ದಿನದ ಅಪರಾಧಗಳ ಪಕ್ಷಿನೋಟ 1ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 31.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಿಬ್ಗತ್‌ ಉಲ್ಲಾ ಖಾನ್ ಬಿನ್ ರೆಹಮತ್ ಉಲ್ಲಾ ಖಾನ್, ಟಿಪ್ಪುನಗರ, ಬಂಗಾರಪೇಟೆ ರವರು ದಿನಾಂಕ 31.08.2020 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಆಟೋ ಸಂಖ್ಯೆ ಕೆಎ-02-ಬಿ-5581 ನ್ನು ಗಂಗಮ್ಮನಪಾಳ್ಯ ರಸ್ತೆಯಲ್ಲಿನ ಟಿಪ್ಪುನಗರದಲ್ಲಿ ಹೋಗುತ್ತಿದ್ದಾಗ, ಯಾರೋ ಒಬ್ಬ ಆಸಾಮಿಯು ಆಟೋವನ್ನು ನಿಲ್ಲಿಸಿ ‘ಕೋಲಾರ ಮೆಡಿಕಲ್ ಕಾಲೇಜಿಗೆ ಚೆಕಪ್ ಗೆ ಹೋಗಬೇಕು, ಹ್ಯಾಂಡಿಕ್ಯಾಪ್ಟ್ ನ ಒಬ್ಬ ವ್ಯಕ್ತಿಯನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕೆಂದು ಹೇಳಿ, ಬಾಡಿಗೆಗೆ ಮಾತನಾಡಿಕೊಂಡು, ಆ ಇಬ್ಬರು ಆಸಾಮಿಗಳು ಆಟೋವನ್ನು ಹತ್ತಿದ್ದು, ನಂತರ ಮದ್ಯಾಹ್ನ 12.00 ಗಂಟೆಯಲ್ಲಿ ದೂರುದಾರರು ಸದರಿ ಆಟೋವನ್ನು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆಯಲ್ಲಿರುವ ಹಂಚಾಳ ಗೇಟ್ ಸಮೀಪವಿರುವ ಅನಿಗಾನಹಳ್ಳಿ ಕೆರೆಯ ಸಮೀಪ ಹೋಗುತ್ತಿದ್ದಾಗ, ಹ್ಯಾಂಡಿಕ್ಯಾಪ್ಟ್ ನ ವ್ಯಕ್ತಿಯು ಕೆರೆಯ ಕಡೆಗೆ ಆಟೋವನ್ನು ತಿರುಗಿಸಲು ತಿಳಿಸಿದ್ದು, ಆಟೋವನ್ನು ಕೆರೆಯ ಸಮೀಪ ತಿರುಗಿಸಿ ನಿಲ್ಲಿಸಿದಾಗ, ಆಟೋವಿನಲ್ಲಿ ಕುಳಿತಿದ್ದ ಆ ಇಬ್ಬರು ಆಸಾಮಿಗಳು ಯಾವುದೋ ಕಾರಣಕ್ಕೆ ಆಟೋದಲ್ಲಿದ್ದ ಬಟ್ಟೆಯ ಬೆಲ್ಟ್ ನಿಂದ ದೂರುದಾರರಿಗೆ ಹಿಂಬದಿಯಿಂದ ಕುತ್ತಿಗೆಗೆ ಬಿಗಿಸಿ, ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿ, ಪರಾರಿಯಾಗಿರುತ್ತಾರೆ.

Leave a Reply

Your email address will not be published. Required fields are marked *