ದಿನದ ಅಪರಾಧಗಳ ಪಕ್ಷಿನೋಟ 06ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 05.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಕ್ಚುತ್‌ರಾಜ್‌ ಬಿನ್ ಕೃಷ್ಣನ್, ಕೆನಡೀಸ್‌ ಲೈನ್‌, ಉರಿಗಾಂ, ಕೆ.ಜಿ.ಎಫ್  ರವರ ಮಗ ಕಾಮೇಶ್ವರನ್ ರವರಿಗೆ ದಿನಾಂಕ:04.04.2021 ರಂದು ರಾತ್ರಿ 8-00 ಗಂಟೆಯಲ್ಲಿ ಅದೆ ಲೈನಿನ ವಾಸಿ ಹರೀಶ್ @ ಚಿನ್ನತಂಬಿ ರವರು ಸಿಗರೇಟ್ ತೆಗೆದುಕೊಂಡು ಬಾ ಎಂದು ಹಣ ನೀಡಲು ಬಂದಿದ್ದು, ಆಗ ಕಾಮೇಶ್ವರನ್‌ ರವರು “ನಾನೇಕೆ ನಿನಗೆ ಸಿಗರೇಟ್ ತೆಗೆದುಕೊಂಡು ಬರಬೇಕು” ಎಂದು ಹರೀಶ್ @ ಚಿನ್ನತಂಬಿಗೆ ಕೇಳಿದಾಗ, ಹರೀಶ್ @ ಚಿನ್ನತಂಬಿ ಎಂಬುವನು ಕಾಮೇಶ್ವರನ್ ಗೆ ಕೈಗಳಿಂದ ಹೊಡೆದಿದ್ದು, ದೂರುದಾರರು ಮತ್ತು ಸರವಣನ್ ರವರು ಅಡ್ಡ ಹೋಗಿದಕ್ಕೆ ಹರೀಶ್‌ ಚಾಕುವಿನಿಂದ ಇಬ್ಬರಿಗೂ ಹೊಡೆದು ರಕ್ತಗಾಯಪಡಿಸಿ, ಕೆಟ್ಟ ಮಾತುಗಳಿಂದ ಬೈದಿರುತ್ತಾನೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರದ ಶ್ರೀ. ವೆಂಕಟಾಚಲಪತಿ ಬಿನ್ ವೀರಭದ್ರಪ್ಪ, ಚಿಕ್ಕಕಲವಂಚಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಅಕ್ಕನ ಗಂಡ ಶ್ರೀ ವೆಂಕಟೇಶಪ್ಪ ಬಿನ್ ಲೇಟ್ ವೆಂಕಟಪ್ಪ, 58 ವರ್ಷ ರವರು ದಿನಾಂಕ 30.03.2021 ರಂದು ಬೆಳಿಗ್ಗೆ 10.30 ಗಂಟೆಗೆ ಮನೆಯಿಂದ ಚಿಕ್ಕಕಳವಂಚಿ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ತಿಳಿಸಿ ಹೋದವರು, ಮನೆಗೆ ವಾಪಸ್ ಬರದೆ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *