ದಿನದ ಅಪರಾಧಗಳ ಪಕ್ಷಿನೋಟ 14ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 13.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ರಸ್ತೆ ಅಪಘಾತ ಪ್ರಕರಣ  :  02

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆನಂದ್‌ ಬಿನ್ ಸುಂದರಪ್ಪ, ಸಂಗನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 12.04.2021 ರಂದು ರಾತ್ರಿ 7.30 ಗಂಟೆಗೆ HERO HONDA SPLENDER ದ್ವಿಚಕ್ರ ವಾಹನ   ನಂ. KA04ED5711  ರಲ್ಲಿ ಕ್ಯಾಸಂಬಳ್ಳಿ-ರಾಜಪೇಟೆ ಮುಖ್ಯ ರಸ್ತೆಯ ಬಸವನ ಮಿಟ್ಟದ ಬಳಿ ರಸ್ತೆಯ ಹೋಗುತ್ತಿದ್ದಾಗ, ಎದುರುಗಡೆಯಿಂದ ಆಟೋ ಸಂಖ್ಯೆ KA 08  4270 ರ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ ರಕ್ತಗಾಯಗಲಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಕುಲ್ ಬಿನ್ ಮುನಿಕೃಷ್ಣಪ್ಪ, ಘಟ್ಟಕಾಮದೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ 13.04.2021 ರಂದು ಬೆಳಿಗ್ಗೆ 6.30 ಗಂಟೆಯಲ್ಲಿ ಗೋವರ್ಧನ್ ರವರು ತನ್ನ ತಾಯಿ ಸಕ್ಕೂಬಾಯಿ, 65 ವರ್ಷ ರವರನ್ನು ಬಜಾಜ್ ಸಿಟಿ 100 ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಎಕ್ಸ್-8990 ರಲ್ಲಿ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು, ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿರುವ ಚಿಕ್ಕ ಅಂಕಂಡಹಳ್ಳಿ ಗ್ರಾಮದ ಸಮೀಪ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ನಾಯಿಗಳು ಅಡ್ಡಬಂದಿದ್ದರಿಂದ ಗೋವರ್ಧನ್ ಮತ್ತು ಸಕ್ಕೂಬಾಯಿ ಇಬ್ಬರೂ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಾಗ, ಗೋವರ್ಧನ್ ಮತ್ತು ಸಕ್ಕೂಬಾಯಿ ರವರಿಗೆ ರಕ್ತಗಾಯಗಳಾಗಿರುತ್ತದೆ. ಸಕ್ಕೂಬಾಯಿ ರವರನ್ನು ಬೆಂಗಳೂರಿನ ಮಾರತ್ಹಳ್ಳಿ ಬಳಿಯಿರುವ ಸಕ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಸಕ್ಕೂಬಾಯಿ ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 9.00 ಗಂಟೆಗೆ ಮೃತಪಟ್ಟಿರುತ್ತಾರೆ.

– ಜೂಜಾಟ ಪ್ರಕರಣ  : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.04.2021 ರಂದು ಮಧ್ಯಾಹ್ನ 2.00 ಗಂಟೆಗೆ ಆರಿಮಾನಹಳ್ಳಿ ಗ್ರಾಮದ ಕುಂಟಿ ಗಂಗಮ್ಮ ದೇವಸ್ಥಾನದ ಬಳಿ ಇರುವ ಹೊಂಗೆ ಮರದ ಕೆಳಗೆ ಹಣವನ್ನು ಪಣವಾಗಿಟ್ಟುಕೊಂಡು ಹುಣಸೆ ಬೀಜಗಳ ಜೂಜಾಟ ಆಡುತ್ತಿದ್ದ, 1.ಮಲ್ಲಪ್ಪ, 2.ವೆಂಕಟೇಶಪ್ಪ, 3. ಕೋದಂಡ, ವಾಸ ಆರಿಮಾನಹಳ್ಳಿ ಗ್ರಾಮ ಮತ್ತು ಇತರೆ 3 ಜನರ ಮೇಲೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ಮಲ್ಲಪ್ಪ, ವೆಂಕಟೇಶಪ್ಪ ರವರನ್ನು ಹಿಡಿದಿದ್ದು, ಉಳಿದ 4 ಜನರು ಓಡಿಹೋಗಿರುತ್ತಾರೆ.  ಸ್ಥಳದಲ್ಲಿದ್ದ 4 ಹುಣಸೆ ಬೀಜಗಳು  ಮತ್ತು 650 /-ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಇತರೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ಗೋಪಾಲಪ್ಪ, ಹನುಮಂತರಾಯನದಿನ್ನೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 13.04.2021 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಭೈರನಾಯಕನಹಳ್ಳಿ ಗ್ರಾಮದ ಮೂರ್ತಿ ರವರ ದ್ವಿಚಕ್ರವಾಹನದಲ್ಲಿ ವಟ್ರಕುಂಟೆ ಗ್ರಾಮದ ನಾರಾಯಣಪ್ಪ ರವರ ಬೇಕರಿಯ ಬಳಿ ಹೋದಾಗ, ನಾರಾಯಣಪ್ಪ ರವರು ಮೂರ್ತಿ ರವರಿಗೆ “ನೀನು ಮತ್ತು ಕೆಲವರು ಸೇರಿಕೊಂಡು ರಾಜಕಾಲುವೆ ಕೆಲಸವನ್ನು  ಕೊಡಬಾರದೆಂದು  ಪಂಚಾಯಿತಿಯಲ್ಲಿ ಅರ್ಜಿಯನ್ನು ಕೊಟ್ಟಿರುತ್ತೀರಿ” ಎಂದು ಹೇಳಿ  ಕೆಟ್ಟ ಮಾತುಗಳಿಂದ ಬೈದು, ಮೂರ್ತಿ ರವರನ್ನು ಒಂದು ಚಾಕುವಿನಿಂದ ಹೊಡೆಯಲು ಬಂದಿದ್ದು, ದೂರುದಾರರು ಮೂರ್ತಿ ರವರಿಗೆ “ಯುಗಾದಿ ಹಬ್ಬ  ಯಾಕೇ ಗಲಾಟೆ ಮಾಡಿಕೊಳ್ಳುವುದು ಬೇಡ ಹೋಗೋಣ ಬಾ” ಎಂದು ಸಮಾದಾನ ಮಾಡಿ ಇಬ್ಬರು ದ್ವಿಚಕ್ರವಾಹನವನ್ನು ಹತ್ತಿಕೊಳ್ಳುತ್ತಿದ್ದಾಗ,  ನಾರಾಯಣಪ್ಪ ರವರು ದೂರುದಾರರಿಗೆ “ನೀನು ಮೂರ್ತಿಗೆ ಸಹಾಯ ಮಾಡುತ್ತೀಯಾ” ಎಂದು ಹೇಳಿ ಕೆಟ್ಟ ಮಾತುಗಳಿಂದ ಬೈದು ಜಾತಿ ನಿಂದನೆ ಮಾಡಿ, ಅಂಗಡಿಯಲ್ಲಿಟ್ಟಿದ್ದ  ಜಾಲರೆಯಿಂದ  ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *