ದಿನದ ಅಪರಾಧಗಳ ಪಕ್ಷಿನೋಟ 12ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 11.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಜೂಜಾಟ ಪ್ರಕರಣ :  03

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 11.04.2021 ರಂದು ಸಂಜೆ 5.20 ಗಂಟೆಯಲ್ಲಿ ಕಾರಹಳ್ಳಿ ಬಡಾವಣೆಯ ಬಳಿಯಿರುವ ಶೆಟಲ್ ಕಾಕ್ ಮೈದಾನದ ಬಳಿ ಯಾವುದೇ ಪರವಾನಿಗೆಯಿಲ್ಲದೇ ಹುಣಸೆಬೀಜಗಳನ್ನು ಬಳಸಿಕೊಂಡು, ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ತೊಡಗಿದ್ದ, ರಮೇಶ, ವೆಂಕಟೇಶ್, ಆರ್ಮುಗಂ, ರಮೇಶ್, ಸೆಂದಿಲ್, ಚಂದ್ರ, ನಾರಾಯಣಸ್ವಾಮಿ, ಗೋವಿಂದರಾಜು ಮತ್ತು ವೆಂಕಟೇಶ ರವರನ್ನು ಪಿ.ಎಸ್.ಐ ಶ್ರೀ. ಜಗದೀಶ್ ರೆಡ್ಡಿ ಮತ್ತು ಸಿಬ್ಬಂದಿ ರವರು ದಾಳಿ ಮಾಡಿ, ಸ್ಥಳದಲ್ಲಿ ಜೂಜಾಟವಾಡಲು ಉಪಯೋಗಿಸುತ್ತಿದ್ದ 04 ಹುಣಸೆಬೀಜಗಳು, 2,220/- ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ 11.04.2021 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ವೇಣುಗೋಪಾಲಪುರ ಗ್ರಾಮದ ಸಮೀಪವಿರುವ ರಾಜಕಾಲುವೆಯ ಬಳಿ ಯಾವುದೇ ಪರವಾನಿಗೆಯಿಲ್ಲದೇ ಕೋಳಿಹುಂಜಗಳನ್ನು ಬಳಸಿಕೊಂಡು, ಹಣವನ್ನು ಪಣವಾಗಿಟ್ಟು ಕೋಳಿಪಂದ್ಯದ ಜೂಜಾಟದಲ್ಲಿ ತೊಡಗಿದ್ದ ಪ್ರಕಾಶ್, ಅಮರೇಶ್, ನಾರಾಯಣಪ್ಪ, ರಾಮಚಂದ್ರಪ್ಪ ಮತ್ತು ರವಿ ರವರ ಮೇಲೆ ದೂರುದಾರರಾದ ಶ್ರೀ. ಜಗದೀಶ್ ರೆಡ್ಡಿ ಮತ್ತು ಸಿಬ್ಬಂದಿ ದಾಳಿ ಮಾಡಿ, ಸ್ಥಳದಲ್ಲಿ ಜೂಜಾಟವಾಡಲು ಉಪಯೋಗಿಸುತ್ತಿದ್ದ ಒಂದು ಕೋಳಿಹುಂಜ, ಕೋಳಿಹುಂಜಗಳ ಕಾಲಿಗೆ ಕಟ್ಟುವ 2 ಕತ್ತಿಗಳು, 4,800/- ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಜುಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:11.04.2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಕದಿರೇನಹಳ್ಳಿ ಗ್ರಾಮದ ಬಳಿಯಿರುವ ಮಾರಿಯಮ್ಮ ದೇವಾಲಯದ ಮುಂಬಾಗದಲ್ಲಿ 1) ಮುನಿಕೃಷ್ಣಪ್ಪ, 2) ಮುನಿಕೃಷ್ಣ, 3) ಮುನಿರಾಜು,  4) ಸುರೇಶ್, 5) ಮಂಜು 6) ನಾಗೇಶ್ ಮತ್ತು 7) ವಿನೋದ್, ವಾಸ. ಕದಿರೇನಹಳ್ಳಿ ಗ್ರಾಮದವರು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಜೂಜಾಟವನ್ನು ಆಡುತ್ತಿದ್ದವರನ್ನು ದೂರುದಾರರಾದ ಶ್ರೀ. ಸೂರ್ಯಪ್ರಕಶ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ಸ್ಥಳದಲ್ಲಿದ್ದ ಪ್ಲಾಸ್ಟಿಕ್ ಚೀಲ, 52 ಇಸ್ಪೀಟ್ ಎಲೆಗಳು ಮತ್ತು 5,500/- ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *