ದಿನದ ಅಪರಾಧಗಳ ಪಕ್ಷಿನೋಟ 07ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 06.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೇಶವಮೂರ್ತಿ ಬಿನ್ ಅಂಕರೆಡ್ಡಿ, ನೆರ್‍ನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ:31.01.2021 ರಂದು ಸಂಜೆ 6-30 ಗಂಟೆಗೆ ಬೆಲೆ 3,00,000/- ರೂ ಬೆಲೆ ಬಾಳುವ ಟ್ರ್ಯಾಕ್ಟರ್ ಸಂಖ್ಯೆ KA-08-T-7793 ನ್ನು ರಾಮಸಾಗರ ರಸ್ತೆಯಲ್ಲಿರುವ ತಮ್ಮ ಬಾವ ಗೋಪಾಲರೆಡ್ಡಿ  ಬಿನ್ ಮುನಿವೆಂಕಟರೆಡ್ಡಿ ರವರ ಹಾಲೋ ಬ್ಲಾಕ್ ಪ್ಯಾಕ್ಟರಿ ಬಳಿ ನಿಲ್ಲಿಸಿದ್ದನ್ನು ದಿನಾಂಕ:31.01.2021 ರಂದು ರಾತ್ರಿ ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ.

ಅಬಕಾರಿ ಕಾಯ್ದೆ01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ. 07.02.2021 ರಂದು ಸಂಜೆ 07.30 ಗಂಟೆಯಲ್ಲಿ ಬಾಣಗೆರೆ  ಗ್ರಾಮದ ಶ್ರೀಮತಿ ಮುನಿರತ್ನಮ್ಮ ಕೋಂ ವೆಂಕಟರಾಮ ಎಂಬುವರು ಮನೆಯ ಹತ್ತಿರ ಕಾನೂನು ಭಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅವಕಾಶಮಾಡಿಕೊಟ್ಟಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ  (1) 02 ಪ್ಲಾಸ್ಟಿಕ್ ಲೋಟ, (2) 180 ಎಂ.ಎಲ್ ನ    01  BAGPIPER PACKET, 3) ಖಾಲಿಯಾಗಿರುವ  180 ಎಂ.ಎಲ್ ನ 02 BAGPIPER PACKET,  4)  05 ವಾಟರ್ ಪಾಕೇಟ್ ಗಳಿದ್ದು, 03 ವಾಟರ್ ಪಾಕೇಟ್‌ಗಳನ್ನು ದೂರುದಾರರಾದ ಶ್ರೀಮತಿ. ಮಾಲಾ, ಮ.ಎ.ಎಸ್.ಐ, ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್ ಬಾಬು ಬಿನ್ ಪರಷುರಾಮನ್, ಅಶೋಕ್‌ನಗರ, ಬಿ. ಬ್ಲಾಕ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ತಮ್ಮ ಪಿ. ಶ್ರೀಧರ್, 47 ವರ್ಷ ರವರು ದಿನಾಂಕ.07-02-2021 ರಂದು ಮಧ್ಯಾಹ್ನ 12-20 ಗಂಟೆಯಲ್ಲಿ   ಬಿ.ಇ.ಎಂ.ಎಲ್. ಕಾರ್ಖಾನೆಯ ಇ.ಎಂ. ಡಿವಿಜನ್ನ ಶಿಪ್ಟಿಂಗ್ ಡಿಪಾರ್ಟ್ಮೆಂಟ್(ಎಂ.ಇ.ಓ), ವಾಷಿಂಗ್ ಪಾಯಿಂಟ್ ಬಳಿ, ಲಾರಿಯಲ್ಲಿದ್ದ BE-1000 ಎಕ್ಸ್ಲೇಟರ್ ಮಿಷನ್ ಮೇಲೆ ನಿಂತುಕೊಂಡು, ಮಿಷನ್ನನ್ನು ನೀರಿನ ಓರ್ಸ್ ಪೈಪ್ ಮುಖಾಂತರ ಸ್ವಚ್ಚ ಮಾಡುತ್ತಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ಮಿಷನ್ ಮೇಲಿನಿಂದ ಲಾರಿಯ ಮೇಲೆ ಬಿದ್ದಾಗ, ಮಿಷನ್ ನ ಕಬ್ಬಿಣದ ರಾಡು ತಲೆಯ ಹಿಂಭಾಗಕ್ಕೆ ತಗುಲಿ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಗೆ ಬೆಮಲ್ ಮೆಡಿಕಲ್ ಸೆಂಟರ್ಗೆ ಕರೆದುಕೊಂಡು ಹೋಗಿದ್ದು, ವೈಧ್ಯರು ಪರೀಕ್ಷಿಸಿ ಪಿ. ಶ್ರೀಧರ್ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *