ದಿನದ ಅಪರಾಧಗಳ ಪಕ್ಷಿನೋಟ 06 ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 05.07.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.07.2020 ರಂದು ಬೆಳಿಗ್ಗೆ ಸುಮಾರು 10.30 ಗಂಟೆಯಲ್ಲಿ ಈ ಕೇಸಿನ ಪಿರ್‍ಯಾದಿದಾರರು ಪ್ರಸನ್ನ ಕುಮಾರ್‍ ೨ನೇ ಟೈಪ್ ಬೆಮಲ್ ನಗರ ರವರು ಬಂಗಾರಪೇಟೆಯಿಂದ ಬೆಮೆಲ್ ನಗರಕ್ಕೆ ಹೋಗಲು ಆಟೋ ಸಂಖ್ಯೆ ಕೆಎ-08-4551 ರಲ್ಲಿ ಕುಳಿತುಕೊಂಡು, ಸದರಿ ಆಟೋವನ್ನು ದಾಸ್ ಎಂಬುವರು ಚಲಾಯಿಸಿಕೊಂಡು, ಬಂಗಾರಪೇಟೆ-ಅಜ್ಜಪ್ಪನಹಳ್ಳಿ ಮುಖ್ಯ ರಸ್ತೆಯ ಕೆಸರನಹಳ್ಳಿ ತಿರುವು ಬಳಿ ಹೋಗುತ್ತಿದ್ದಾಗ, ಅಜ್ಜಪ್ಪನಹಳ್ಳಿ ಕಡೆಯಿಂದ ಈಚರ್ ಟೆಂಪೋ ಸಂಖ್ಯೆ ಕೆಎ-53-ಬಿ-7767 ನ್ನು ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಆಟೋಗೆ ಡಿಕ್ಕಿಪಡಿಸಿದ ಪ್ರಯುಕ್ತ, ಆಟೋ ಬಿದ್ದು ಹೋಗಿದ್ದು, ಆಟೋವಿನಲ್ಲಿ ಕುಳಿತಿದ್ದ ಪಿರ್‍ಯಾದಿಗೆ ಬಲಕಣ್ಣಿನ ಉಬ್ಬಿನ ಕೆಳಗೆ, ಹಣೆಯ ಮೇಲೆ ಮತ್ತು ಎರಡೂ ಕಾಲುಗಳಿಗೆ ರಕ್ತಗಾಯಗಳಾಗಿರುತ್ತದೆ. ಆಟೋ ಚಾಲಕನಾದ ದಾಸ್ ರವರಿಗೆ ಮುಖ ಮತ್ತು ತಲೆಗೆ ರಕ್ತಗಾಯಗಳಾಗಿದ್ದು, ದಾಸ್ ರವರನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತದ ದೆಸೆಯಿಂದ ದಾಸ್ ರವರಿಗೆ ಉಂಟಾಗಿದ್ದ ತೀವ್ರ ಸ್ವರೂಪ ರಕ್ತಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ಮದ್ಯಾಹ್ನ ಸುಮಾರು 2.00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ಈಚರ್ ಟೆಂಪೋನ ಚಾಲಕ, ಟೆಂಪೋವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.07.2020 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ವೆಂಕಟರಾಮಪ್ಪ, ನಾಗರೆಡ್ಡಿಪಲ್ಲಿ, ವಿ-ಕೋಟ, ಆಂದ್ರಪ್ರದೇಶ ರವರ ಮಗನಾದ ಚಿಟ್ಟಿಬಾಬು, 28 ವರ್ಷ ರವರು ಮಹದೇವಪುರದಲ್ಲಿರುವ ಅವರ ಸಂಬಂಧಿಕರಾದ ನಾರಾಯಣಸ್ವಾಮಿರವರ ಮನೆಗೆ ಬಂದು ನಂತರ ರಾತ್ರಿ 8-00 ಗಂಟೆ ಸಮಯದಲ್ಲಿ ನಾರಾಯಣಸ್ವಾಮಿ ರವರ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ರಾಮಸಾಗರಕ್ಕೆ ಹೋಗಿ ನಂತರ ಮಹದೇವಪುರ ಗ್ರಾಮಕ್ಕೆ ವಾಪಸ್ ಬರುವಾಗ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಕಾರಣ ದ್ವಿಚಕ್ರ ವಾಹನ ಅಪ್ಸೈಡ್ ಆಗಿ ಕೆಳಗೆ ಬಿದ್ದಾಗ, ಚಿಟ್ಟಿ ಬಾಬು ರವರಿಗೆ ಹಣೆಯ ಮುಂಬಾಗದಲ್ಲಿ ತೀವ್ರತರವಾದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

Leave a Reply

Your email address will not be published. Required fields are marked *