ದಿನದ ಅಪರಾಧಗಳ ಪಕ್ಷಿನೋಟ 07ನೇ ನವೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 06.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಕುಮಾರ್‌ ಬಿನ್ ಗೋಪಾಲಕೃಷ್ಣ, ಡಿ.ಕೆ.ಹಳ್ಳಿ, ಬೆಮೆಲ್ ನಗರ, ಕೆ.ಜಿ.ಎಫ್ ರವರು ದಿನಾಂಕ 05.11.2020 ರಂದು ಮದ್ಯಾಹ್ನ 12-30 ರ ಸಮಯದಲ್ಲಿ ಬಂಗಾರಪೇಟೆ ತಾಲ್ಲೂಕು ಕಛೇರಿಯ ಮುಂದೆ ರಸ್ತೆಯಲ್ಲಿ ಹೀರೋ ಪ್ಯಾಷನ್ ಪ್ರೋ ಸಂಖ್ಯೆ ಕೆ.ಎ08, ವಿ-5108 ಬೆಲೆ 15,000/- ರೂ ಬಾಳುವುದನ್ನು ನಿಲ್ಲಿಸಿ ತಾಲ್ಲೂಕು ಕಛೇರಿಯ ಬಳಿ ಕಂದಾಯ ಅದಾಲತ್ ನಲ್ಲಿ ಹೋಗಿ ಮುಗಿಸಿಕೊಂಡು ಬಂದು ನೋಡಲಾಗಿ ಯಾರೋ ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

– ಇತರೆ :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷತನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಂಕರ್‌ ಬಿನ್ ರಾಮಕೃಷ್ಣಪ್ಪ, ಅಲ್ಲಿಕುಂಟೆ ಕದಿರೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ.02-11-2020 ರಂದು ದಾಸರಹೊಸಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಡೆಕ್ಕನ್ ಹೈಡ್ರಾಲಿಕ್ಸ್ ಪ್ರೈ ಲಿಮಿಟೆಡ್ ನ ಮಾಲೀಕರಾದ ರಾಮಕೃಷ್ಣಪ್ಪ ಮತ್ತು ಲೇಬರ್ ಕಾಂಟ್ರಾಕ್ಟರ್ ಪುನೀತ್ ಗೌಡ ರವರು ದೂರುದಾರರನ್ನು ಸದರಿ ಕಾರ್ಖಾನೆಯ ಸ್ಟೋರ್ ನಲ್ಲಿ ಹೆಲ್ಪರ್ ಕೆಲಸಕ್ಕೆ ಸೇರಿಸಿಕೊಂಡು, ಯಾವುದೇ ಮುಂಜಾಗ್ರತಾ ಸುರಕ್ಷತ ಕ್ರಮಗಳನ್ನು ತೆಗೆದುಕೊಳ್ಳದೆ ಬೇಜವಾಬ್ದಾರಿತನ ಮತ್ತು ನಿರ್ಲಕ್ಷತೆ ವಹಿಸಿ ದಿನಾಂಕ. ದಿನಾಂಕ.03-11-2020 ರಂದು ಪಿರ್ಯಾದಿದಾರರನ್ನು ಸದರಿ ಕಾರ್ಖಾನೆಯ SURFACE TREATMNET & PAINTING DIVISION ನ UNIT-5 ರಲ್ಲಿ ಕೆಲಸಕ್ಕೆ ನಿಯೋಜಿಸಿದ್ದು, ಅದರಂತೆ ದೂರುದಾರರು ಕೆಲಸ ಮಾಡಿಕೊಂಡಿದ್ದಾಗ, ಸಂಜೆ 4-30 ಗಂಟೆಯಲ್ಲಿ ಸದರಿ ಯೂನಿಟ್ -5 ಗೆ ಕಬ್ಬಿಣದ ಶೀಟ್ ಗಳ ಲೋಡ್ ಲಾರಿ ಬಂದಾಗ ದೂರುದಾರರು ಮತ್ತು ಅಂಜನ್ ರವರು ಸದರಿ ಯೂನಿಟ್ ನ ಮೆಲ್ಚಾವಣಿಗೆ ಅಳವಡಿಸಿದ್ದ ಕ್ರೇನ್ ಸಹಾಯದಿಂದ ಲಾರಿಯಲ್ಲಿರುವ ಕಬ್ಬಿಣದ ಶೀಟ್ ಗಳಿಗೆ ಕ್ರೇನ್ ಬೆಲ್ಟ್ ನಿಂದ ಕಟ್ಟಿ ಶೀಟ್ ಗಳನ್ನು ಇಳಿಸುತ್ತಿರುವಾಗ ಸುಮಾರು 8X4 ಅಡಿಗಳ ಕಬ್ಬಿಣದ ಶೀಟ್ ಗೆ ಕಟ್ಟಿದ ಬೆಲ್ಟ್ ಕಟ್ ಆಗಿ ಕಬ್ಬಿಣದ ಶೀಟ್ ದೂರುದಾರರ ಎರಡೂ ಕಾಲುಗಳ ಬಿದ್ದಾಗ ಎರಡು ಕಾಲುಗಳ ಪಾದಗಳಿಗೆ ಮತ್ತು ಬಲಗಾಲಿನ ತೊಡೆಯ ಬಳಿ ತೀವ್ರ ಸ್ವರೂಪದ ರಕ್ತಗಾಯಗಳಾಗಿರುತ್ತೆಂದು ದೂರು.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷತನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ಮುನಿಯಪ್ಪ, ನ್ಯೂಟೌನ್, ಬೇತಮಂಗಲ ರವರ ಮಗನಾದ ಶಿವಕುಮಾರ್, 28 ವರ್ಷ ರವರು ದಿನಾಂಕ- 06-11-2020 ರಂದು ಮುದ್ದೇಗೌಡನಹಳ್ಳಿ ಗ್ರಾಮದ ಬಳಿ ವಸೀಂ ರವರ ಮನೆ ಮೇಲೆ ಕಂಬಿ ಕೆಲಸ ಮಾಡುತ್ತಿರುವಾಗ ಬೆಳಿಗ್ಗೆ 9.45 ಗಂಟೆಯಲ್ಲಿ  ಶಿವಕುಮಾರ್ ರವರು ಕಂಬಿ ಕಟ್ಟುವಾಗ  ಅವರ ಮನೆ ಬಳಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಶಿವಕುಮಾರ್ ರವರ ಕೈಯಲ್ಲಿದ್ದ ಕಂಬಿ ತಗುಲಿ ಕಂಬಿಗೆ ವಿದ್ಯುತ್ ಸ್ವರ್ಶವಾಗಿ ಮೃತಪಟ್ಟಿದ್ದು, ವಾಸೀಂ ರವರು ಯಾವುದೇ ಮುಂಜಾಗ್ರತಾ ಸುರಕ್ಷತ ಕ್ರಮಗಳನ್ನು ತೆಗೆದುಕೊಳ್ಳದೆ ಬೇಜವಾಬ್ದಾರಿತನ ಮತ್ತು ನಿರ್ಲಕ್ಷತೆ ವಹಿಸಿದ್ದರಿಂದ ಪ್ರಕರಣ ದಾಖಲಾಗಿರುತ್ತದೆ.

– ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ವೆಂಕಟೇಶಪ್ಪ, ಕಾರಹಳ್ಳಿ ಪಂಪ್ ಹೌಸ್, ಬಂಗಾರಪೇಟೆ ರವರ ಮಗನಾದ ಕೇಶವ ಕುಮಾರ್, 31 ವರ್ಷ ರವರಿಗೆ ಸಂಸಾರಿಕ ವಿಚಾರದಲ್ಲಿ ಮನಸ್ತಾಪಗಳು ಬಂದು ಹೆಂಡತಿ ಮಗನೊಂದಿಗೆ ತವರು ಮನೆಯಾದ ಕಾವರನಹಳ್ಳಿಯಲ್ಲಿ ವಾಸಿವಿದ್ದು, ಈ ವಿಚಾರವಾಗಿ ಕೇಶವಕುಮಾರ್‌ ಮನಸ್ಸಿಗೆ ಬೆಜಾರು ಮಾಡಿಕೊಂಡು ಮಧ್ಯಪಾನಮಾಡುವ ಹವ್ಯಾಸ ಬೆಳೆಸಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06.11.2020 ರಂದು ಸಂಜೆ 5-00 ಗಂಟೆಯಲ್ಲಿ ಕಾರಹಳ್ಳಿ ಪಂಪ್ ಹೌಸ್ ನಲ್ಲಿ ಸೀರೆಯಿಂದ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *