ದಿನದ ಅಪರಾಧಗಳ ಪಕ್ಷಿನೋಟ 09ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 08.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಅಸ್ವಾಭಾವಿಕ ಮರಣ ಪ್ರಕರಣ :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸತೀಶ್ ಬಿನ್ ನಾಗರಾಜ, ಸುವರ್ಣಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಂದೆ ನಾಗರಾಜ, 47 ವರ್ಷ  ರವರು 3-4 ವರ್ಷಗಳಿಂದ ಸುವರ್ಣಹಳ್ಳಿ ಗ್ರಾಮದ ವಾಸಿ  ಕೃಷ್ಣಮೂರ್ತಿ  ರವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ-08-02-2021 ರಂದು ಸಂಜೆ 4.30 ಗಂಟೆಯಲ್ಲಿ ದೂರುದಾರರ ತಂದೆ ನಾಗರಾಜ ರವರು ಕೃಷ್ಣಮೂರ್ತಿ ರವರ ತೋಟದಲ್ಲಿರುವ  ನೀರಿನ ತೊಟ್ಟಿಯಲ್ಲಿ  ಬಿದ್ದು ಮೃತರಾಗಿರುತ್ತಾರೆ.

Leave a Reply

Your email address will not be published. Required fields are marked *