆ: 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ14.05.2021 ರಂದು ಬೆಳಿಗ್ಗೆ 11.45  ಗಂಟೆಯಲ್ಲಿ ಈ ಕೇಸಿನ ಆರೋಪಿ ಗುಲ್ಲಪ್ಪ, ಕನ್ನಿಂಬೆಲೆ ಗ್ರಾಮ ರವರು ತನ್ನ ಮನೆಯ ಹಿಂಭಾಗದಲ್ಲಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈ ಕೇಸಿನ ದೂರುದಾರರಾದ ಜಗದೇಶ್ ರೆಡ್ಡಿ, ಪಿಎಸ್‌ಐ ಬಂಗಾರಪೇಟೆ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ಸ್ಥಳದಲ್ಲಿದ್ದ ಮಧ್ಯವನ್ನು ಪಂಚರ ಸಮಕ್ಷಮ ಬೆಳಿಗ್ಗೆ 11.45  ಗಂಟೆಯಿಂದ ಮದ್ಯಾಹ್ನ 12.30 ಗಂಟೆವರೆಗೆ  ಪಂಚನಾಮೆಯಲ್ಲಿ ವಶಪಡಿಸಿಕೊಂಡು ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತದೆ.

Leave a Reply

Your email address will not be published. Required fields are marked *