ದಿನದ ಅಪರಾಧಗಳ ಪಕ್ಷಿನೋಟ 10ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 09.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬಿನ್ ಚಿಕ್ಕಮರಿಯಪ್ಪ, ಕೂಟೇರಿ ಗ್ರಾಮ, ಕೋಲಾರ ತಾಲ್ಲೂಕು ರವರು ದಿನಾಂಕ: 07-02-2021 ರಂದು ಬೆಳಿಗ್ಗೆ11-30 ಗಂಟೆಯಲ್ಲಿ ವಿಲಿಯಂ ರಿಚ್ಚರ್ಡ್ ಶಾಲೆಯ ಬಳಿ ಅಶೋಕ್ ರವರು ಚಲಾಯಿಸುತ್ತಿದ್ದ ಡಿಸ್ಕವರ್ ದ್ವಿಚಕ್ರ ಸಂಖ್ಯೆ: ಕೆ.ಎ.40ಆರ್1604 ವಾಹನಕ್ಕೆ ಹಿಂದುಗಡೆಯಿಂದ ಕ್ವಾಲೀಸ್ ಸಂಖ್ಯೆ: ಕೆ.ಎ.05-ಎಂ.ಎ-9665 ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಅಶೋಕ್ ಮತ್ತು ಚಿಕ್ಕಮರಿಯಪ್ಪ ರವರು ರಸ್ತೆಯಲ್ಲಿ ಬಿದ್ದು ರಕ್ತಗಾಯಗಳಾಗಿದ್ದರಿಂದ, ಚಿಕ್ಕಮರಿಯಪ್ಪ ರವರು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 08-02-2021 ರಂದು ಸಂಜೆ 06-30 ಗಂಟೆಯಲ್ಲಿ ಚಿಕ್ಕಮರಿಯಪ್ಪರವರು ಮೃತಪಟ್ಟಿರುತ್ತಾರೆ.

ದೊಂಬಿ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣದ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪದ್ಮಾವತಿ ಕೊಂ ಮುನಿರತ್ನಂ,  ಚಿನ್ನಾಗನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 08.02.2021 ರಂದು ರಾತ್ರಿ 9.00 ಗಂಟೆಯಲ್ಲಿ ಸೋಮಪ್ಪ, ಚಿಟ್ಟಮ್ಮ, ಯುವರಾಜ್‌, ಮಂಜುನಾಥ, ಅಶೋಕ್‌, ರಾಜು ರವರು ದೂರುದಾರರ ಮನೆಯ ಬಳಿ ಪಟಾಕಿ ಸಿಡಿಸಿದ್ದರಿಂದ ದೂರುದಾರರು ಏಕೆ ಮನೆಯ ಬಳಿ ಪಟಾಕಿ ಅಂಟಿಸುತ್ತಿದ್ದಿರ ಪಟಾಕಿ ಶಬ್ದದಿಂದ ತೊಂದರೆಯಾಗುತ್ತದೆ ಎಂದು ಕೇಳಿದ್ದರಿಂದ ದೂರುದಾರರ ಮೇಲೆ ಜಗಳ ತೆಗೆದು ಕೆಟ್ಟಮಾತುಗಳಿಂದ ಬೈದು, ದೊಣ್ಣೆ, ಕಬ್ಬಿಣದ ರಾಡ್‍ ನಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಸಾಧಾರಣ ಕಳ್ಳತನ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಗಿರುತ್ತದೆ. ದೂರುದಾರರಾದ ಶ್ರೀ. ಆನಂದ ಬಿನ್ ತಿಮ್ಮರಾಯಪ್ಪ,  ಎಂ. ಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು KA-08-W-6784, HERO SPLENDOR ದ್ವಿಚಕ್ರ ವಾಹನ 55,000/- ರೂ ಬೆಲೆ ಬಾಳುವುದನ್ನು ದಿನಾಂಕ 08.02.2021 ರಂದು ಸಂಜೆ 6.30 ಗಂಟೆಗೆ ಅವರ ತೋಟದ ಮನೆಯ ಮುಂದೆ ನಿಲ್ಲಿಸಿ ದಿನಾಂಕ 09.02.2021 ರ ಬೆಳಿಗ್ಗೆ ಸುಮಾರು 6.00  ಗಂಟೆಗೆ  ನೋಡಲಾಗಿ ಕಾಣಿಸದೇ ಇದ್ದು, ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಷ್ಣುವರ್ಧನ್ ಬಿನ್ ಮುಳಬಾಗಲಪ್ಪ, ಐತಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲಕು ರವರ ಹೆಂಡತಿ, ಶಾಂತ, 22 ವರ್ಷ ರವರು ದಿನಾಂಕ 08.02.2021 ರಂದು ಬೆಳಿಗ್ಗೆ 9.00 ಗಂಟೆಯಿಂದ ಬೆಳಿಗ್ಗೆ ಸುಮಾರು 10.00 ಗಂಟೆ ಮಧ್ಯೆ ಮನೆಯಿಂದ ಕಾಣೆಯಾಗಿರುತ್ತಾರೆ.

ಅಬಕಾರಿ ಕಾಯ್ದೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.02.2021 ರಂದು ಬೆಳಿಗ್ಗೆ 11.15 ಗಂಟೆಯಲ್ಲಿ ರವಿ ಬಿನ್ ಪೆರುಮಾಳ್,  ಗಂಗಮ್ಮನಪಾಳ್ಯ, ಬಂಗಾರಪೇಟೆ ರವರು ಗಂಗಮ್ಮನಪಾಳ್ಯ ಆಟೋ ಸ್ಟಾಂಡ್ ಬಳಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ದೂರುದಾರರಾದ ಶ್ರೀ. ಜಗದೀಶ್‌ರೆಡ್ಡಿ, ಪಿ.ಎಸ್.ಐ ಮತ್ತು ಸಿಬ್ಬಂದಿಯವರು  ದಾಳಿ ಮಾಡಿ, ಸ್ಥಳದಲ್ಲಿದ್ದ, 1) ಅರ್ದಂಬರ್ದ ಮಧ್ಯವಿರುವ Bangalore Whisky 90 ml ನ 04 ಪಾಕೇಟ್ ಗಳು, ಖಾಲಿಯಾಗಿರುವ Haywards Cheers Whisky 90 ml ನ 04 ಪಾಕೇಟ್ ಗಳು, ಖಾಲಿಯಾಗಿರುವ 05 ನೀರಿನ ಪಾಕೆಟ್ ಗಳು, ತುಂಬಿರುವ 05 ನೀರಿನ ಪಾಕೆಟ್ ಗಳು, 04 ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *