ದಿನದ ಅಪರಾಧಗಳ ಪಕ್ಷಿನೋಟ 02ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 01.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥರೆಡ್ಡಿ ಬಿನ್ ಜಯರಾಮರೆಡ್ಡಿ, ಪಿಚ್ಚಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಕೆ.ಎ.08-ಎಲ್-0174 ಹಿರೋ ಹೊಂಡಾ ಸ್ಲೇಂಡರ್ 25,000/- ರೂ ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ದಿನಾಂಕ 05.01.2021 ರಂದು ಬೆಳಿಗ್ಗೆ 9:00 ಗಂಟೆಯಗೆ ಎಂ.ಜಿ ಮಾರ್ಕೇಟ್ ಬಳಿ ಇರುವ ದ್ವಿಚಕ್ರವಾಹನಗಳ ನಿಲುಗಡೆಯ ಸ್ಥಳದಲ್ಲಿ ನಿಲ್ಲಿಸಿ, ಅಂಗಡಿಗೆ ಹೋಗಿ ಸಂಜೆ 5:00 ಗಂಟೆಯಲ್ಲಿ  ಹೋಗಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  02

 ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರದ ಶ್ರೀ. ಕಿರುಬನಂದನ್ ಬಿನ್ ಪೊನ್ನುಸ್ವಾಮಿ, ಕ್ರಿಕೆಟ್‌ ಮಾಡೆಲ್ ಹೌಸ್, ಮಾರಿಕುಪ್ಪಂ, ಕೆ.ಜಿ.ಎಫ್ ರವರ ಮಗಳಾದ ಕು.ಕೃತಿಕ ಅರಣಿ, 17 ವರ್ಷ ರವರು  ದಿನಾಂಕ  30.03.221  ರಂದು ಬೆಳಿಗ್ಗೆ  8.30 ಗಂಟೆಯಲ್ಲಿ ಮನೆಯಿಂದ  ಹೋದವರು  ಯಾವುದೋ  ಒತ್ತಡದಲ್ಲಿ  ಮಜರಾ ರಾಮಪುರ ಗ್ರಾಮದ ಕೆರೆಯಲ್ಲಿ ಬಿದ್ದು  ಅಥವಾ   ಬೇರೆ  ಯಾವುದೋ  ಕಾರಣದಿಂದ  ಮೃತಪಟ್ಟಿರಬಹುದೆಂದು ನೀಡಿರುವ ದೂರು.

 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಕೃಷ್ಣಪ್ಪ ಬಿನ್ ವೆಂಕಟಸ್ವಾಮಿ ಬೋವಿ, ಕಲ್ಲರಸನಹಳ್ಳಿ ಗ್ರಾಮ, ಮುಳಬಾಗಿಲು ತಾಲ್ಲೂಕು ರವರ ಮಗಳಾದ ನಾಗಮಣಿ, 23 ವರ್ಷ ರವರಿಗೆ ಹೊಟ್ಟೇನೋವು ಬರುತ್ತಿದ್ದು, ಚಿಕಿತ್ಸೆಯನ್ನು ಕೊಡಿಸುತ್ತಿದ್ದರೂ ಸಹ ಗುಣಮುಖವಾಗಿರುವುದಿಲ್ಲ. ದಿನಾಂಕ 31.03.2021 ರಂದು ಬೆಳಿಗ್ಗೆಯಿಂದ ನಾಗಮಣಿ ರವರಿಗೆ ಅತಿಯಾದ ಹೊಟ್ಟೇನೋವು ಬಂದಿದ್ದರಿಂದ ಹೊಟ್ಟೇನೋವಿನ ಬಾದೆ ತಾಳಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 01.04.2021 ರಂದು ಬೆಳಗಿನ ಜಾವ 5.00 ಗಂಟೆಯಲ್ಲಿ ಮನೆಯ ಪಕ್ಕದಲ್ಲಿರುವ ಹೊಂಗೆ ಮರದ ಕೊಂಬೆಗೆ ಹಗ್ಗವನ್ನು ಕಟ್ಟಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *