ದಿನದ ಅಪರಾಧಗಳ ಪಕ್ಷಿನೋಟ 10ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 09.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ  ಶ್ರೀ. ನಾರಾಯಣಸ್ವಾಮಿ ಬಿನ್ ಲಕ್ಷ್ಮಣ, ಈಕಂಬಳ್ಳಿ ಗ್ರಾಮ, ಕೋಲಾರ ತಾಲ್ಲೂಕು ರವರ ಸಂಬಂಧಿ ಶಾರದಮ್ಮ ಎಂಬುವರು ಬೀರಂಡಹಳ್ಳಿ ಗ್ರಾಮದಲ್ಲಿ ಮನೆಯನ್ನು ಕಟ್ಟುತ್ತಿದ್ದು, ಸದರಿ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ದೂರುದಾರರೇ ನೋಡಿಕೊಳ್ಳುತ್ತಿದ್ದು, ದಿನಾಂಕ 09.04.2021 ರಂದು ಸದರಿ ಮನೆಗೆ ದೂರುದಾರರು ಸೆಂಟ್ರಿಂಗ್ ಕೆಲಸ ಮಾಡಿದ್ದು, ಸೆಂಟ್ರಿಂಗ್ ಕೆಲಸ ಸರಿಯಿಲ್ಲವೆಂದು ಶಾರದಮ್ಮ ರವರ ಸಂಬಂಧಿ ಮುನಿಯಪ್ಪ ಮತ್ತು ಗಜೇಂದ್ರ ರವರು  ದೂರುದಾರರು ಮತ್ತು ದೂರುದಾರರ ಮಗ ವಿಜಯ್ ರವರು ಬೀರಂಡಹಳ್ಳಿ ಗ್ರಾಮಕ್ಕೆ ರಾತ್ರಿ 9.00 ಗಂಟೆಯಲ್ಲಿ ಬಂದಾಗ ಮನೆಯ ಬಳಿ  ಬಂದಾಗ ಜಗಳ ತೆಗೆದು, ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಕಬ್ಬಿಣದ ರಾಡ್ ನಿಂದ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಶಿಕುಮಾರ್‌ ಬಿನ್ ವೆಂಕಟೇಶಪ್ಪ, ಸೊಂಟಿಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಹೆಂಡತಿ ಶ್ರೀಮತಿ. ಚೈತ್ರ, 21  ವರ್ಷ ರವರು ದಿನಾಂಕ 07.04.2021  ರಂದು ಮಧ್ಯಾಹ್ನ 3.00 ಗಂಟೆಗೆ ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.

ಕನ್ನ ಕಳುವು : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಡಾ|| ಮೋಹನ್, ಜನರಲ್ ಹಾಸ್ಪಿಟಲ್‌ ಕ್ವಾಟ್ರಸ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ:07.04.2021 ರಂದು ಬೆಳಿಗ್ಗೆ 09:00 ಗಂಟೆಗೆ ವಸತಿ ಗೃಹದ ಬೀಗವನ್ನು ಹಾಕಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದು, ನಂತರ ಕರ್ತವ್ಯ ಮುಗಿಸಿಕೊಂಡು  ಸಂಜೆ 4:30 ಗಂಟೆಗೆ ಮನೆಯ ಬಳಿ  ನೋಡಲಾಗಿ, ಮನೆಯ ಮುಂಭಾಗಿಲಿನ ಬೀಗದ ಲಾಕ್ ಅನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಜಖಂ ಗೊಳಿಸಿ, ಮನೆಯ ಬೆಡ್ ರೂಂ ನ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ  1) 16 ಗ್ರಾಂ ತೂಕದ ಬಂಗಾರದ ಒಂದು ಬ್ರಾಸ್ ಲೈಟ್, 2) 10 ಗ್ರಾಂ ತೂಕದ ಬಂಗಾರದ 04 ವಿವಿಧ ಉಂಗುರಗಳನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಬೆಲೆ 1,04,000/-ರೂಗಳಾಗಿರುತ್ತೆ.

Leave a Reply

Your email address will not be published. Required fields are marked *