ದಿನದ ಅಪರಾಧಗಳ ಪಕ್ಷಿನೋಟ 02 ನೇ ಜೂನ್ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 01.06.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಜೂಜಾಟ ಕಾಯ್ದೆ: 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 01.06.2021 ರಂದು ಸಂಜೆ 6.45 ಗಂಟೆಯಲ್ಲಿ ಈ ಕೇಸಿನ ಆರೋಪಿಗಳಾದ ಮಂಜುನಾಥ, ಮುನಿರಾಜು,  ಅಶೋಕ, ಪ್ರವೀನ್ ಕುಮಾರ್‍, ರಾಜೇಶ್, ಶಿವ, ರಾಜೇಶ್ ಬಾಬು, ಮಂಜುನಾಥ, ರವರುಗಳು ಠಾಣಾ ಸರಹದ್ದಿನ ಕಾರಹಳ್ಳಿ ಗ್ರಾಮದ ಪ್ರವೀಣ್ ರವರ ಜಮೀನಿನ ಬಳಿ ಕನೂನು ಬಹೀರವಾಗಿ ಇಸ್ಪೀಟ್ ಎಲೆಗಳನ್ನು ಬಳಸಿಕೊಂಡು, ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಬಂಗಾರಪೇಟೆ ಪಿಎಸ್‌ಐ ಶ್ರೀ. ಜಗಧೀಶ್ ರೆಡ್ಡಿ ರವರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದ್ದು, ಸ್ಥಳದಲ್ಲಿ ಜೂಜಾಟವಾಡಲು ಉಪಯೋಗಿಸುತ್ತಿದ್ದ ಒಂದು ಪ್ಲಾಸ್ಟಿಕ್ ಗೋಣಿಚೀಲ, 52 ಇಸ್ಪೀಟ್ ಎಲೆಗಳು, ಸದರಿ ಗೋಣಿಚೀಲದ ಮೇಲಿದ್ದ ನಗದು ಹಣ 16,400/- ರೂಗಳನ್ನು, ರಾತ್ರಿ 7.00 ಗಂಟೆಯಿಂದ 8.00 ಗಂಟೆವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತದೆ.

Leave a Reply

Your email address will not be published. Required fields are marked *