ದಿನದ ಅಪರಾಧಗಳ ಪಕ್ಷಿನೋಟ 13ನೇ ಮಾರ್ಚ್‌ 2021

 

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 13.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನ  ಪ್ರಕರಣ ದಾಖಲಾಗಿರುತ್ತದೆ. 3 ದಿನಗಳ ಹಿಂದೆ ಹಾರೋಹಳ್ಳಿ ಗ್ರಾಮದ ಗಂಗಮ್ಮ ದೇವಸ್ಥಾನದ ಬಳಿ ಈ ಕೇಸಿನ ಆರೋಪಿ ಧನರಾಜ್, ಹಾರೋಹಳ್ಳಿ ಗ್ರಾಮ ಬಂಗಾರಪೇಟೆ ರವರು ದ್ವಿಚಕ್ರ ವಾಹನನ್ನು ನಿಲ್ಲಿಸಿದ್ದು,  ಯಾರೋ ಗಾಡಿಯನ್ನು  ಬೇರೆ ಕಡೆ  ನಿಲ್ಲಿಸಿರುತ್ತಾರೆ. ಈ ವಿಚಾರದಲ್ಲಿ ಆರೋಪಿ ಧನರಾಜ್  ರವರು ಈ ಕೇಸಿನ ಪಿರ್ಯಾದಿ ಸಂದೀಪ್, ೨೧ ವರ್ಷ, ಹಾರೋಹಳ್ಳಿ ಗ್ರಾಮ ಇವರ ತಮ್ಮನಾದ ಅಮರೇಶನ ಮೇಲೆ ಗಲಾಟೆ ಮಾಡಿ ಕೈಯಿಂದ ಕೆನ್ನೆಗೆ ಹೊಡೆದಿದ್ದು, ಪಿರ್ಯಾದಿಯ ತಂದೆ ಮುನಿಯಪ್ಪ ರವರು ಆರೋಪಿಯ ಧನರಾಜ್ ರವರ ಮನೆಯ ಬಳಿಗೆ ಹೋಗಿ ಆರೋಪಿ ತಂದೆ  ವೆಂಕಟರಾಮನಪ್ಪ ರವರನ್ನು ಕುರಿತು, ಯಾಕೆ ನನ್ನ ಮಗನನ್ನು ಹೊಡೆದಿದ್ದು ಎಂತ  ಕೇಳಿದ್ದು, ಈ ವಿಚಾರದಲ್ಲಿ ದಿನಾಂಕ 12.03.2021 ರಂದು ಸಂಜೆ ಸುಮಾರು 6.30 ಗಂಟೆಯಲ್ಲಿ ಆರೋಪಿ ಧನರಾಜ್ ರವರು ಪಿರ್ಯಾದಿಯ ಮನೆಯ ಬಳಿ ಬಂದು ಪಿರ್ಯಾದಿಗೆ ಕೆಟ್ಟ ಮಾತುಗಳಿಂದ ಬೈದು  ಏಕಾಏಕಿ  ಬಂದು ಚಾಕುವಿನಿಂದ ಸಾಯಿಸುವ  ಉದ್ದೇಶದಿಂದ ಹೊಟ್ಟೆಯ ಬಳಿ ಎಡ ಎದೆಯ ಕೆಳಭಾಗ  ಹಾಗೂ ಬೆನ್ನಿನ ಹಿಂಭಾಗ ತಿವಿದು ರಕ್ತ ಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಸಿರುತ್ತಾರೆ. ಅಷ್ಟರಲ್ಲಿ ಆರೋಪಿ ತಂದೆ ವೆಂಕಟರಾಮನಪ್ಪ ರವರು ಬಂದು ಪಿರ್ಯಾದಿಯ ತಮ್ಮನಾದ ಅಮರೇಶನಿಗೆ ಯಾಕೋ ನನ್ನ ಮಗನೆ, ನನ್ನ ಮಗನನ್ನು ಹೊಡೆದಿದ್ದು, ಎಂದು ಹೇಳಿ  ಕೈಯಿಂದ ಹೊಡೆದಿರುತ್ತಾನೆ.

 ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಗಳು  ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.03.2021 ರಂದು ಬೆಳಿಗ್ಗೆ ಸುಮಾರು 9.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಫರಾಹತ್ ಬೇಗಂ ಕೋಂ ಶೇಖ್ ಕರೀಂ, ದೊಡ್ಡವಲಗಮಾದಿ ಬಂಗಾರಪೇಟೆ ರವರು ಬೆಂಗನೂರು ಬಳಿಯಿರುವ ಐಡಿಪಿಎಲ್ ಗಾರ್ಮೆಂಟ್ಸ್ ನಲ್ಲಿ ಬಿಟ್ಟು ಬರಲು ಪಿರ್ಯಾದಿದಾರರ ಗಂಡನಾದ ಶೇಖ್ ಕರೀಂ ರವರು ತನ್ನ ದ್ವಿಚಕ್ರ ವಾಹನ ಸ್ಪ್ಲೆಂಡರ್ ಪಿರ್ಯಾದಿಯನ್ನು ಮತ್ತು ಅವರ ಮಗಳಾದ ಶಾಜಿಯಾಬಾನು ರವರನ್ನು ಕುಳ್ಳರಿಸಿಕೊಂಡು ಶೇಖ್ ಕರೀಂ ರವರು ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ತಟ್ನಹಳ್ಳಿ ಕೆರೆ ಕ್ರಾಸ್ ತಿರುವು ಬಳಿ ಬರುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ಕಾಮಸಮುದ್ರಂ ಕಡೆಗೆ ಹೋಗಲು ದ್ವಿಚಕ್ರ ವಾಹನ ಎಫ್.ಜಡ್ ಸಂಖ್ಯೆ ಕೆಎ-08-ಎಕ್ಸ್-2453 ನ್ನು ಅದರ ಸವಾರನಾದ ಆರೋಪಿ ಶ್ರೀನಿವಾಸ್ ರವರು ಅತಿವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಶೇಖ್ ಕರೀಂ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ, ಷೇಖ್ ಕರೀಂ, ಪಿರ್ಯಾದಿ ಮತ್ತು ಶಾಜಿಯಾಬಾನು ರವರು ವಾಹನ ಸಮೇತ ಕೆಳಗೆ ಬಿದ್ದಾಗ, ಷೇಖ್ ಕರೀಂ ರವರಿಗೆ ತಲೆಯ ಬಳಿ ರಕ್ತಗಾಯ, ಕೈಗಳ ಮೇಲೆ ತರಚಿದ ಗಾಯಗಳಾಗಿರುತ್ತದೆ. ಪಿರ್ಯಾದಿಗೆ ಎರಡೂ ಕಾಲುಗಳ ಮೇಲೆ ತರಚಿದ ಗಾಯಗಳಾಗಿರುತ್ತದೆ. ಶಾಜಿಯಾಬಾನು ರವರಿರೂ ಸಹ ತರಚಿದ ಗಾಯಗಳಾಗಿರುತ್ತದೆ. ಕೂಡಲೇ ಷೇಖ್ ಕರೀಂ ರವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಬಂದಾಗ, ಶೇಖ್ ಕರೀಂ ರವರಿಗೆ ಅಪಘಾತದಿಂದ ಉಂಟಾಗಿದ್ದ ತೀವ್ರ ಸ್ವರೂಪದ ರಕ್ತಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

 – ಸಾಧಾರಣ ಕಳ್ಳತನ : 01

ಬೇಮಂಗಲ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ  ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರು  ಮಲ್ಲಿಕಾರ್ಜುನ ರೆಡ್ಡಿ, ವೀರರೆಡ್ಡಿಪಲ್ಲಿ, ಕಮಿಗೂರು ತಾಲ್ಲೂಕು, ಆಂದ್ರ ಪ್ರದೇಶ ರವರು ದಿನಾಂಕ-11-03-2021 ರಂದು ಮಧ್ಯಾಹ್ನ 1.00 ಗಂಟೆಗೆ ಶಿವರಾತ್ರಿ ಹಬ್ಬ ಇದ್ದ ಪ್ರಯುಕ್ತ ಶ್ರೀ ಕೋಟಿಲಿಂಗೇಶ್ವರ ಸ್ವಾಮಿ ದೇವಾಲಯ ಕಮ್ಮಸಂದ್ರಕ್ಕೆ ಬಂದು ಕಮ್ಮಸಂದ್ರ ಬಸ್ ನಿಲ್ಣಾಣದ ಪಕ್ಕದಲ್ಲಿ ದ್ವಿಚಕ್ರವಾಹನವನ್ನು ನಿಲ್ಲಸಿ ಲಾಕ್ ಮಾಡಿ ನಂತರ ಶ್ರೀ ಕೋಟಿಲಿಂಗೇಶ್ವರಸ್ವಾಮಿ ದೇವಾಲಯಯಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಮದ್ಯಾಹ್ನ ಸುಮಾರು 3.30 ಗಂಟೆಗೆ ಬಂದು ನೋಡಲಾಗಿ ತನ್ನ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

 ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.03.2021 ರಂದು ಬೆಳಿಗ್ಗೆ ಸುಮಾರು 6.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಬಾಲರಾಜು, ಕಾರಹಳ್ಳಿ ಬಂಗಾರಪೇಟೆ ರವರ ಹೆಂಡತಿಯಾದ ಶ್ರೀಮತಿ ಶೋಭ, ೩೪ ವರ್ಷ ರವರು ಕಾರಹಳ್ಳಿ ಗ್ರಾಮದಲ್ಲಿರುವ ತಮ್ಮ ತೋಟದಲ್ಲಿ ಹುಲ್ಲನ್ನು ಕೊಯ್ಯುತ್ತಿರುವಾಗ ಯಾವುದೋ ಒಂದು ವಿಷ ಹಾವು ಶೋಭ ರವರ ಎಡಗೈ ಬೆರಳಿಗೆ ಕಚ್ಚಿದ್ದು, ಕೂಡಲೇ ಶೋಭ ರವರನ್ನು ಚಿಕಿತ್ಸೆಗಾಗಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು, ಶೋಭ ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 8.00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *