ದಿನದ ಅಪರಾಧಗಳ ಪಕ್ಷಿನೋಟ 05ನೇ ನವೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 04.11.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಕಾಶ್ ಬಿನ್ ದೊಣ್ಣಪ್ಪ, ಅತ್ತಿಗಿರಿಕೊಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 04.11.2020 ರಂದು ಸಂಜೆ 6.00 ಗಂಟೆಯಲ್ಲಿ ಅವರ ಹೊಲದ ಕಡೆಯಿಂದ ಅತ್ತಿಗಿಕೊಪ್ಪ ಗ್ರಾಮಕ್ಕೆ ಬರಲು ದ್ವಿಚಕ್ರ ವಾಹನ ಕೆಎ-08-ಕ್ಯೂ-3946 ರ ಹಿಂಬದಿಯಲ್ಲಿ ಹೆಂಡತಿ ಸುಶೀಲಮ್ಮ ರವರನ್ನು ಕುಳ್ಳರಿಸಿಕೊಂಡು, ಅತ್ತಿಗಿರಿಕೊಪ್ಪ ಗ್ರಾಮದ ಸ್ಮಶಾನದ ಬಳಿ ಬರುತ್ತಿದ್ದಾಗ, ಅತ್ತಿಗಿರಿಕೊಪ್ಪ ಗ್ರಾಮದ ಕಡೆಯಿಂದ ದ್ವಿಚಕ್ರ ವಾಹನ ಕೆಎ-08-ಎಕ್ಸ್-3980 ನ್ನು ಕದಿರೇನಹಳ್ಳಿ ಗ್ರಾಮದ ದರ್ಮ ರವರು ಅತಿವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ದೂರುದಾರರಿಗೆ ರಕ್ತಗಾಯವಾಗಿರುತ್ತದೆ.

 

– ಹಲ್ಲೆ :  02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಬಾಬು ಬಿನ್ ಮುನಿಸ್ವಾಮಿ, ಎಂ.ಆರ್‌.ಕೊತ್ತೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 04.11.2020 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ಘಟ್ಟಮಾದಮಂಗಲ ಗ್ರಾಮದ ಕಡೆ ಹೋಗುತ್ತಿದ್ದಾಗ, ಬೈನೇಪಲ್ಲಿ ಗೇಟ್ ಬಳಿ ಇರುವ ಸೇತುವೆ ಬಳಿ ಲಕ್ಷ್ಮೀನಾರಾಯಣ ರವರು ಎದುರಗಡೆಯಿಂದ ಬಂದು ದೂರುದಾರರ ವಾಹನವನ್ನು ತಡೆದು ಟ್ರಸ್ಟ್ ಬಗ್ಗೆ ಸುದ್ದಿ ಮಾಡುತ್ತೀಯಾ ಎಂದು ಗಲಾಟೆ ಮಾಡಿ, ಕೆಟ್ಟ ಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ, ಕೈಗಳಿಂದ ಹೊಡೆದಿರುತ್ತಾರೆ.

ದೂರುದಾರರಾದ ಶ್ರೀ. ಲಕ್ಷ್ಮೀನಾರಾಯಣ ಬಿನ್ ರಾಮಚಂದ್ರಪ್ಪ, ಬೈನೇಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 04.11.2020 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ಬೈನೇಪಲ್ಲಿ ಗೇಟ್ ಬಳಿ ಇರುವ ಸೇತುವೆ ಬಳಿ ಬರುತ್ತಿದ್ದಾಗ, ಎಂ.ಆರ್‌. ಕೊತ್ತೂರು ಗ್ರಾಮದ ಬಾಬು ಎದುರಗಡೆಯಿಂದ ಬಂದು ದೂರುದಾರರನ್ನು ಅಡ್ಡಗಟ್ಟಿ ನಿಲ್ಲಿಸಿ, ಏಕೆ ನನ್ನನ್ನು ನೋಡಿ ಗುರಾಯಿಸುತ್ತಿದ್ದೀಯಾ ಎಂದು ಗಲಾಟೆ ಮಾಡಿ ಕೋಲಿನಿಂದ ಮತ್ತು ಕೈಗಳಿಂದ ಹೊಡೆದು, ಕೆಟ್ಟಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಶರಣ್ಯಕುಮಾರಿ ಕೊಂ ಕಿರಣ್‌ಕುಮಾರ್‌, ಹಲಸೂರು, ಬೆಂಗಳೂರು  ರವರ ಗಂಡ ಕಿರಣ್ ಕುಮಾರ್, 31 ವರ್ಷ ರವರು ದೂರುದಾರರ ತವರು ಮನೆ ಮ್ಯಾರೀಡ್ ಕ್ವಾಟ್ರಸ್  ಚಾಂಪಿಯನ್ ರೀಪ್ಸ್ ಕೆ.ಜಿ.ಎಫ್ ನಿಂದ ಬೆಂಗಳೂರಿನ ವಾಸದ ಮನೆಗೆ ವಾಪಸ್ಸು ಬರುತ್ತಿರುವುದಾಗಿ ಪೋನ್ ಕರೆ ಮಾಡಿ ತಿಳಿಸಿ ರಾಯಲ್ ಎನ್ ಪೀಲ್ಡ್ ದ್ವಿ ಚಕ್ರ ವಾಹನ ಸಂಖ್ಯೆ ಕೆ.ಎ 03- ಕೆ.ಇ-0818 ರಲ್ಲಿ ಹೊರಟವರು ಮನೆಗೆ ಹೋಗದೆ ಕಾಣೆಯಾಗಿರುತ್ತಾರೆ.

 

Leave a Reply

Your email address will not be published. Required fields are marked *