ದಿನದ ಅಪರಾಧಗಳ ಪಕ್ಷಿನೋಟ 05 ನೇ ಮೇ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 04.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ಇತರೆ : 01 (THE DISASTER MANAGEMENT ACT, 2005)

            ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋವಿಡ್-19 ಸೋಂಕು ಖಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಭಾರತದ್ಯಾಂತ ಹರಡುತ್ತಿರುವ ಪ್ರಯುಕ್ತ ಮಾನ್ಯ ಕರ್ನಾಟಕ ಸರ್ಕಾರವು ಲಾಕ್ ಡೌನ್ ಘೋಷಣೆ ಮಾಡಿ, ದಿನಾಂಕ.27.04.2021 ರಿಂದ 12.05.2020 ರವರೆಗೆ ಎಲ್ಲಾ ಅಂಗಡಿ ಮುಗ್ಗಟ್ಟು ಮುಚ್ಚಿಸಿ ಹಾಗೂ ಜನರ ಓಡಾಟವನ್ನು ನಿಯಂತ್ರಿಸಲು ಆದೇಶವಾಗಿ, ನಂತರ ರಾಜ್ಯ ಸರ್ಕಾರವು ಸಾರ್ವಜನಿಕರ ಅವಶ್ಯಕತೆಗೆ ಬೇಕಾದ ಹಾಲು, ತರಕಾರಿ, ಮೆಡಿಕಲ್ ಸ್ಟೋರ್ ಮತ್ತು ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುತ್ತೆ. ಹೀಗಿರುವಾಗ ದಿನಾಂಕ.04.05.2021 ರಂದು ಈ ಕೇಸಿನ ದೂರುದಾರರಾದ ಶ್ರೀ ನಾಗರಾಜ್, ಸಿ.ಪಿ.ಐ ರಾಬರ್ಟ್‌‌ಸನ್‌ಪೇಟೆ ಪೊಲೀಸ್ ವೃತ್ತ ರವರು ಬೆಳಿಗ್ಗೆ 11:30 ಗಂಟೆಯಲ್ಲಿ ರಾಬರ್ಟ್ ಸನ್ ಪೇಟೆಯ 3ನೇ ಕ್ರಾಸ್ ನಲ್ಲಿ ಗಸ್ತಿನಲ್ಲಿದ್ದಾಗ ಆರೋಪಿ ಮೌಲಾ ಬಿನ್ ರಸೂಲ್ ಶರೀಪ್, ಸಂಜಯ್‌ಗಾಂಧಿನಗರ ರಾಬರ್ಟ್‌‌ಸನ್‌ಪೇಟೆ  ಎಂಬುವನು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಕಬ್ಬು ಜ್ಯೂಸ್ ಅಂಗಡಿಯನ್ನು ತೆರೆದು ಸಾರ್ವಜನಿಕರಿಗೆ ಕಬ್ಬು ಜ್ಯೂಸ್ ಮಾರುತ್ತಿದ್ದು, ಸದರಿ ಆರೋಪಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದರಿಂದ ಆರೋಫಿ ವಿರುದ್ದ ಕಾನೂನು ಕ್ರಮ ಜರಗಿಸಿರುತ್ತದೆ.

 

ಹಲ್ಲೆ : 01

            ಉರಿಗಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:02.05.2021 ರಂದು ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ಈ ಕೇಸಿನ ದೂರುದಾರರಾದ ಗಣೇಶ್, ಪೆದ್ದಪಲ್ಲಿ ಉರಿಗಾಂ ಠಾಣೆ ಸರಹದ್ದು ರವರ ಅಣ್ಣ ನವೀನ್ ಕುಮಾರ್ ರವರೊಂದಿಗೆ ಪೆದ್ದಪಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಮಂಜುನಾಥ್ ರವರ ಮನೆಯ ಸಮೀಪವಿರುವ ಚರಂಡಿಯ ಮೋರಿಯ ಮೇಲೆ ಕುಳಿತಿರುವಾಗ ತಮ್ಮದೆ ಗ್ರಾಮದ ಶ್ರೀಮತಿ ಸಂಪೂರ್ಣ ರವರನ್ನು ಕುರಿತು ಅದೇ ಗ್ರಾಮದ ಆರೋಪಿ ವೆಂಕಟಪತಿ ಎಂಬುವನು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆಯಲು ಪ್ರಯತ್ನಿಸಿದಾಗ, ಪಿರ್ಯಾದಿಯು ಸದರಿ ಸ್ಥಳಕ್ಕೆ ಹೋಗಿ ವೆಂಕಟಪತಿ ರವರನ್ನು ಪ್ರಶ್ನಿಸಿದ್ದಕ್ಕೆ ಆರೋಪಿ ದೂರುದಾರರ ಮೇಲೆ ಹಲ್ಲೆ ಮಾಡಿರುತ್ತಾನೆ.

Leave a Reply

Your email address will not be published. Required fields are marked *