ದಿನದ ಅಪರಾಧಗಳ ಪಕ್ಷನೋಟ 26ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:25.02.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವೆಂಕಟಲಕ್ಷ್ಮಮ್ಮ ಕೊಂ ನಾರಾಯಣಪ್ಪ, ಪರವನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:25.02.2020 ರಂದು ಬೆಳಿಗ್ಗೆ 09.00 ಗಂಟೆಯಲ್ಲಿ ಮನೆಯ ಹಿಂಬಾಗದಲ್ಲಿ  ಬೆಳದಿರುವ ಹೂಗಳನ್ನು ಕಿತ್ತುಕೊಂಡು  ಬರಲು ಹೋಗುತ್ತಿದ್ದಾಗ, ವೆಂಕಟರವಣಪ್ಪರವರು ಬಕೇಟ್ ನಲ್ಲಿ ನೀರನ್ನು ತೆಗೆದುಕೊಂಡು ದೂರುದಾರರ ಮೇಲೆ ಚೆಲ್ಲಿದ್ದು, ದೂರುದಾರರು ಕೇಳಿದ್ದಕ್ಕೆ ಕೆಟ್ಟಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ, ಕೋಲಿನಿಂದ ಹೊಡೆದು ಗಾಯ ಮಾಡಿದ್ದು, ನಾರಾಯಣಸ್ವಾಮಿ ರವರು ಕಾಲಿನಿಂದ ಒದ್ದು ನೋವುಂಟು ಮಾಡಿರುತ್ತಾರೆ.

– ರಸ್ತೆ ಅಪಘಾತಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮನ್ನೋಜಿರಾವ್‌ ಬಿನ್ ವೆಂಕೋಜಿರಾವ್‌, ಕದರಿನತ್ತ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ನಾದಿನಿ ಮಗನಾದ ಗಂಗಾಧರ ಎಂಬುವರು ದಿನಾಂಕ: 23-02-2020 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ದ್ವಿಚಕ್ರ ವಾಹನ ಸಂ: ಟಿ.ವಿ.ಎಸ್. 50 ಕೆ.ಎ08 ಜೆ-33 ರಲ್ಲಿ ಹಿಂಬದಿಯಲ್ಲಿ ತಂಗಿ ಶ್ರೀದೇವಿ ಬಾಯಿ ರವರನ್ನು ಕುಳ್ಳರಿಸಿಕೊಂಡು ಕೊಳಮೂರಿನಿಂದ ಮನೆಗೆ ಹೋಗಲು  ಕೊಳಮೂರಿನ ಸ್ಮಶಾನದ ಬಳಿ ಎಡಬದಿಯಲ್ಲಿ ಹೋಗುತ್ತಿದ್ದಾಗ, ತೊಪ್ಪನಹಳ್ಳಿ ಕಡೆಯಿಂದ ಯಾವುದೋ ಬೊಲೆರೋ ವಾಹನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗಂಗಾಧರ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೆ ಹೊರಟು ಹೋಗಿದ್ದು, ಗಂಗಾಧರ ಹಾಗೂ ಶ್ರೀದೇವಿ ಬಾಯಿ ರವರಿಗೆ ರಕ್ತಗಾಯಗಳಾಗಿರುತ್ತದೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ಹುಡುಗಿ ನಾಪತ್ತೆ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ಲಕ್ಷ್ಮಮ್ಮ ಕೊಂ ರಾಜಪ್ಪ, ಕಾರಮಂಗಲ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಕು. ರಕ್ಷಿತಾ, 21 ವರ್ಷ ರವರು ದಿನಾಂಕ 24.02.2020 ರಂದು ಬೆಳಿಗ್ಗೆ 08.00 ಗಂಟೆಗೆ ಕೋಲಾರದ ವುಮೆನ್ಸ್ ಕಾಲೇಜಿಗೆಂದು ಹೋದವಳು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

ದೂರುದಾರರಾದ ಶ್ರೀ. ಚಂದ್ರಶೇಖರ್‌ ಬಿನ್ ಮುನಿಯಪ್ಪ, ಅತ್ತಿಗಿರಿಕೊಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಕು. ಮಾಲತಿ, 20 ವರ್ಷ ರವರು ದಿನಾಂಕ 24.02.2020 ರಂದು ಸಂಜೆ 05 ಗಂಟೆಯಲ್ಲಿ ಮನೆಯಿಂದ ಹೋದವಳು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *