ದಿನದ ಅಪರಾಧಗಳ ಪಕ್ಷಿನೋಟ 10ನೇ ಮಾರ್ಚ್ 2021

ಕೆ.ಜಿ.ಎಫ್ ಪೊಲೀಸ್ ಜಿಲ್ಲೆ ಪೊಲೀಸ್ ಠಾಣೆಗಳಲ್ಲಿ ದಿನಾಂಕ 09.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ದೊಂಬಿ : 04

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಅವಿನಾಶ್ ಬಿನ್ ಬಾಲಮುರುಗನ್, ಡಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ಮಾವ ಅಮಲದಾಸ್ ರವರ ಮಗ ಕಾರ್ತಿಕೇಯನ್ ರವರಿಗೆ ಡಿ. ಬ್ಲಾಕ್ ವಾಸಿ ಸುಭದ್ರದೇವಿ ರವರೊಂದಿಗೆ ಮದುವೆಯಾಗಿದ್ದು, ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಿಂದ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಸುಭದ್ರದೇವಿ ರವರಿಗೆ ತಿಳಿ ಹೇಳಿ ಸಂಸಾರವನ್ನು ಸರಿಪಡಿಸೋಣ ಎಂಬ ಉದ್ದೇಶದಿಂದ ದಿನಾಂಕ.09-03-2021 ರಂದು ಸಂಜೆ 6-30 ಗಂಟೆಯಲ್ಲಿ ದೂರುದಾರರು ಕಾರ್ತಿಕೇಯನ್, ಪ್ರೇಮಚಂದರ್, ಕಬಿಮಾರನ್, ವಸಂತ್ @ ಮನೋಜ್, ಕೃಷ್ಣಮೂರ್ತಿ ನಂದ, ವಿಜಯ್ ಅಮಲ್‌ದಾಸ್, ಗೋಕುಲ್, ಗೌರಿಬಾಯಿ, ಅಖಿಲವಾಣಿ ಮತ್ತು ರಮಾಬಾಯಿ ರವರುಗಳು ಸೇರಿಕೊಂಡು ಸುಭದ್ರದೇವಿ ರವರ ಮನೆ ಬಳಿ ಹೋಗಿ ಸುಭದ್ರದೇವಿ ರವರು ಠಾಣೆಯಲ್ಲಿ ನೀಡಿರುವ ಕೇಸನ್ನು ವಾಪಸ್ಸು ತೆಗೆದುಕೊಂಡು ಸಂಸಾರ ಸರಿಪಡಿಸಿಕೊಂಡು ಬಾಳುವ ಬಗ್ಗೆ ಸುಭದ್ರದೇವಿ ರವರೊಂದಿಗೆ ಮಾತನಾಡುತ್ತಿದ್ದಾಗ, ಪೂಂಡಿ @ ರಾಜನ್, ಚಂದರ್, ಅಂತು @ ಸಗಾಯ್ ರಾಜ್, ಪ್ರದೀಪ್ ಕರ್ಣ, ಸುನಿಲ್, ಅಂತುರಾಜ್, ಮಿತ್ರ, ಅಮಲ, ಜಯಪ್ರಕಾಶ್, ಸುಭದ್ರದೇವಿ ರವರು ಅಕ್ರಮಕೂಟ ಕಟ್ಟಿಕೊಂಡು ಜಗಳಕಾದು, ಕೋಲಿನಿಂದ ರಮಾಬಾಯಿ ರವರಿಗೆ ಹೊಡೆದು ರಕ್ತಗಾಯ ಪಡಿಸಿದ್ದು, ಚಂದರ್ ರವರು ಕಬ್ಬಿಣದ ರಾಡಿನಿಂದ ಕೃಷ್ಣಕುಮಾರ್ ರವರಿಗೆ ಹೊಡೆದು ರಕ್ತಗಾಯ ಪಡಿಸಿದ್ದು, ಅಂತು @ ಸಗಾಯ್ ರಾಜ್ ರವರು ಮನೋಜ್ ರವರಿಗೆ ಕೋಲಿನಿಂದ ಹೊಡೆದು ರಕ್ತಗಾಯಪಡಿಸಿದ್ದು, ಸುನಿಲ್ ಮತ್ತು ಜಯಪ್ರಕಾಶ್ ರವರು ಮನೋಜ್ ರವರಿಗೆ ಹೊಡೆದಿರುತ್ತಾರೆ. ಪ್ರದೀಪ್ ಕರ್ಣ, ಸುಭದ್ರದೇವಿ, ಮಿತ್ರ ಮತ್ತು ಅಮಲ, ಅಂತರಾಜ್ ರವರುಗಳು ಕೈಗಳಿಂದ ಹೊಡೆದಿರುತ್ತಾರೆ.

ದೂರುದಾರರಾದ ಶ್ರೀಮತಿ. ಅಮಲಾ ಕೊಂ ಪ್ರದೀಪ್ ಕರ್ಣ, ಡಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ನಾದಿನಿ ಸುಭದ್ರದೇವಿ ರವರಿಗೆ ಎಸ್.ಬ್ಲಾಕ್ ವಾಸಿ ಅಮಲದಾಸ್ ರವರ ಮಗನಾದ ಕಾರ್ತಿಕೇಯನ್ ರವರೊಂದಿಗೆ 16 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಅವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಿಂದ ಠಾಣೆಯಲ್ಲಿ ದೂರು ನೀಡಿದ್ದು, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸುಭದ್ರದೇವಿ ಮತ್ತು ಮನೆಯವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ದಿನಾಂಕ.09-03-2021 ರಂದು ಸಂಜೆ 6-30 ಗಂಟೆಯಲ್ಲಿ ಕಾರ್ತಿಕೇಯನ್, ಪ್ರೇಮಚಂದರ್, ಕಬಿಮಾರನ್, ಅವಿನಾಶ್, ವಸಂತ್ @ ಮನೋಜ್, ಕೃಷ್ಣಮೂರ್ತಿ ನಂದ, ವಿಜಯ್, ಅಮಲ್‌ದಾಸ್, ಗೋಕುಲ್, ಗೌರಿಬಾಯಿ, ಅಖಿಲವಾಣಿ ಮತ್ತು ರಮಾಬಾಯಿ ರವರುಗಳು ಅಕ್ರಮ ಕೂಟ ಕಟ್ಟಿಕೊಂಡು ಸುಭದ್ರದೇವಿ ರವರ ಮನೆ ಬಳಿ ಹೋಗಿ ಕೇಸನ್ನು ವಾಪಸ್ಸು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಸಾಯಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಸುಭದ್ರದೇವಿ ರವರೊಂದಿಗೆ ಗಲಾಟೆ ಮಾಡುತ್ತಿದ್ದು, ಇದನ್ನು ಗಮನಿಸಿದ ಪ್ರದೀಪ್ ಕರ್ಣ, ರಾಜನ್ ಮತ್ತು ಅಂತರಾಜ್ ರವರು ಸದರಿಯವರಿಗೆ ಸಮಾದಾನ ಮಾಡಿ ತಿಳಿ ಹೇಳಲು ಹೋದಾಗ ಆರೋಪಿಗಳು ಕಲ್ಲು, ಕೋಲು ಮತ್ತು ಕೈಗಳಿಂದ ಹೊಡೆದು ಕೆಟ್ಟಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಗಂಗಪ್ಪ ಬಿನ್ ನಾರಾಯಣಪ್ಪ, ಕಾಮಸಮುದ್ರಂ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ ಮತ್ತು ವಿಜಿ, ಬಾಬು, ಪಿಳ್ಳಪ್ಪ, ಮಂಜುನಾಥ, ನಾಗ, ರಾಘವ, ಪದ್ಮಾ, ಸಕ್ಕುಮತ್ತು ಚಿನ್ನಮ್ಮಯ್ಯ ರವರಿಗೆ ಚಿನ್ನಮ್ಮಯ್ಯ ರವರ ಮನೆಯಲ್ಲಿ ಒಡವೆಗಳು ಕಾಣೆಯಾಗಿದ್ದ ವಿಚಾರದಲ್ಲಿ ದಿನಾಂಕ 08.03.2021 ರಂದು ರಾತ್ರಿ 8.00 ಗಂಟೆಯಲ್ಲಿ ಜಗಳವಾಗಿದ್ದು, ದಿನಾಂಕ 08.03.2021 ರಾತ್ರಿ 11.00 ಗಂಟೆಯಲ್ಲಿ ಆರೋಪಿಗಳು ಅಕ್ರಮ ಗುಂಪುಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ & ಕಲ್ಲುಗಳನ್ನು ಹಿಡಿದುಕೊಂಡು ಬಂದು ದೂರುದಾರರಿಗೆ ಮತ್ತು ನಾಗಮ್ಮ, ಮುರಳಿ ಮುರಳಿಕೃಷ್ಣ ಮತ್ತು ವಿಜಿ ರವರಿಗೆ ಕೆಟ್ಟ ಮಾತುಗಳಿಂದ ಬೈದ್ದು, ದೊಣ್ಣೆ, ಇಟ್ಟಿಗೆ ಕಲ್ಲು, ಕಲ್ಲು ಮತ್ತು ಕೈಗಳಿಂದ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ದೂರುರರಾದ ಶ್ರೀ. ಬಾಬು ಬಿನ್ ಚಿನ್ನಯ್ಯ, ಕಾಮಸಮುದ್ರಂ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಂಕ 08.03.2021 ರಂದು ರಾತ್ರಿ 11.15 ಗಂಟೆಯಲ್ಲಿ ದೂರುದಾರರ ಮನೆಯ ಬಳಿ ಒಡವೆಗಳು ಕಾಣೆಯಾಗಿರುವ ವಿಚಾರವನ್ನು ಮಾತನಾಡುತ್ತಿದ್ದಾಗ, ಗಂಗಪ್ಪ, ವೆಂಕಟಲಕ್ಷ್ಮೀ, ವಿಜಿಯಮ್ಮ, ಮುರಳಿ ಮತ್ತು ಮಣಿ ರವರು ಗುಂಪುಕಟ್ಟಿಕೊಂಡು ಬಂದು ಕೆಟ್ಟ ಮಾತುಗಳಿಂದ ಬೈದ್ದು, ಇಟ್ಟಿಗೆ, ಕೈಗಳಿಂದ ಹೊಡೆದಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕುಮಾರ್‌ ಬಿನ್ ರಾಬರ್ಟ್, ಫ್ಯಾಂಕ್‌ ಅಂಡ್ ಕೋ, ಮಾರಿಕುಪ್ಪಂ, ಕೆ.ಜಿ.ಎಫ್ ರವರು ದಿನಾಂಕ 09/03/2021 ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ಅನ್ಸರ್ ರವರ ಮಾರುತಿ ಓಮಿನಿ ವಾಹನ ಸಂಖ್ಯೆ KA-08-M-6429 ರಲ್ಲಿ ಸಮೀಉಲ್ಲಾ ರವರನ್ನು ಕುಳ್ಳರಿಸಿಕೊಂಡು ಕೆ.ಜಿ.ಎಪ್ –ಕ್ಯಾಸಂಬಳ್ಳಿ ರಸ್ತೆಯಲ್ಲಿ ಬಸವನಗುಡಿ ಕ್ರಾಸ್ ತಿರುವಿನ ಬಳಿ ಹೋಗುತ್ತಿದ್ದಾಗ, ರಾಜ್ ಪೇಟೆ ರಸ್ತೆ ಕಡೆಯಿಂದ ಭಾರತಿ ಬಸ್ ಸಂಖ್ಯೆ KA-07-8874 ರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ಓಮಿನಿಕಾರ್ ಗೆ ಡಿಕ್ಕಿ ಪಡಿಸಿದ ಪ್ರಯುಕ್ತ ದೂರುದಾರರಿಗೆ ಗಾಯಗಳಾಗಿದ್ದು, ಓಮಿನಿ ಕಾರ್ ಪೂರ್ತಿ ಜಖಂ ಗೊಂಡಿರುತ್ತೆ.

ಅಸ್ವಾಭಾವಿಕ ಮರಣ ಪ್ರಕರಣ : 02

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಫಾತಿಮೇರಿ, ಎ ಟೈಲ್‌ ಬ್ಲಾಕ್, ಚಾಂಪಿಯನ್‌ರಿಫ್ಸ್‌, ಕೆ.ಜಿ.ಎಫ್ ರವರ ಮಗನಾದ ಡೋಮನಿಕ್ ಆರೋಗ್ಯದಾಸ್ , 40 ವರ್ಷ, ರವರು ಆತನ ಮಗ ಡೆಲ್ವಿನ್ ಮೃತಪಟ್ಟಿರುವ ವಿಷಯದಲ್ಲಿ ಮಾನಸಿಕವಾಗಿ ಕುಗ್ಗಿ ಅತಿಯಾಗಿ ಮದ್ಯಪಾನ ಸೇವನೆ ಮಾಡುವ ಚಟ ಬೆಳೆಸಿಕೊಂಡಿದ್ದು ದಿನಾಂಕ:08.03.2021 ರಂದು ರಾತ್ರಿ ಮನೆಯ ರೂಂನಲ್ಲಿ ಸೀರೆಯಿಂದ ಮೇಲ್ಚಾವಣಿಗೆ ಅಳವಡಿಸಿರುವ ಕಬ್ಬಿಣದ ಪೈಪಿಗೆ ನೇಣುಹಾಕಿಕೊಂಡು ಆತ್ಮಯತ್ಯೆ ಮಾಡಿಕೊಂಡಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಪಾರ್ವತಿ, ದೇಶಿಹಳ್ಳಿ, ಬಂಗಾರಪೇಟೆ ರವರ ಮಗನಾದ ರಂಜಿತ್ @ ರಂಜಿತ್‌ಕುಮಾರ್, 23 ವರ್ಷ ರವರಿಗೆ ಆರು ತಿಂಗಳಿನಿಂದ ಹೊಟ್ಟೇನೋವು ಬರುತ್ತಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರೂ ಸಹ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂದು ದಿನಾಂಕ 09.03.2021 ರಂದು ರಾತ್ರಿ ಮನೆಯಲ್ಲಿ ಮಲಗುವ ಕೊಠಡಿಯಲ್ಲಿ ಮೇಲ್ಛಾವಣಿಯ ಜಿಂಕ್ ಶೀಟ್‌ಗೆ ಅಳವಡಿಸಿರುವ ಒಂದು ಕಬ್ಬಿಣದ ತರಾಯಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *