ದಿನದ ಅಪರಾಧಗಳ ಪಕ್ಷಿನೋಟ 07ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 06.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಧರ್ಮೋಜಿರಾವ್‌ ಬಿನ್ ಮನೋಜಿರಾವ್‌, ಕೊಲಮೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 31.01.2021 ರಂದು ಮಧ್ಯಾಹ್ನ 1.30 ಗಂಟೆಯಲ್ಲಿ ಮನೆಯ ಮುಂದೆ ಕುಳಿತಿದ್ದಾಗ, KA-03-MB-8962 ಕಾರನ್ನು ಮುನಿಕೃಷ್ಣಪ್ಪ ರವರು ಚಲಾಯಿಸಿ ದೂರುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಕ್ತಗಾಯಗಳಾಗಿರುತ್ತದೆ.

ಇತರೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸ ಬಿನ್ ವೆಂಕಟರಾಮಪ್ಪ, ಮಾದಿಗರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಂದೆ ವೆಂಕಟರಾಮಪ್ಪ ರವರು ದಿನಾಂಕ 05.02.2021 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ 80,000/- ರೂ ಬೆಲೆ ಬಾಳುವ ಸೀಮೆ ಹಸುವನ್ನು ಮೇಯಿಸಲು ಅವರ ಜಮೀನು ಕಡೆ ಹೋಗಿ ಹುಲ್ಲು ಮೇಯಿಸುತ್ತಿದ್ದಾಗ, ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ದೂರುದರರ ಜಮೀನಿನಲ್ಲಿ ಸ್ಪೋಟಕ ವಸ್ತುವನ್ನು ಇಟ್ಟು ಹೋಗಿದ್ದು, ಅದನ್ನು ಸೀಮೆ ಹಸು ಮೇಯಿದಾಗ ಸ್ಪೋಟಕ ವಸ್ತು ಸ್ಪೋಟಗೊಂಡು ಹಸುವಿನ ಬಾಯಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತ ಪಟ್ಟಿರುತ್ತದೆ.

ದೊಂಬಿ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವರಾಮೇಗೌಡ ಬಿನ್ ಗೋಪಾಲಪ್ಪ, ಟಿ.ಗೊಲ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು  ದಿನಾಂಕ-04-02-2021 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಮನೆಯಲ್ಲಿದ್ದಾಗ ತಿಮ್ಮರಾಜು, ಶಶಿಧರ್‌, ಪುರುಷೋತ್ತಮ್, ಮಿಥುನ್‌ಗೌಡ, ಮಮತರಾಣಿ, ಸೌಮ್ಯ, ರತ್ನಮ್ಮ ಮತ್ತು ಗೋಪಾಲಪ್ಪ ರವರು ದೂರುದಾರರನ್ನು ಜಮೀನು ವಿಚಾರದಲ್ಲಿ ತಕರಾರಿದ್ದುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೈಗಳಿಂದ ಹಾಗೂ ಕೋಲುಗಳಿಂದ ಹೊಡೆದು, ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ.  ಸುಚಿತ್ರ ಕೊಂ ರವಿ, ಇ.ಟಿ ಬ್ಲಾಕ್‌, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ಗಂಡ ಎಂ. ರವಿ, 55 ವರ್ಷ ರವರಿಗೆ ಸುಮಾರು 1 ವರ್ಷದಿಂದ ಹೃದಯ ಸಂಬಂದಿ ಖಾಯಿಲೆಯಿದ್ದು, ದಿನಾಂಕ:06.02.2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಉರಿಗಾಂ ಹೆನ್ರೀಸ್ ಶಾಫ್ಟ್ ಗೆ ಕೆಲಸಕ್ಕೆ ಹೋಗಿ ಸೆಕ್ಯುರಿಟಿ ಕರ್ತವ್ಯದಲ್ಲಿದ್ದಾಗ, ಸಂಜೆ 4.00 ಗಂಟೆಯಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *