ದಿನದ ಅಪರಾಧಗಳ ಪಕ್ಷಿನೋಟ 02ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 01.07.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಮೋಸ/ವಂಚನೆ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಭಾಸ್ಕರ್‌, ವ್ಯವಸ್ಥಾಪಕರು, ಕೆ.ಎಸ್.ಆರ್‌‌.ಟಿ.ಸಿ ಡಿಪ್ಪೋ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ: 23-06-2020 ರಂದು ಬೆಳಿಗ್ಗೆ 10-36 ಗಂಟೆಗೆ ದೇವನಗುಂದಿ ಬಿ.ಪಿ.ಸಿ.ಎಲ್. ಡೀಸೆಲ್ ಟರ್ಮಿನಲ್ ನಿಂದ ರಮೇಶ್ ಟ್ರಾನ್ಸ್ ಪೋರ್ಟ್ ರವರ ಮೂಲಕ ಟ್ಯಾಂಕರ್ ಸಂಖ್ಯೆ ಕೆ.ಎ. 53 ಎ 8214 ರಲ್ಲಿ 12,000 ಲೀಟರ್ ಗಳ ಡೀಸಲ್ ತುಂಬಿದ್ದ ಲಾರಿಗೆ ಚಾಲಕನಾಗಿ ನಿಯೋಜನೆಗೊಂಡಿದ್ದ ಟಿ.ಸಿ ಗಿರೀಶ್ ರವರು ಟ್ಯಾಂಕರ್ ನೊಂದಿಗೆ ಕೆ.ಜಿ.ಎಫ್. ಕೆ.ಎಸ್.ಆರ್.ಟಿ.ಸಿ ಡಿಪ್ಪೋವಿಗೆ 15-40 ಗಂಟೆಗೆ ಬಂದಿದ್ದು, ಸಂಸ್ಥೆಯ ನಿಯಾಮಾವಳಿಗಳಂತೆ ದಿನಾಂಕ: 30-06-2020 ರಂದು 16-30 ರಲ್ಲಿ ಸದರಿ ಟ್ಯಾಂಕರ್ ಅನ್ನು ಚಾಲಕನ ಸಮಕ್ಷಮ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಸದರಿ ಟ್ಯಾಂಕರ್‌ನ ಮಧ್ಯದ ಕಂಪಾರ್‍ಟ್‌ಮೆಂಟ್‌ನಲ್ಲಿ ಇನ್‌ವಾಯ್ಸ್‌ಗಿಂತ  1,045 ಲೀಟರ್‌ ಡೀಸಲ್ ಕಡಿಮೆ ಇದ್ದು, ದಿನಾಂಕ: 01-07-2020 ರಂದು ಬೆಳಿಗ್ಗೆ 09-30 ಗಂಟೆಯಲ್ಲಿ ಟ್ಯಾಂಕರ್ ಚಾಲಕನಾದ ಟಿ.ವಿ ಗಿರೀಶ್ ರವರು ಲಾರಿಯನ್ನು ಘಟಕದಲ್ಲಿ ಬಿಟ್ಟು ಪರಾರಿಯಾಗಿದ್ದು, ಬಿ.ಪಿ.ಇ.ಸಿಎಲ್. ಸಂಸ್ಥೆಯವರು ತಂಡದವರೊಂದಿಗೆ ದಿನಾಂಕ: 01-07-2020 ರಂದು 13-15 ಗಂಟೆಗೆ ಕೆ.ಜಿ.ಎಫ್. ಕೆ.ಎಸ್.ಆರ್.ಟಿ.ಸಿ. ಡಿಪ್ಪೋವಿಗೆ ಬೇಟಿ ನೀಡಿ ದೂರುದಾರರ ಮತ್ತು ಅದಿಕಾರಿಗಳ ಸಮಕ್ಷಮ ಪರಿಶೀಲನೆ ಮಾಡಲಾಗಿ, 1,045 ಲೀಟರ್ ಡೀಸಲ್ ಕಡಿಮೆಯಿದ್ದು, ಇದರ ಅಂದಾಜು ಮೌಲ್ಯ ರೂ. 70,904 ಅನ್ನು ಸರ್ಕಾರದ ಅಂಗ ಸಂಸ್ಥೆಯಾದ ಕ.ರಾ.ರ.ಸಾ. ಸಂಸ್ಥೆ ಕೋಲಾರ ವಿಭಾಗದ ಕೆ.ಜಿ.ಎಫ್. ಘಟಕಕ್ಕೆ ಲಾರಿ ಚಾಲಕರಾದ ಗಿರೀಶ್‌ ಟಿ.ಸಿ. ಬಿನ್ ಚಂದರ್‌ಗೌಡ, ತಿಪ್ಪೂರು ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ರವರು ವಂಚಿಸಿರುತ್ತಾರೆ.

 

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಪ್ಪ ಬಿನ್ ಮದ್ದೂರಪ್ಪ, ಅಪ್ಪೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೂ ಮತ್ತು ಅವರ ಅಳಿಯ ಸುಬ್ರಮಣಿ ಬಿನ್ ವೆಂಕಟರಾಮಪ್ಪ, ಉಕ್ಕರಹಳ್ಳಿ ಗ್ರಾಮ ರವರಿಗೆ ಸಂಸಾರದ ವಿಚಾರದಲ್ಲಿ ಗಲಾಟೆಗಳಿದ್ದು, ದಿನಾಂಕ 30.06.2020 ರಂದು ರಾತ್ರಿ 9.00 ಗಂಟೆಯಲ್ಲಿ ದೂರುದಾರರು ಮನೆಯ ಹೊರಗಡೆ ಕುಳಿತ್ತಿದ್ದಾಗ, ಸುಬ್ರಮಣಿ ರವರು  ಬಂದು ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದ್ದು, ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *