ದಿನದ ಅಪರಾಧಗಳ ಪಕ್ಷಿನೋಟ 09 ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 08.07.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 09.07.2020 ರಂದು  ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 07.07.2020 ರಂದು ರಾತ್ರಿ ಸುಮಾರು 10.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಅಂಬರೀಶ್, ಕೆರೆಕೋಡಿ, ಬಂಗಾರಪೇಟೆ ರವರು ಊಟ ಮಾಡಲು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಡೆಯಿಂದ ಕಾರಹಳ್ಳಿ ವೃತ್ತದ ಬಳಿಯಿರುವ ಪಾರ್ಕ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ನವೀನ್ ಕುಮಾರ್, ವಿಜಯನಗರ ಬಂಗಾರಪೇಟೆ ರವರು ತನ್ನ ದ್ವಿಚಕ್ರ ವಾಹನ ಆಕ್ಸಿಸ್-125ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂಬದಿಯಿಂದ ಡಿಕ್ಕಿಪಡಿಸಿದ ಪರಿಣಾಮ, ಪಿರ್ಯಾದಿಯು ಕೆಳಗೆ ಬಿದ್ದು ಬಲಗಾಲಿಗೆ, ತೊಡೆಯ ಮೇಲೆ ಮತ್ತು ಮೊಣಕಾಲಿಗೆ ಮುಂಭಾಗದ ಚಕ್ರ ತಗುಲಿ ಊತಗಾಯ ಹಾಗೂ ತರಚಿದ ಗಾಯವಾಗಿರುತ್ತದೆ.

– ಕೊಲೆ ಪ್ರಯತ್ನ :  01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಶ್ರೀನಿವಾಸ, ಮಜರಾ ಗುಟ್ಟಹಳ್ಳಿ, ಉದಯನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರಿಗೂ ಮತ್ತು ಬಾಬು, ಮಲ್ಲಂಪಲ್ಲಿ ಗ್ರಾಮ ರವರಿಗೂ ಆಸ್ತಿ ವಿಚಾರದಲ್ಲಿ ವಿವಾದಗಳಿದ್ದು, ದಿನಾಂಕ: 07.07.2020 ರಂದು ದೂರುದಾರರು ತಮ್ಮ ಮನೆಯ ಬಳಿ ಇದ್ದಾಗ ಬಾಬು, ಪ್ರವೀಣ್‌, ಸುಬ್ರಮಣಿ  ಮತ್ತು ಇತರೆ 06 ಜನರು ಅಕ್ರಮ ಕೂಟಕಟ್ಟಿಕೊಂಡು ಕೈಗಳಲ್ಲಿ ಚಾಕುಗಳನ್ನು ಹಿಡಿದುಕೊಂಡು ದೂರುದಾರರ ಮನೆಯ ಬಳಿ ಬಂದು, ಕೊಲೆ ಮಾಡುವ ಉದ್ದೇಶದಿಂದ ಕೈಗಳಿಂದ ಮತ್ತು ಚಾಕುಗಳಿಂದ  ಹೊಡೆದು ರಕ್ತಗಾಯಪಡಿಸಿದ್ದು, ಜಗಳ ಬಿಡಿಸಲು ಬಂದು ದೂರುದಾರರ ಹೆಂಡತಿ ಶ್ರೀಮತಿ. ಪೂಜಾ ರವರಿಗೂ ಸಹ ಕೈಗಳಿಂದ ಮತ್ತು ಚಾಕುಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *