ದಿನದ ಅಪರಾಧಗಳ ಪಕ್ಷಿನೋಟ 13ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍12.01.2020 ರಂದು ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರತ್ತದೆ. ದೂರುದಾರರಾದ ಶ್ರೀಮತಿ. ಮಂಗಮ್ಮ ಕೊಂ ಗೋವಿಂದಪ್ಪ, ಬುವನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 11.01.2020 ರಂದು ರಾತ್ರಿ 8.00 ಗಂಟೆಯಲ್ಲಿ ಮನೆಯ ಬಳಿ ಇದ್ದಾಗ, ಆರೋಪಿ ನಾಗಭೂಷಣ್ ಬಂದು  ದೂರುದಾರರ ಗಂಡ ಗೋವಿಂದಪ್ಪ ರವರನ್ನು ಕೆಟ್ಟ ಮಾತುಗಳಿಂದ ಬೈದಿದ್ದು, ಅದಕ್ಕೆ ದೂರುದಾರರು ನಾಗಭೂಷಣ್‌ ರವರನ್ನು ಯಾಕೆ ಈ ರೀತಿ ಬೈಯುತ್ತಿರುವುದು ಎಂದು ಕೇಳಿದ್ದಕ್ಕೆ ಆರೋಪಿ ನಾಗಭೂಷಣ್‌ ರವರು ನೀಲಗಿರಿ ದೊಣ್ಣೆಯಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣ ಬಿನ್ ಆವಲಪ್ಪ, ಸಂಗನಹಳ್ಳಿ ಗ್ರಾಮ, ಕೆ.ಜಿ.ಎಫ್ ರವರ ಮಗನಾದ ವಿಶ್ವನಾಥ್, 39 ವರ್ಷ ರವರಿಗೆ ಈಗ್ಗೆ ಸುಮಾರು 12 ವರ್ಷಗಳಿಂದ ಬುದ್ದಿ ಭ್ರಮಣೆಯುಂಟಾಗಿ ಮಾನಸಿಕ ಅಸ್ವಸ್ಥನಾಗಿದ್ದು, ದಿನಾಂಕ 04.01.2020 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ವಿಶ್ವನಾಥ್‌  ರವರು  ಮನೆಯಿಂದ ಎಲ್ಲಿಯೋ ಹೊರಟು ಹೋಗಿ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚೆನ್ನಕೇಶವರೆಡ್ಡಿ ಬಿನ್ ರಾಮಲಿಂಗಾರೆಡ್ಡಿ, ಮರದಘಟ್ಟ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಂದೆ ಎಂ.ಎನ್. ರಾಮಲಿಂಗಾರೆಡ್ಡಿ, 80 ವರ್ಷ ರವರು ದಿನಾಂಕ 06.01.2020 ರಂದು  ಮದ್ಯಾಹ್ನ 1.00  ಗಂಟೆಗೆ    ಔಷದಿಯನ್ನು  ಕುಡಿಯಲು ಹೋಗಿ,   ಕಣ್ಣು  ಸರಿಯಾಗಿ ಕಾಣದೆ ಔಷದಿಯ ಬದಲು,  ಮನೆಯಲ್ಲಿ  ಇಟ್ಟಿದ್ದ ಟಮೋಟೋ ಗಿಡಗಳಿಗೆ  ಸಿಂಪಡಿಸುವ ಕ್ರಿಮಿನಾಶವನ್ನು  ಕುಡಿದಿದ್ದು, ಚಿಕಿತ್ಸೆಗಾಗಿ ಕೋಲಾರ ಆರ್.ಎಲ್ಜಾಲಪ್ಪ  ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ  ಪಲಕಾರಿಯಾಗದೆ  ದಿನಾಂಕ 11.01.2020 ರಂದು  ರಾತ್ರಿ 8.30 ಗಂಟೆಗೆ   ಮೃತ ಪಟ್ಟಿರುತ್ತಾರೆ.

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶ್ಯಾಮಲಾದೇವಿ, ಡಿ ಬ್ಲಾಕ್‌, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ಗಂಡನಾದ ರಾಜನ್ ಬಿನ್ ಜೂಲಿಯಸ್, 38 ವರ್ಷ, ರವರು  ಸುಮಾರು 03 ತಿಂಗಳಿಂದ ಕಿಡ್ನಿ ಹಾಗೂ ಹೊಟ್ಟೆ ನೋವು ಸಮಸ್ಯೆಯಿಂದ ಬಳಲುತ್ತಿದ್ದು, ದಿನಾಂಕ:11-01-2020 ರಂದು ರಾತ್ರಿ ರಾಜನ್ ರವರು ಅತಿಯಾಗಿ ಮದ್ಯಪಾನ ಸೇವನೆ ಮಾಡಿಕೊಂಡು ಮನೆಗೆ ಬಂದು ಮಲಗಿದ್ದು, ಮದ್ಯ ರಾತ್ರಿಯಲ್ಲಿ  ಹೊಟ್ಟೆನೋವು ಬಂದಿದ್ದು, ದಿನಾಂಕ:12-01-2020 ರಂದು ಬೆಳಿಗ್ಗೆ 8-00 ಗಂಟೆಗೆ ಚಿಕಿತ್ಸೆಗೆ ಕೆ.ಜಿ.ಎಫ್ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯಾದಿಕಾರಿಗಳು ಪರೀಕ್ಷಿಸಲಾಗಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *