ದಿನದ ಅಪರಾಧಗಳ ಪಕ್ಷಿನೋಟ 03ನೇ ನವೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 02.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ದೊಂಬಿ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋವಿಂದಪ್ಪ ಬಿನ್ ವೆಂಕಟಪ್ಪ, ಎಲೇಸಂದ್ರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 01.11.2020 ರಂದು ಮದ್ಯಾಹ್ನ 1.30 ಗಂಟೆಯಲ್ಲಿ ಮಕ್ಕಳಾದ ಚರಣ್, ಹರೀಶ್ ಕುಮಾರ್ & ದೀಕ್ಷಿತ್ ರವರೊಂದಿಗೆ ಜಮೀನಿನಲ್ಲಿ ಟೊಮೊಟೋವನ್ನು ಬಿಡಿಸುತ್ತಿದ್ದಾಗ, ಗೋವಿಂದಪ್ಪ, ಚಿನ್ನಪ್ಪ, ನಾರಾಯಣಪ್ಪ, ಮುನಿವೆಂಕಟಮ್ಮ, ರಮಾದೇವಿ ಮತ್ತು ರವಿ ರವರು ಜೆಸಿಬಿಯಿಂದ ದೂರುದಾರರ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಸದರ ಮಾಡುತ್ತಿದ್ದುದನ್ನು ಕಂಡು ಹೋಗಿ ಕೇಳಿದ್ದಕ್ಕೆ ಕೆಟ್ಟ ಮಾತುಗಳಿಂದ ಬೈದು, ದೊಣ್ಣೆ ಕೋಲು ಮತ್ತು ಕೈಗಳಿಂದ ಹೊಡೆದು ರಕ್ತಗಾಯಗಳನ್ನುಂಟುಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

– ಹಲ್ಲೆ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಿನ್ನಪ್ಪ ಬಿನ್ ಈರಪ್ಪ, ಎಲೇಸಂದ್ರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 01.11.2020 ರಂದು 13.30 ಗಂಟೆಯಲ್ಲಿ ಜಮೀನಿನಲ್ಲಿ ಉಳುಮೆ ಮಾಡಿ ಜೆಸಿಬಿ ಯಿಂದ ಸದರ ಮಾಡುತ್ತಿದ್ದಾಗ, ಚರಣ್, ಗೋವಿಂದಪ್ಪ, ಹರೀಶ್, ದೀಕ್ಷಿತ್‌ ರವರು ಅಲ್ಲಿಗೆ ಬಂದು ಕೆಟ್ಟ ಮಾತುಗಳಿಂದ ಬೈದು, ನೀಲಗಿರಿ ದೊಣ್ಣೆ ಮತ್ತು ಕೈಗಳಿಂದ ದೂರುದಾರರಿಗೆ ಹೊಡೆದಿರುತ್ತಾರೆ.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ಮುನಿಯಪ್ಪ, ದೊಡ್ಡಕಲ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ಕುಮಾರಿ ಅಖೀಲಾ, 19 ವರ್ಷ ರವರು ದಿನಾಂಕ: 01.11.2020 ರಂದು ಸಂಜೆ 7.00 ಗಂಟೆಗೆ ಮನೆಯಿಂದ ಹೊರಗೆ ಹೋದವರು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  02

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬಿನ್ ದೇವರಪ್ಪ, ದೊಡ್ಡೂರು ಕರಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಂದೆ ದ್ಯಾವರಪ್ಪ @ ದೇವರಪ್ಪ, 75 ವರ್ಷ ರವರು ದಿನಾಂಕ: 01-11-2020 ರಂದು ಮಧ್ಯಾಹ್ನ 2-00 ಗಂಟೆಯಲ್ಲಿ ದೊಡ್ಡೂರು ಕರಪನಹಳ್ಳಿ ಗ್ರಾಮದಲ್ಲಿರುವ ಆವರ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ, ಯಾವುದೋ ವಿಷಪೂರಿತ ಹಾವು ಆತನ ಎರಡೂ ಕಾಲುಗಳಿಗೆ ಕಚ್ಚಿದ್ದು, ಆತನನ್ನು ಚಿಕಿತ್ಸೆಗೆ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೆ ದ್ಯಾವರಪ್ಪ @ ದೇವರಪ್ಪ ರವರು  ದಿನಾಂಕ. 02-11-2020 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿವೆಂಕಟಪ್ಪ ಬಿನ್ ಚಿನ್ನಪ್ಪ, ವಿ.ಕೋಟೆ, ಆಂದ್ರಪ್ರದೇಶ ರವರ ಮಗನಾದ ಪ್ರಕಾಶ್, 28 ವರ್ಷ ರವರಿಗೆ 5 ವರ್ಷಗಳ ಹಿಂದೆ ಗ್ಲಾಸ್ ಕಟಿಂಗ್ ಮಾಡುವಾಗ ಗ್ಲಾಸ್ ಎದೆಯ ಮೇಲೆ ಬಿದ್ದು ಗಾಯಗಳಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡೆಸಿದರೂ ಗಾಯಗಳು ಸಂಪೂರ್ಣವಾಗಿ ಗುಣಮುಖವಾಗದೇ ಇದ್ದುದ್ದರಿಂದ ದಿನಾಂಕ 01.11.2020 ರಂದು ಮದ್ಯಾಹ್ನ 2.00 ಗಂಟೆಗೆ ಪ್ರಕಾಶ್ ರವರು ದೊಡ್ಡಮ್ಮ ಜಯಮ್ಮ ರವರ ಮನೆಗೆ ಕಾಮಸಮುದ್ರಂನ ಗೊಲ್ಲಹಳ್ಳಿ ಗ್ರಾಮಕ್ಕೆ ಬಂದಿದ್ದು, ಗಾಯಗಳ ನೋವಿಗೆ ತಾಳಲಾರದೇ ದಿನಾಂಕ 02.11.2020 ರಂದು ಬೆಳಿಗ್ಗೆ 7.30 ಗಂಟೆಯಿಂದ ಬೆಳಿಗ್ಗೆ 8.00 ಗಂಟೆಯ ಮದ್ಯೆ ಗೊಲ್ಲಹಳ್ಳಿ ಗ್ರಾಮದ ನಾರಾಯಣಪ್ಪ ರವರ  ದನದ ಕೊಟ್ಟಿಗೆಯಲ್ಲಿ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *