ದಿನದ ಅಪರಾಧಗಳ ಪಕ್ಷಿನೋಟ 12ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 11.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ರಸ್ತೆ ಅಪಘಾತಗಳು : 01

 ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಂಗಮ್ಮ ಕೊಂ ಬಾಬು, ಐಯ್ಯಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮೈದುನನಾದ ವೆಂಕಟೇಶಪ್ಪ ಬಿನ್ ಲೇಟ್ ಪೀವನ್ ಮುನಿಯಪ್ಪ, 37 ವರ್ಷ ರವರು  ದಿನಾಂಕ 11.03.2021 ರಂದು ಮದ್ಯಾಹ್ನ 1-30 ಗಂಟೆಗೆ ದ್ವಿಚಕ್ರ ವಾಹನ ಸಂಖ್ಯೆ KA-07-L-9915 ರಲ್ಲಿ ಕೋಲಾರ  ಬೇತಮಂಗಲ ಮುಖ್ಯರಸ್ತೆ ನ್ಯೂಟೌನ್ ಬಳಿ ರಸ್ತೆಯಲ್ಲಿ  ಹೋಗುತ್ತಿರುವಾಗ, ಕೋಲಾರ ಕಡೆಯಿಂದ ಬರುತ್ತಿದ್ದ ಅಪ್ಪಿ ಲಗೇಜ್ ಆಟೋ ಸಂಖ್ಯೆ KA-08-8770  ರನ್ನು  ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವೆಂಕಟೇಶಪ್ಪ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ  ಪ್ರಯುಕ್ತ  ವೆಂಕಟೇಶಪ್ಪ ರವರಿಗೆ ರಕ್ತಗಾಯಗಳಾಗಿರುತ್ತೆ

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಂಜುಳಾ ಕೊಂ ರಾಮಪ್ಪ, ನೇರಳಕೆರೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ನೇತ್ರಾವತಿ.ಆರ್, 23 ವರ್ಷ ರವರು ದಿನಾಂಕ 08.03.2021 ರಂದು ಸಂಜೆ 5.00 ಗಂಟೆಯಲ್ಲಿ ದೂರುದಾರರ ಅಕ್ಕ ಲಕ್ಷ್ಮಿ ರವರ ಮನೆಯಿಂದ ಹೊರಗೆ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

– ಅಬಕಾರಿ ಕಾಯ್ದೆ : 02

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ 02  ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 11.03.2021 ರಂದು ರಾತ್ರಿ 09.45 ಗಂಟೆಯಲ್ಲಿ ಗರುಡಾದ್ರಹಳ್ಳಿ ಸಮೀಪದ ಕ್ಯಾಸಂಬಳ್ಳಿ-ಕೆ.ಜಿ.ಎಫ್ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ 1) ಪ್ರಶಾಂತ್ ಬಿನ್ ಪುಷ್ಪರಾಜ್, ವಾಸ-ಅಶೋಕ ನಗರ ಬಿ ಬ್ಲಾಕ್, 2) ಸುರೇಶ್ ಕುಮಾರ್ ಬಿನ್ ಎತ್ತುರಾಜ್, ವಾಸ-ಅಶೋಕ ನಗರ ಎ ಬ್ಲಾಕ್, 3) ವಿಶ್ವನಾಥ್ ಬಿನ್ ಸುಬ್ರಮಣ್ಯಂ, ವಾಸ-ನಂ.12, ಸ್ವಾಮಿನಾಥಪುರಂ, 4) ಅಜೇಯ್ ಕುಮಾರ್ ಬಿನ್ ಶ್ರೀನಿವಾಸ್, ವಾಸ-ಪಾರಾಂಡ್ಲಹಳ್ಳಿ, 5) ಪ್ರಶಾಂತ್ ಬಿನ್ ರಾಜೇಶ್, ವಾಸ-ಪಾರಾಂಡ್ಲಹಳ್ಳಿ, ರಾಬರ್ಟಸನ್‌ಪೇಟೆ, ಕೆ.ಜಿ.ಎಪ್ ರವರು ಮದ್ಯಪಾನ ಸೇವನೆ ಮಾಡುತ್ತಿದ್ದವರನ್ನು ಶ್ರೀ. ಲೋಕೇಶ್‌, ಹೆಚ್.ಸಿ,  ತಾಜ್‌ಪಾಷ ಹೆಚ್.ಸಿ ಮತ್ತು ನವೀನ್, ಪಿಸಿ ರವರು ಹಿಡಿದು,  ಸ್ಥಳದಲ್ಲಿದ್ದ (1) ೦7 ಪ್ಲಾಸ್ಟಿಕ್ ಲೋಟ, 2) ಖಾಲಿಯಾಗಿರುವ  180  ಎಂ.ಎಲ್ ನ ORIGINAL CHOICE PACKET (3) ಖಾಲಿಯಾಗಿರುವ 10 ವಾಟರ್ ಪಾಕೇಟ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ 11.03.2021 ರಂದು ರಾತ್ರಿ 09.30 ಗಂಟೆಯಲ್ಲಿ ಆಲ್ಲಿಕುಂಟೆ ಕದಿರೇನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಕೆ.ಡಿ.ಎ ನಿವೇಶನಗಳ ಬಳಿ  ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ 1) ಶಿವರಾಜ್ ಬಿನ್ ಕೃಷ್ಣಪ್ಪ, ವಾಸ-ನಂ.699, ಹಳೆ ಸ್ವರ್ಣಕುಪ್ಪಂ, ರಾಬರ್ಟಸನ್‌ಪೇಟೆ, 2) ಸುರೇಶ್ ಬಿನ್ ಜಯರಾಮ, ವಾಸ- ಹಳೆ ಸ್ವರ್ಣಕುಪ್ಪಂ, ರಾಬರ್ಟಸನ್‌ಪೇಟೆ, 3) ಪ್ರಶಾಂತ್ ಬಿನ್ ಲೋಗನಾಥನ್, ವಾಸ-ಸ್ವರ್ಣನಗರ 11 ನೇ ಡಿ ಕ್ರಾಸ್, ರಾಬರ್ಟಸನ್‌ಪೇಟೆ, 4) ಅವಿನಾಶ ಬಿನ್ ಚಂದ್ರಶೇಖರ್, ವಾಸ ನಂ.284, ರೆಡ್ಡಿ ಗಾರ್ಡನ್, ಬೌರಿಲಾಲ್‌ಪೇಟೆ, ರಾಬರ್ಟಸನ್‌ಪೇಟೆ,  5) ಯೋಗೇಶ್ ಬಿನ್ ಲೇಟ್ ನಾಗಭೂಷಣ, ವಾಸ-ನಂ.1719, 3 ನೇ ಅಡ್ಡ ರಸ್ತೆ, ರಾಬರ್ಟಸನ್‌ಪೇಟೆ, ಕೆ.ಜಿ.ಎಫ್, 6) ಅಶೋಕ ಬಿನ್ ಗೋವಿಂದಸ್ವಾಮಿ, ವಾಸ-ಪಾರಾಂಡ್ಲಹಳ್ಳಿ, ಕೆ.ಜಿಎಫ್, 7) ಸುರೇಶ್ ಬಿನ್ ರಾಮಕೃಷ್ಣಚಾರಿ, ವಾಸ-ಪಾರಾಂಡ್ಲಹಳ್ಳಿ, ರಾಬರ್ಟಸನ್‌ಪೇಟೆ ರವರು ಮದ್ಯಪಾನ ಸೇವನೆ ಮಾಡುತ್ತಿದ್ದವರನ್ನು ಎ.ಎಸ್.ಐ ಶ್ರೀ. ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಹಿಡಿದು ಸ್ಥಳದಲ್ಲಿದ್ದ  (1) 09 ಪ್ಲಾಸ್ಟಿಕ್ ಲೋಟ, 2) ಖಾಲಿಯಾಗಿರುವ  180 ಎಂ.ಎಲ್ ನ ೦8 BAGPIPER PACKET (4) 10 ವಾಟರ್ ಪಾಕೇಟ್ ಗಳಿದ್ದು, 08 ವಾಟರ್ ಪಾಕೇಟ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *