ದಿನದ ಅಪರಾಧಗಳ ಪಕ್ಷಿನೋಟ 03ನೇ ಮೇ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 03.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಕೊಲೆ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ- 03-05-2021 ರಂದು ಬೆಳಿಗ್ಗೆ 5.33 ಗಂಟೆಯಲ್ಲಿ ಪಾಪೇನಹಳ್ಳಿ ಗ್ರಾಮದ  ವಾಸಿ ರತ್ನಪ್ಪ @ ಬುಡ್ಡಗಾ ಎಂಬುವರು ಈ ಕೇಸಿನ ದೂರುದಾರರಾದ ಸೋಮಶೇಖರ್‍, ಪಾಪೇನಹಳ್ಳಿ ಗ್ರಾಮದ ವಾಸಿ ರವರಿಗೆ ಪೋನ್ ಮಾಡಿ ತಿಳಿಸಿದ್ದು ಏನೆಂದರೆ ರಾತ್ರಿ 2.00 ಗಂಟೆಯಲ್ಲಿ ನಿಮ್ಮ ತೋಟದ ಕೃಷಿ ಹೊಂಡಾದ ಬಳಿ ಯಾರೋ ಒಬ್ಬರು ಅಸಾಮಿಗಳು ಯಾರದೋ ಶವವನ್ನು ಹೂಳುತ್ತಿದ್ದು ಅವರು ನನ್ನನ್ನು ನೋಡಿ ಓಡಿ ಹೋಗಿರುತ್ತಾರೆ ಎಂದು ರತ್ನಪ್ಪ @ ಬುಡ್ಡಗಾ ಎಂಬುವರು ದೂರುದಾರರಿಗೆ ತಿಳಿಸಿ ಪೋನ್ ಕಟ್ ಮಾಡಿರುತ್ತಾನೆ. ನಂತರ ಪಿರ್ಯಾದಿ ದಿನಾಂಕ- 03-05-2021 ರಂದು ಬೆಳಿಗ್ಗೆ 6.00 ಗಂಟೆಗೆ ತಮ್ಮ ತೋಟದ ಬಳಿ ಬಂದು ಕೃಷಿ ಹೊಂಡಾದ ಪಕ್ಕ ನೋಡಲಾಗಿ ಮಣ್ಣು ಅಗೆದು ಮುಚ್ಚಿರುವ ನಿಶಾನೆ ಕಂಡು ಬಂದ  ಕೂಡಲೇ ಪಿರ್ಯಾದಿ ಪೊಲೀಸರಿಗೆ ಪೋನ್ ಮಾಡಿ ಸ್ಥಳಕ್ಕೆ ಪೋಲಿಸರು ಬಂದ ಮೇಲೆ ಪಿರ್ಯಾದಿ ಮಣ್ಣನ್ನು ಸರಿಸಿದಾಗ ಮನುಷ್ಯನ ಕೈ ಕಂಡು ಬಂದಿರುತ್ತದೆ. ಯಾರೋ ಆರೋಪಿಗಳು ತಮ್ಮ ತೋಟದಲ್ಲಿ ಯಾವುದೋ ಉದ್ದೇಶಕ್ಕಾಗಿ ಕೊಲೆ ಮಾಡಿ ಯಾರಿಗೂ ತಿಳಿಯದೇ ರಾತ್ರೋ ರಾತ್ರಿ ತಮ್ಮ ತೋಟದ ಸರ್ವೆ ನಂಬರ್ 25 ರಲ್ಲಿ ಇರುವ ಕೃಷಿ ಹೊಂಡಾದ ಪಕ್ಕದಲ್ಲಿ ಮಣ್ಣು ಅಗೆದು ಹೂಳಿ ಬಿಟ್ಟಿರುತ್ತಾರೆ. ಸತ್ತಿರುವ ವ್ಯಕ್ತಿಯ ಗುರ್ತು ಪತ್ತೆಯಾಗಿರುವುದಿಲ್ಲ, ಯಾರೋ ಆರೋಪಿಗಳು ಸತ್ತಿರುವ ವ್ಯಕ್ತಿಯನ್ನು ಎಲ್ಲೋ ಕೊಲೆ ಮಾಡಿ ತಮ್ಮ ತೋಟದಲ್ಲಿ ಹೂಳಿರುತ್ತಾರೆ ಎಂದು ಈ ಕೇಸಿನ ದೂರುದಾರರಾದ ಸೋಮಶೇಖರ್‍ ರವರು  ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *