ದಿನದ ಅಪರಾಧಗಳ ಪಕ್ಷಿನೋಟ 07 ನೇ ಮೇ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 06.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಕೊಲೆ ಪ್ರಯತ್ನ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶ್ರೀಮತಿ ಪ್ರೇಮ ಕೋಂ ರಾಮಲಿಂಗಂ, ಬಿ.ಗೊಲ್ಲಹಳ್ಳಿ ಗ್ರಾಮ ರವರು ಆರೋಪಿ ರಾಮಲಿಂಗಂ ರವರ ಮಧ್ಯೆ ಸಂಸಾರದ ವಿಚಾರದಲ್ಲಿ ಗಲಾಟೆಗಳಾಗಿ ಕೆ.ಜಿ.ಎಫ್ ನ ಮಾನ್ಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದು ಉಭಯಸ್ಥರು ಬೇರೆ- ಬೇರೆ ವಾಸವಿದ್ದು, ಪಿರ್ಯಾದಿದಾರಳು ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿಯೇ ವಾಸವಿದ್ದು, ಈಗಿರುವಾಗ ಪಿರ್ಯಾದಿದಾರಳ ತಂದೆ ಈಗ್ಗೆ 03 ದಿನಗಳ ಹಿಂದೆ ಮೃತಪಟ್ಟಿದ್ದು, ದಿನಾಂಕ 26.04.2021 ರಂದು ತಿಥಿ ಕಾರ್ಯಗಳನ್ನು ಮುಗಿಸಿದ್ದು,  ದಿನಾಂಕ 26.04.2021 ರಂದು ಕೋವಿಡ್ ಸಂಬಂದ ಲಾಕ್ ಡೌನ್  ಆಗಿದ್ದರಿಂದ, ಬೆಂಗಳೂರಿಗೆ ಹೋಗದೇ ಗ್ರಾಮದಲ್ಲಿಯೇ ವಾಸವಾಗಿದ್ದು, ಈಗಿರುವಾಗ ದಿನಾಂಕ 05.05.2021 ರಂದು ಮದ್ಯಾಹ್ನ ಸುಮಾರು 02.30 ಗಂಟೆಯಲ್ಲಿ ಪಿರ್ಯಾದಿದಾರರಳು, ಆಕೆಯ ಮಗಳು ಹಾಗೂ ತಾಯಿ ಊಟವನ್ನು ಮಾಡಿ ಮನೆಯಲ್ಲಿ ಮಲಗಿದ್ದಾಗ, ಪಿರ್ಯಾದಿದಾರಳ ಗಂಡ ರಾಮಲಿಂಗಂ ಮತ್ತು ರಾಜೇಂದ್ರ ರವರು ಮನೆಯೊಳಗೆ ಹೋಗಿ, ಆ ಪೈಕಿ ರಾಮಲಿಂಗಂ ರವರು ಪಿರ್ಯಾದಿದಾರಳ ಕುತ್ತಿಗೆಯನ್ನು ಎಡಗೈಯಿಂದ ಹಿಡಿದು ಎಳೆದುಕೊಂಡು ಮನೆಯ ಹೊರಗೆ ಬಂದು, ಬೆನ್ನಿನ ಹಿಂಬಾಗದಿಂದ ಒಂದು ಮಚ್ಚನ್ನು ತೆಗೆದುಕೊಂಡು, ಪಿರ್ಯಾದಿದಾರಳನ್ನು ಕೊಲೆ ಮಾಡಿ ಸಾಯಿಸುವ  ಉದ್ದೇಶದಿಂದ ಎಡಭಾಗದ ತಲೆಯ ಮೇಲೆ ಮಚ್ಚಿನಿಂದ ಹೊಡೆದು ತೀವ್ರತರ ರಕ್ತಗಾಯವನ್ನುಂಟು ಮಾಡಿದ್ದು, ಅಷ್ಟರಲ್ಲಿ ಪಿರ್ಯಾದಿದಾರಳ ತಾಯಿ ನೀಲಮ್ಮ ರವರು ಅಡ್ಡ ಬಂದಾಗ, ಪೂಜಾರ್ಲಹಳ್ಳಿ ಗ್ರಾಮದ ವಾಸಿ ರಾಜೇಂದ್ರ  ಎಂಬುವವನು ಪಿರ್ಯಾದಿದಾರಳ ತಾಯಿಯನ್ನು ಹಿಡಿದುಕೊಂಡಿದ್ದು, ಆಗ ಪಿರ್ಯಾದಿದಾರಳ ಗಂಡ ರಾಮಲಿಂಗಂ ರವರು ಅದೇ ಮಚ್ಚಿನಿಂದ  ನೀಲಮ್ಮ ರವರ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದ್ದು, ರಾಜೇಂದ್ರನ್ ಎಂಬುವವನು ಪಿರ್ಯಾದಿದಾರಳಿಗೆ ಹಾಗೂ ಆಕೆಯ ತಾಯಿ ನೀಲಮ್ಮ ರವರಿಗೆ ಕೈಗಳಿಂದ ಹೊಡೆದು ಮೈ ಕೈ ನೋವುಂಟು ಮಾಡಿರುತ್ತಾರೆ.

 ವ್ಯಕ್ತಿ ಕಾಣೆಯಾಗಿರುವ ಪ್ರಕರಣ : 01

                ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಯುಗೇಂದ್ರ, ದೊಡ್ಡಕಂಬಳಿ ಗ್ರಾಮ ರವರ ಹೆಂಡತಿಯಾದ ಪ್ರಿಯಾಂಕ 23 ವರ್ಷ  ರವರು ದಿನಾಂಕ 04.05.2021  ರಂದು ಬೆಳಗ್ಗೆ 11.00 ಗಂಟೆಯ ಸಮಯದಲ್ಲಿ ದೂರುದಾರರ ಚಿಕ್ಕಮ್ಮ ರವರೊಂದಿಗೆ ಕೆರೆಯಲ್ಲಿ ಬಟ್ಟೆ ಹೊಗೆಯುತ್ತಿದ್ದು, ಪ್ರಿಯಾಂಕ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮತ್ತೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ. ಪಿರ್ಯಾದಿಯ ಹೆಂಡತಿ  ಪ್ರಿಯಾಂಕ ರವರು  ಆತನ ಸ್ನೇಹಿತನಾದ ಬೈನೇಪಲ್ಲಿ ಗ್ರಾಮದ ವಾಸಿಯಾದ ಕಾರ್ತಿಕ್ ಎಂಬಾತನ ಜೊತೆ ಹೋಗಿರಬಹುದೆಂದು ಅನುಮಾನ ಇರುತ್ತೆಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *