ದಿನದ ಅಪರಾಧಗಳ ಪಕ್ಷಿನೋಟ 03 ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 02.07.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 02

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಬಿಜಿಎಂಎಲ್‌ ಆವರಣದಲ್ಲಿ ಶ್ರೀಗಂಧದ ಮರ ಕಳುವಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:02.07.2020 ರಂದು ಶ್ರೀ. ಪನ್‌ಸಾಂಬಲ್‌, ಬಿಜಿಎಂಎಲ್‌ ಸಿಎಸ್‌ಓ, ಸರವಣಭವನ್‌ ಕೆ.ಜಿ.ಎಫ್‌ ರವರು ನೀಡಿದ ದೂರಿನಲ್ಲಿ ನಂದಿದುರ್ಗ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಸೂಪರ್ ವೈಸರ್ ಶ್ರೀ ವೆಂಕಟೇಶ್ ರವರು ಟೆಲಿಪೋನ್ ಮುಖಾಂತರ ದೂರುದಾರರಿಗೆ ಕರೆ ಮಾಡಿ ಈ ದಿನ ಬೆಳಗಿನ ಜಾವ ಸುಮಾರು 04.00 ಗಂಟೆ ಸಮಯದಲ್ಲಿ ನಂದಿದುರ್ಗ ಮಿಲ್ ನ ಕಾಂಪೌಂಡ್ ಒಳಗಡೆ ಸುಮಾರು 18 ಅಡಿ ಉದ್ದ 6 ಇಂಚು ದಪ್ಪ ಇರುವ ಶ್ರೀಗಂಧದ ಮರವನ್ನು ಯಾರೋ  ಕಳ್ಳರು ಕತ್ತರಿಸಿ ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ್ದು, ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕಳ್ಳತನವಾಗಿರುವ ಸಮಯದಲ್ಲಿ ಮಿಲ್ ಒಳಗೆ ರಾತ್ರಿ ಕರ್ತವ್ಯದಲ್ಲಿ 03 ಪಾಯಿಂಟ್ ಗಳಲ್ಲಿ ಇದ್ದ 04 ಜನ ಸೆಕ್ಯೂರಿಟಿ ಸಿಬಂದಿಯವರಾದ ನಾಗರಾಜ್, ಸತ್ಯಮೂರ್ತಿ, ಕುಲಶೇಖರ್, ಮತ್ತು ಸೆಕ್ಯುರಿಟಿ ಸೂಪರ್ ವೈಸರ್ ವೆಂಕಟೇಶ್ ರವರು ಕರ್ತವ್ಯದಲ್ಲಿದ್ದರು ಸಹ ಕಳುವಾಗಿರುತ್ತದೆಂದು ದೂರು.

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮೋಟಾರು ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 02.07.2020 ರಂದು ದೂರುದಾರರಾದ ಶ್ರೀ. ಪದ್ಮನಾಭಯ್ಯ ಬಿನ್‌ ಕೋದಂಡಪಾಣಿ ಸ್ವರ್ಣನಗರ ರಾಬರ್ಟ್‌‌ಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರ ವಾಹನ ಸುಜುಕಿ ಆಕ್ಸಸ್ ಸಂ. KA-08-W-9471 ದ್ವಿಚಕ್ರವಾಹನ ವನ್ನು ಅವರ ವಾಸದ ಮನೆಯ ಮುಂಭಾಗ ನಿಲ್ಲಿಸಿದನ್ನು ದಿನಾಂಕ. 29.06.2020 ರಂದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಾಹನವು ಸುಮಾರು 38,000/- ಬೆಲೆಬಾಳುವುದಾಗಿರುತ್ತೆಂದು ದೂರು

 

– ಹಲ್ಲೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-02-07-2020 ರಂದು ದೂರುದಾರರಾದ ಶ್ರೀ. ವೆಂಕಟರಾಮನಾಯ್ಡು ಬಿನ್‌ ಗಂಗಯ್ಯನಾಯ್ದು ಮೋತಕಪಲ್ಲಿ ಗ್ರಾಮ ರವರು ನೀಡಿದ ದೂರಿನಲ್ಲಿ ಮೋತಕಪಲ್ಲಿ ಗ್ರಾಮದ ಸರ್ವೆ ನಂಬರ್ 3/2 ರಲ್ಲಿನ ದೂರುದಾರರ ಜಮೀನಿಗೆ ದಾರಿಯ ವಿಚಾರದಲ್ಲಿ ದೂರುದಾರರಿಗೂ ಮತ್ತು ಆರೋಪಿ ಗುರುಮೂರ್ತಿನಾಯ್ಡು ರವರಿಗೆ   ವಿವಾದ ವಿದ್ದು ಈ ವಿಚಾರದಲ್ಲಿ ದಿನಾಂಕ- 29-06-2020 ರಂದು ದೂರುದಾರರು ಜಮಿನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ ಗುರುಮೂರ್ತಿ ಎಂಬುವರು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ 02 ಹೆಂಗಸು ಕಾಣೆಯಾಗಿರುವ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ ಮಂಜುನಾಥ ಬಿನ್ ವೆಂಕಟೇಶಪ್ಪ, ಸಂಪಂಗಿಪುರ ಗ್ರಾಮದ ರವರು ನೀಡಿದ ದೂರಿನಲ್ಲಿ ದೂರುದಾರರ ಹೆಂಡತಿ ಕಾವೇರಿ, ವಯಸ್ಸು 21 ವರ್ಷ ರವರು  ದಿನಾಂಕ 02.07.2020 ರಂದು ಶ್ರೀಮತಿ ಕಾವೇರಿ ರವರು ಮನೆಯಿಂದ ಹೊರಗೆ  ಹೋದವರು ಮತ್ತೆ ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

ದೂರುದಾರರಾದ ಶ್ರೀ. ರಾಜಶೇಖರನ್‌ ಬಿನ್‌ ಚಿನ್ನಪ್ಪಯ್ಯ ಅಮರಾವತಿ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಕು//ಯಶಸ್ವಿನಿ, 18 ವರ್ಷ ರವರು ಕೋಲಾರದಲ್ಲಿರುವ ಚನ್ನೇಗೌಡ ಇನ್ಸ್ಟಿಟ್ಯೂಟ್ ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 30.06.2020 ರಂದು ಕು//ಯಶಸ್ವಿನಿ, ರವರು ಹೊರಗೆ ಹೋಗಿಬರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಬರದೆ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *